ಐಪಿಎಲ್ 2021: ಡೆಲ್ಲಿ vs ಕೋಲ್ಕತ್ತಾ ಪಂದ್ಯದ ಹೈಲೈಟ್ಸ್‌

ಅಹ್ಮದಾಬಾದ್: ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಸ್ಫೋಟಕ ಅರ್ಧಶತಕದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ 5ನೇ ಗೆಲುವು ದಾಖಲಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 25ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಸುಲಭ ಜಯ ಗಳಿಸಿದೆ.

ಕೋವಿಡ್-19 ಸೋಂಕಿತರಿಗೆ ನೆರವಿನ ಹಸ್ತ ಚಾಚಿದ 'ಕ್ರಿಕೆಟ್ ದೇವರು'ಕೋವಿಡ್-19 ಸೋಂಕಿತರಿಗೆ ನೆರವಿನ ಹಸ್ತ ಚಾಚಿದ 'ಕ್ರಿಕೆಟ್ ದೇವರು'

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್, 20 ಓವರ್‌ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 16.3 ಓವರ್‌ ಮುಕ್ತಾಯಕ್ಕೆ 3 ವಿಕೆಟ್ ಕಳೆದು 156 ರನ್ ಬಾರಿಸಿ ಗೆಲುವಿನ ನಗು ಚೆಲ್ಲಿತು.

ತನ್ನ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಆ್ಯಡಂ ಜಂಪಾತನ್ನ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಆ್ಯಡಂ ಜಂಪಾ

ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ಹೈಲೈಟ್ಸ್‌
* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್, 20 ಓವರ್‌ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತ್ತು.
* ಕೆಕೆಆರ್‌ ರನ್ ಕೊಡುಗೆ: ನಿತೀಶ್ ರಾಣಾ 15, ಶುಬ್ಮನ್ ಗಿಲ್ 43 (38 ಎಸೆತ), ರಾಹುಲ್ ತ್ರಿಪಾಠಿ 19, ಆ್ಯಂಡ್ರೆ ರಸೆಲ್ 45 (27), ದಿನೇಶ್ ಕಾರ್ತಿಕ್ 14, ಪ್ಯಾಟ್ ಕಮಿನ್ಸ್ 11 ರನ್‌.
* ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 16.3 ಓವರ್‌ ಮುಕ್ತಾಯಕ್ಕೆ 3 ವಿಕೆಟ್ ಕಳೆದು 156 ರನ್ ಬಾರಿಸಿತು.
* ಡೆಲ್ಲಿಯಿಂದ ರನ್ ಕೊಡುಗೆಯಿತ್ತವರು: ಪೃಥ್ವಿ ಶಾ 82 (41 ಎಸೆತ), ಶಿಖರ್ ಧವನ್ 46, ರಿಷಭ್ ಪಂತ್ 16, ಮಾರ್ಕಸ್ ಸ್ಟೋಯ್ನಿಸ್ 6 ರನ್‌.
* ಡೆಲ್ಲಿ ಬೌಲಿಂಗ್ ಸಾಧನೆ: ಅಕ್ಷರ್ ಪಟೇಲ್ 2, ಆವೇಶ್ ಖಾನ್ 1, ಲಲಿತ್ ಯಾದವ್ 2, ಮಾರ್ಕಸ್ ಸ್ಟೋಯ್ನಿಸ್ 1 ವಿಕೆಟ್‌.
* ಕೋಲ್ಕತ್ತಾ ಬೌಲರ್‌ ಸಾಧನೆ: ಪ್ಯಾಟ್ ಕಮಿನ್ಸ್ 3 ವಿಕೆಟ್‌, ಪೃಥ್ವಿ ಶಾ ಪಂದ್ಯಶ್ರೇಷ್ಠ ಪ್ರಶಸ್ತಿ.
* ಈ ಪಂದ್ಯದಲ್ಲಿ ಪೃಥ್ವಿ ಶಾ ಆರಂಭಿಕ ಓವರ್‌ನಲ್ಲೇ 6 ಬೌಂಡರಿಗಳನ್ನು ಬಾರಿಸಿ ವಿಶಿಷ್ಠ ದಾಖಲೆ ನಿರ್ಮಿಸಿದ್ದರು.
* ಕೋಲ್ಕತ್ತಾ ಯುವ ವೇಗಿ ಶಿವಂ ಮಾವಿ ಓವರ್‌ನಲ್ಲಿ ಪೃಥ್ವಿ 6 ಫೋರ್ಸ್ ಬಾರಿಸಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, April 29, 2021, 23:56 [IST]
Other articles published on Apr 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X