ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂಜಾಬ್ ವಿರುದ್ಧ ರಾಜಸ್ಥಾನ್ ಗೆಲುವಿಗೆ ಸಹಾಯವಾಯ್ತಾ ಆ 2 ನೋಬಾಲ್ ಮೋಸ?; ಶುರು ಫಿಕ್ಸಿಂಗ್ ಭೂತ!

IPL 2021: Third umpire ignores 2 no balls of Mustafizur Rahman in PBKS and RR Match

ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಭಾರತದ ನೆಲದಲ್ಲಿ ಶುರುವಾಗಿ ಕೊರೊನಾ ವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮರಳಿ ಬಂದಿದ್ದು ಇದೇ ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಪುನರಾರಂಭವಾಗಿದೆ.

ಐಪಿಎಲ್ ಟ್ರೋಫಿ ಗೆಲ್ಲಬಹುದಾದ 2 ತಂಡಗಳನ್ನು ಹೆಸರಿಸಿದ ಸೆಹ್ವಾಗ್; ಬಲಿಷ್ಠ ತಂಡದ ಹೆಸರೇ ಇಲ್ಲ!ಐಪಿಎಲ್ ಟ್ರೋಫಿ ಗೆಲ್ಲಬಹುದಾದ 2 ತಂಡಗಳನ್ನು ಹೆಸರಿಸಿದ ಸೆಹ್ವಾಗ್; ಬಲಿಷ್ಠ ತಂಡದ ಹೆಸರೇ ಇಲ್ಲ!

ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾ ವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಾಗ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ನಿರಾಸೆಯುಂಟಾಗಿತ್ತು, ಹೀಗೆ ತಾತ್ಕಾಲಿಕವಾಗಿ ಸ್ಥಗಿತವಾಗಿರುವ ಈ ಬಾರಿಯ ಐಪಿಎಲ್ ಟೂರ್ನಿ ಯಾವಾಗ ಮುಂದುವರಿಯಲಿದೆ ಎಂದು ಕಾಯುತ್ತಿದ್ದರು. ಹೀಗೆ ಟೂರ್ನಿಯನ್ನು ವೀಕ್ಷಿಸಲು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮಾಡದ ಬಿಸಿಸಿಐ ಸದ್ಯ ಯುಎಇಯಲ್ಲಿ ಟೂರ್ನಿಯನ್ನು ಮುಂದುವರೆಸುತ್ತಿದ್ದು ಈಗಾಗಲೇ ನಾಲ್ಕು ಪಂದ್ಯಗಳು ದ್ವಿತೀಯ ಭಾಗದಲ್ಲಿ ಮುಗಿದಿವೆ.

ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯ ದ್ವಿತೀಯ ಭಾಗದ ಮೊದಲ 4 ಪಂದ್ಯಗಳು ಮುಗಿಸುವಷ್ಟೊತ್ತಿಗೆ ಟೂರ್ನಿಯ ಕುರಿತಾಗಿ ಮತ್ತೊಂದಷ್ಟು ನಕಾರಾತ್ಮಕ ವಿಷಯಗಳು ಹರಿದಾಡುತ್ತಿವೆ. ಹೌದು ಒಂದೆಡೆ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಕೆಲ ಆಟಗಾರರಲ್ಲಿ ಕೊರೋನಾವೈರಸ್ ಕಾಣಿಸಿಕೊಂಡಿದ್ದರೆ, ಮತ್ತೊಂದೆಡೆ ಈ ಪಂದ್ಯ ನಡೆಯುವುದಕ್ಕೂ ಮುನ್ನ ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಆರೋಪ ಎದ್ದಿದೆ.

