ಐಪಿಎಲ್ 2021: ಈ ತಂಡ ತನ್ನ ಆಟಗಾರರಿಗೆ ಬೆಂಬಲವಾಗಿ ನಿಲ್ಲುತ್ತಿಲ್ಲ ಎಂದು ದೂರಿದ ಆಶಿಶ್ ನೆಹ್ರಾ

ಐಪಿಎಲ್‌ನ ಎರಡನೇ ಚರಣದ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಭಾನುವಾರವೇ ಈ ಬಹುನಿರೀಕ್ಷಿತ ಟೂರ್ನಿಯ ಉಳಿದ ಪಮದ್ಯಗಳು ಆರಂಭವಾಗಲಿದೆ. ಬಹುತೇಕ ಎಲ್ಲಾ ತಂಡಗಳ ಆಟಗಾರರು ಕೂಡ ಈಗಾಗಲೇ ಯುಎಇ ತಲುಪಿದ್ದು ಕೆಲವೇ ಆಟಗಾರರು ಮಾತ್ರವೇ ಬಾಕಿಯಿದ್ದಾರೆ. ಈ ಸಂದರ್ಣದಲ್ಲಿ ಎಲ್ಲಾ ತಂಡಗಳ ಬಗ್ಗೆ ವಿಶ್ಲೇಷಕರು, ತಜ್ಷರು ಹಾಗೂ ಮಾಜಿ ಕ್ರಿಕೆಟಿಗರು ವಿಶ್ಲೇಷಣೆಗಳನ್ನು ಮಾಡುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಐಪಿಎಲ್‌ನ ಒಂದು ತಂಡದ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಐಪಿಎಲ್‌ನ ಒಂದು ತಂಡ ತನ್ನ ಆಟಗಾರರಿಗೆ ಬೆಂಬಲವಾಗಿ ನಿಲ್ಲುತ್ತಿಲ್ಲ ಎಂದು ಹೇಳಿದ್ದಾರೆ. ಈ ತಂಡದ ಮ್ಯಾನೇಜ್‌ಮೆಂಟ್ ತನ್ನ ಆಟಗಾರರ ಮೇಲೆ ವಿಶ್ವಾಸವನ್ನು ಹೊಂದಿಲ್ಲ. ಇದೇ ಕಾರಣದಿಂದಾಗಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಳ್ಳುತ್ತಿದೆ ಎಂದಿದ್ದಾರೆ ಆಶಿಶ್ ನೆಹ್ರಾ.

ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಹೀಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಪಂಜಾಬ್ ಕಿಂಗ್ಸ್ ತಂಡದ ಬಗ್ಗೆ. ಪಂಜಾಬ್ ಕಿಂಗ್ಸ್ ತಂಡ ತನ್ನ ಆಟಗಾರರಿಗೆ ಸಮರ್ಥ ರೀತಿಯಲ್ಲಿ ಬೆಂಬಲವನ್ನು ನಿಡುತ್ತಿಲ್ಲ ಎಂದು ಹೇಳಿದ್ದಾರೆ. ಇದೇ ಕಾರಣದಿಂದಾಗಿ ಆಟಗಾರರ ಆತ್ಮವಿಶ್ವಾಸವೂ ಕಡಿಮೆಯಾಗುತ್ತಿದ್ದು ಉತ್ತಮ ಪ್ರದರ್ಶನ ಹೊರಬರುತ್ತಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಈ ಹಿಂದಿನ ಆವೃತ್ತಿಯಲ್ಲಿ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿತ್ತು. ಈವರೆಗಿನ ಪ್ರದರ್ಶನ ನೋಡಿದರೆ ಈ ಬಾರಿಯೂ ಪ್ಲೇಆಫ್ ಹಂತಕ್ಕೇರುವ ಸಾಧ್ಯತೆ ಬಹಳ ಕಠಿಣವಾಗಿದೆ. ಮೊದಲಾರ್ಧದ ಪಂದ್ಯಗಳು ಮುಂದೂಡಿಕೆಯಾಗುವ ಹಂತದಲ್ಲಿ ಪಂಜಾಬ್ ಕಿಂಗ್ಸ್ ತಂಡ 6 ಅಂಕಗಳನ್ನು ಸಂಪಾದಿಸಿದ್ದು ಆಡಿದ 8 ಪಂದ್ಯಗಳ ಪೈಕಿ ಮೂರು ಗೆಲುವು ಹಾಗೂ ಐದು ಸೋಲು ಕಂಡಿದೆ.