ಮತ್ತದೇ ಕಥೆ; ರಾಜಸ್ಥಾನ್ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ತಿಳಿಸಿದ ಕೆಎಲ್ ರಾಹುಲ್ಮತ್ತದೇ ಕಥೆ; ರಾಜಸ್ಥಾನ್ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ತಿಳಿಸಿದ ಕೆಎಲ್ ರಾಹುಲ್

ಹೀಗೆ ಯಶಸ್ವಿಯಾಗಿ ಮುಂದುವರಿಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇದೀಗ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಹಿನ್ನೆಡೆಯುನ್ನುಂಟುಮಾಡುವಂತಹ ವಿದ್ಯಮಾನಗಳು ಜರುಗುತ್ತಿದ್ದು ಆ ಪಂದ್ಯದ ಕುರಿತಾಗಿ ಈ ಕೆಳಕಂಡ ಆರೋಪಗಳು ಕೇಳಿಬರುತ್ತಿವೆ.

19ನೇ ಓವರ್‌ನ 2 ನೋಬಾಲ್ ಮೋಸ?

19ನೇ ಓವರ್‌ನ 2 ನೋಬಾಲ್ ಮೋಸ?

ಸೆಪ್ಟೆಂಬರ್ 21ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಪ್ರಸ್ತುತ ಐಪಿಎಲ್ ಟೂರ್ನಿಯ 32ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 185 ರನ್ ಕಲೆಹಾಕಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ 186 ರನ್‌ಗಳ ಗುರಿಯನ್ನು ನೀಡಿತ್ತು. ಹೀಗೆ ರಾಜಸ್ಥಾನ್ ರಾಯಲ್ಸ್ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಲು ಮುಂದಾದ ಪಂಜಾಬ್ ಕಿಂಗ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 120 ರನ್ ಗಳಿಸಿ ಇನ್ನೂ ಒಂದೆರಡು ಓವರ್ ಬಾಕಿ ಇರುವಾಗಲೇ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ಮೂಡಿಸಿತ್ತು. ಆದರೆ ಪಂದ್ಯದ ಕೊನೆಯ 2 ಓವರ್‌ಗಳು ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟವು. ಕೊನೆಯ 12 ಎಸೆತಗಳಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 8 ರನ್ ಬೇಕಿತ್ತು, ಈ ಸಮಯದಲ್ಲಿ 19ನೇ ಓವರ್ ಬೌಲಿಂಗ್ ಮಾಡಿದ ಮುಸ್ತಫಿಜರ್ ರಹಮಾನ್ 18.2 ಹಾಗೂ 18.3 ಎಸೆತಗಳನ್ನು ನೋಬಾಲ್ ಹಾಕಿದ್ದರು, ಆದರೂ ಸಹ ತೀರ್ಪುದಾರರು ಈ 2 ಎಸೆತಗಳನ್ನು ನೋಬಾಲ್ ಎಂದು ಪರಿಗಣಿಸಲಿಲ್ಲ ಎಂಬ ಗಾಢವಾದ ಆರೋಪ ಇದೀಗ ಕೇಳಿಬಂದಿದೆ. ಹೀಗೆ ಮುಸ್ತಫಿಜರ್ ರಹಮಾನ್ 19ನೇ ಓವರ್‌ನಲ್ಲಿ ಕೇವಲ 4 ರನ್ ನೀಡಿದರು. ಹೀಗಾಗಿ ಅಂತಿಮ ಓವರ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 4 ರನ್‌ಗಳ ಅಗತ್ಯವಿದ್ದಾಗ ಕಾರ್ತಿಕ್ ತ್ಯಾಗಿ ಉತ್ತಮ ಬೌಲಿಂಗ್ ಮಾಡಿ ಆ ಓವರ್‌ನಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆದದ್ದರಿಂದ ರಾಜಸ್ಥಾನ್ ರಾಯಲ್ಸ್ ಸೋಲುವ ಪಂದ್ಯವನ್ನು ಅಂತಿಮ ಹಂತದಲ್ಲಿ 2 ರನ್‌ಗಳಿಂದ ಗೆದ್ದು ಬೀಗಿತು. ಹೀಗೆ ರಾಜಸ್ಥಾನ್ ಕೊನೆಯ ಹಂತದಲ್ಲಿ ಗೆಲುವು ಸಾಧಿಸಿದ ನಂತರ 19ನೇ ಓವರ್‌ನಲ್ಲಿ ಮುಸ್ತಫಿಜರ್ ರಹಮಾನ್ ಎಸೆದ 2 ನೋಬಾಲ್ ತೀರ್ಪನ್ನು ಯಾಕೆ ನೀಡಲಿಲ್ಲ ಎಂಬ ಪ್ರಶ್ನೆ ಇದೀಗ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.

ಪಂಜಾಬ್ ಆಟಗಾರ ದೀಪಕ್ ಹೂಡಾ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!

ಪಂಜಾಬ್ ಆಟಗಾರ ದೀಪಕ್ ಹೂಡಾ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!

ಒಂದೆಡೆ 19ನೇ ಓವರ್‌ನಲ್ಲಿ 2 ನೋಬಾಲ್ ಎಸೆತಗಳನ್ನು ಪರಿಗಣಿಸದೆ ಇರುವುದು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರೆ ಮತ್ತೊಂದಡೆ ಪಂಜಾಬ್ ಕಿಂಗ್ಸ್ ತಂಡದ ಆಟಗಾರ ದೀಪಕ್ ಹೂಡಾ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಗಂಭೀರ ಆರೋಪ ಕೇಳಿಬಂದಿದೆ. ದೀಪಕ್ ಹೂಡಾ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬರಲು ಕಾರಣಗಳೇನೆಂದರೆ ರಾಜಸ್ಥಾನ್ ವಿರುದ್ಧದ ಪಂದ್ಯ ಶುರುವಾಗುವ ಮುನ್ನ ಅಂದರೆ ಮಧ್ಯಾಹ್ನ ಸುಮಾರು 2 ಗಂಟೆ ಸಮಯಕ್ಕೆ ದೀಪಕ್ ಹೂಡಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ 'ಹಿಯರ್ ವಿ ಗೋ' ( ನಾವು ಪಂದ್ಯವನ್ನಾಡಲು ಸಿದ್ಧ ) ಎಂದು ಬರೆದುಕೊಳ್ಳುವುದರ ಮೂಲಕ ಹೆಲ್ಮೆಟ್ ಧರಿಸಿ ತಯಾರಾಗಿರುವ ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಮೂಲಕ ಆಡುವ ಬಳಗದಲ್ಲಿ ತಾನು ಸ್ಥಾನ ಪಡೆದುಕೊಂಡಿರುವುದನ್ನು ಪಂದ್ಯ ಆರಂಭವಾಗುವ ಗಂಟೆಗಳ ಮುನ್ನವೇ ಜಗತ್ತಿಗೆ ತಿಳಿಸುವಂತಹ ಕೆಲಸವನ್ನು ದೀಪ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೆ 19.5ನೇ ಓವರ್‌ನಲ್ಲಿ ಯಾವುದೇ ರನ್ ಬಾರಿಸದೇ 2 ಎಸೆತಗಳನ್ನು ಎದುರಿಸಿ ಔಟ್ ಆದ ದೀಪಕ್ ಹೂಡಾ ತಂಡವನ್ನು ಗೆಲ್ಲಿಸುವ ಯಾವುದೇ ಪ್ರಯತ್ನವನ್ನು ಕೂಡ ಮಾಡಲಿಲ್ಲ. ಹೀಗಾಗಿ ದೀಪಕ್ ಹೂಡಾ ಕುರಿತು ಇದೀಗ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು ಆ್ಯಂಟಿ ಕರಪ್ಷನ್ ಯೂನಿಟ್ ಶೀಘ್ರದಲ್ಲಿಯೇ ದೀಪಕ್ ಹೂಡ ಕುರಿತಾಗಿ ವಿಚಾರಣೆ ನಡೆಸಲಿದೆ.