ಟಿ20 ವಿಶ್ವಕಪ್: ಪಾಕಿಸ್ತಾನವನ್ನು ಮಣಿಸಲು ಭಾರತದ ಆಡುವ ಬಳಗವನ್ನು ಹೆಸರಿಸಿದ ಗಂಭೀರ್ಟಿ20 ವಿಶ್ವಕಪ್: ಪಾಕಿಸ್ತಾನವನ್ನು ಮಣಿಸಲು ಭಾರತದ ಆಡುವ ಬಳಗವನ್ನು ಹೆಸರಿಸಿದ ಗಂಭೀರ್

ಕ್ರಿಕ್ ಬಜ್ ಜೊತೆಗೆ ಮಾತನಾಡಿತ್ತಾ ಆಶಿಶ್ ನೆಹ್ರಾ ಐಪಿಎಲ್‌ನಲ್ಲಿ ಅತ್ಯಂತ ಅಸ್ಥಿರ ಪ್ರದರ್ಶನ ನೀಡುವ ತಂಡವಾಗಿದೆ ಪಂಜಾಬ್ ಕಿಂಗ್ಸ್ ಎಂದಿದ್ದಾರೆ. ಇದಕ್ಕೆ ಕಾರಣ ತಂಡದಲ್ಲಿ ಆಡುವ 11 ಆಟಗಾರರನ್ನು ಸಮರ್ಥವಾಗಿ ರೂಪಿಸುವುದೇ ತಂಡಕ್ಕೆ ಸವಾಲಾಗಿದೆ ಎಂದಿದ್ದಾರೆ ನೆಹ್ರಾ.

ಐಪಿಎಲ್ ಅಂದ್ರೆ ಅದರ ಪ್ರದರ್ಶನ ಫಲಿತಾಂಶಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅದರಲ್ಲೂ ನಾವೀಗ ಪಂಜಾಬ್ ಕಿಂಗ್ಸ್ ಬಗ್ಗೆ ಮಾತನಾಡುತ್ತಿದ್ದೇವೆ. ಒಮದು ದಿನ ಅವರು 200 ರನ್‌ಗಳನ್ನು ಬೆನ್ನಟ್ಟಿದರೆ ಮತ್ತೊಂದು ದಿನ ಬ್ಯಾಟಿಂಗ್‌ಗೆ ಉತ್ತಮ ಪಿಚ್ ಆಗಿದ್ದರೂ 140 ರನ್‌ಗಳಿಗೆ ತಮ್ಮ ಆಟವನ್ನು ಮುಗಿಸಿರುತ್ತಾರೆ. ಮತ್ತು ನನ್ನ ಪ್ರಕಾರ ಅವರು ಯಾವಾಗಲೂ ಸಾಕಷ್ಟು ಬದಲಾವಣೆಯನ್ನು ಮಾಡುತ್ತಿರುತ್ತಾರೆ. ಅವರ ಆಟಗಾರರನ್ನು ಅವರು ಬೆಂಬಲಿಸುವುದಿಲ್ಲ. ಪ್ರತಿ ಒಂದಿ ಅಥವಾ ಎರಡು ಪಂದ್ಯಗಳಂತೆ ಅವರು ತಮ್ಮ ಆಟಗಾರರನ್ನು ಬದಲಾಯಿಸುತ್ತಾರೆ. ಇದು ಖಂಡಿತವಾಗಿಯೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಸಮಸ್ಯೆ ನೀಡುತ್ತದೆ. ಹಾಗಾಗಿ ಅದನ್ನು ಅವರು ಬದಲಾಯಿಸಬೇಕು" ಎಂದಿದ್ದಾರೆ ಆಶಿಶ್ ನೆಹ್ರಾ.

ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!

ಚುಟುಕು ಕ್ರಿಕೆಟ್ ನಲ್ಲಿ ವಿರಾಟ್ ಮಾಡಿದ ದಾಖಲೆ ಸರಿಗಟ್ಟೋರು ಯಾರು? | Oneindia Kannada

ಪಂಜಾಬ್ ಮೂಲದ ಫ್ರಾಂಚೈಸಿ ಈ ಬಾರಿಯ ಟೂರ್ನಿಗೂ ಮುನ್ನ ತಂಡದ ಹೆಸರನ್ನು ಬದಲಾಯಿಸಿಕೊಂಡರೂ ರಾಹುಲ್ ಪಡೆಗೆ ಅದೃಷ್ಟ ಮಾತ್ರ ಕೈಹಿಡಿಯಲಿಲ್ಲ. ಭಾರತದಲ್ಲಿ ನಡೆದ ಮೊದಲಾರ್ಧದ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಸಂಪೂರ್ಣವಾಗಿ ಅಸ್ಥಿರ ಪ್ರದರ್ಶನವನ್ನು ನೀಡಿಕೊಂಡು ಬಂದಿದೆ. ಕೆಎಲ್ ರಾಹುಲ್ ನೇತೃತ್ವದ ತಂಡ ಈಗಾಗಲೇ 8 ಪಂದ್ಯಗಳನ್ನು ಪೂರ್ಣಗೊಳಿಸಿದ್ದು ಆರು ಪಂದ್ಯಗಳು ಬಾಕಿಯಿದೆ. ಆದರೆ ಪ್ಲೇಆಫ್ ಹಂತಕ್ಕೇರಲು ಪಂಜಾಬ್ ತಂಡಕ್ಕೆ ಕನಿಷ್ಠ 5 ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡವಿದೆ. ಎರಡನೇ ಹಂತದಲ್ಲಿ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳನ್ನು ಎದುರಿಸಲಿದೆ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 16, 2021, 17:21 [IST]
Other articles published on Sep 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X