Hetmyer ಅವರ ಅವತಾರದ ಬಗ್ಗೆ ಜನಗಳ ಅಭಿಪ್ರಾಯ | Oneindia Kannada
ಕೊನೆಯ ಓವರ್‌ನಲ್ಲಿ 8 ವಿಕೆಟ್ ಕೈನಲ್ಲಿದ್ದರೂ ಸೋತದ್ದು ಆಶ್ಚರ್ಯಕರ

ಕೊನೆಯ ಓವರ್‌ನಲ್ಲಿ 8 ವಿಕೆಟ್ ಕೈನಲ್ಲಿದ್ದರೂ ಸೋತದ್ದು ಆಶ್ಚರ್ಯಕರ

ಮೊದಲೇ ಹೇಳಿದಂತೆ ಈ ಪಂದ್ಯದ ಅಂತಿಮ ಓವರ್‌ನಲ್ಲಿ ಅಂದರೆ 6 ಎಸೆತಗಳಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 4 ರನ್‌ಗಳ ಅಗತ್ಯವಿತ್ತು. ಆ ಸಂದರ್ಭದಲ್ಲಿ ಬೌಲಿಂಗ್ ಮಾಡಲು ಕಾರ್ತಿಕ್ ತ್ಯಾಗಿ ಬಂದಿದ್ದರು, ಅಲ್ಲಿಯವರೆಗೂ ಪಂದ್ಯದಲ್ಲಿ ಒಟ್ಟು 3 ಓವರ್‌ಗಳನ್ನು ಮಾಡಿದ್ದ ಕಾರ್ತಿಕ್ ತ್ಯಾಗಿ ಯಾವುದೇ ವಿಕೆಟ್ ಪಡೆದುಕೊಳ್ಳದೇ 27 ರನ್‌ಗಳನ್ನು ನೀಡಿ ದುಬಾರಿಯಾಗಿದ್ದರು. ಹೀಗೆ ತಾನು ಮಾಡಿದ ಮೊದಲ 3 ಓವರ್‌ಗಳಲ್ಲಿ ಯಾವುದೇ ವಿಕೆಟ್ ಪಡೆಯದೇ 27 ರನ್ ನೀಡಿದ್ದ ಕಾರ್ತಿಕ್ ತ್ಯಾಗಿ ಅಂತಿಮ ಓವರ್‌ನಲ್ಲಿ 2 ವಿಕೆಟ್ ಪಡೆದು ಕೇವಲ ಒಂದು ರನ್ ನೀಡಿದ್ದು ರೋಚಕವಾಗಿತ್ತು ಮತ್ತೆ ಅಷ್ಟೇ ಆಶ್ಚರ್ಯಕರವಾಗಿಯೂ ಇತ್ತು. ಯಾಕೆಂದರೆ ಪಂಜಾಬ್ ಕಿಂಗ್ಸ್ ಬಳಿ ಇನ್ನೂ 8 ವಿಕೆಟ್‍ಗಳು ಕೈನಲ್ಲಿದ್ದವು, ಮೈದಾನದಲ್ಲಿ ನುರಿತ ಬ್ಯಾಟ್ಸ್‌ಮನ್‌ಗಳಿದ್ದರು, ಆದರೂ ಸಹ ಪಂದ್ಯ ಟಾಸ್ ಸೋತದ್ದು ಎಲ್ಲರಲ್ಲಿಯೂ ಆಶ್ಚರ್ಯವನ್ನುಂಟುಮಾಡಿದ್ದಂತೂ ನಿಜ. ಅದರಲ್ಲಿಯೂ ಈ ಓವರ್‌ನ ಐದನೇ ಎಸೆತದಲ್ಲಿ ದೀಪಕ್ ಹೂಡಾ ವಿಕೆಟ್ ಒಪ್ಪಿಸಿದ್ದು ಸದ್ಯ ದೊಡ್ಡಮಟ್ಟದ ಅನುಮಾನಕ್ಕೆ ಕಾರಣವಾಗಿದೆ.

Story first published: Thursday, September 23, 2021, 9:46 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X