ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022 Points Table: 4ನೇ ಸ್ಥಾನಕ್ಕೇರಿದ RCB; ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಲಿಸ್ಟ್

IPL 2022: Altered Points Table, Orange Cap and Purple Cap List After RCB Win Against GT

ಐಪಿಎಲ್ 2022ರ 15ನೇ ಋತುವಿನಲ್ಲಿ ತಮ್ಮ ಪ್ಲೇ-ಆಫ್ ಅರ್ಹತೆಯ ಭರವಸೆಯನ್ನು ಜೀವಂತವಾಗಿರಿಸಲು ಆರ್‌ಸಿಬಿ ತಂಡ ಗುರುವಾರ ಗುಜರಾತ್ ಟೈಟನ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಇದೇ ವೇಳೆ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿ 73 ರನ್‌ಗಳ ಬ್ಯಾಟಿಂಗ್‌ನ ಮಾಸ್ಟರ್‌ಕ್ಲಾಸ್ ಪ್ರದರ್ಶಿಸಿದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಆರ್‌ಸಿಬಿಗೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಹೀಗಾಗಿ ಮೊದಲು ಬೌಲಿಂಗ್ ಮಾಡಿದ ಆರ್‌ಸಿಬಿ ಬೌಲರ್‌ಗಳು ಗುಜರಾತ್ ಟೈಟನ್ಸ್ ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಲವನ್ನು ಮುರಿದರು.

ಫಾರ್ಮ್‌ಗೆ ಮರಳಿದ ರನ್ ಮಷಿನ್ ವಿರಾಟ್ ಕೊಹ್ಲಿ

ಫಾರ್ಮ್‌ಗೆ ಮರಳಿದ ರನ್ ಮಷಿನ್ ವಿರಾಟ್ ಕೊಹ್ಲಿ

ಉತ್ತಮ ಆರಂಭವನ್ನು ಪಡೆಯುವಲ್ಲಿ ವಿಫಲವಾದ ಗುಜರಾತ್ ಟೈಟನ್ಸ್ ತಂಡಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು. ಹಾರ್ದಿಕ್ ಪಾಂಡ್ಯ ಅವರ 47 ಎಸೆತಗಳಲ್ಲಿ 62 ರನ್ ಸಹಾಯದಿಂದ ಆರ್‌ಸಿಬಿಗೆ 169 ರನ್‌ಗಳ ಉತ್ತಮ ಗುರಿ ನೀಡಿದರು.

ನಂತರ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ, ಆರಂಭಿಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಟೈಟನ್ಸ್ ವಿರುದ್ಧ 73 ರನ್ ಗಳಿಸಿ ಫಾರ್ಮ್‌ಗೆ ಮರಳಿದರು, ಜೊತೆಗೆ ನಾಯಕ ಫಾಫ್ ಡು ಪ್ಲೆಸಿಸ್ 44 ರನ್ ಗಳಿಸಿದರು. ಕೊನೆಯಲ್ಲಿ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 40 ರನ್ ಗಳಿಸಿದರು ಮತ್ತು ಟೇಬಲ್-ಟಾಪ್ಪರ್‌ಗಳ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವನ್ನು ಗೆದ್ದು ಬೀಗಿದರು.

IPL 2022ರ ಪಾಯಿಂಟ್ಸ್ ಟೇಬಲ್

IPL 2022ರ ಪಾಯಿಂಟ್ಸ್ ಟೇಬಲ್

ಗುಜರಾತ್ ಟೈಟನ್ಸ್ 14 ಪಂದ್ಯಗಳಿಂದ 10 ಗೆಲುವು ಸಾಧಿಸಿ 20 ಅಂಕಗಳನ್ನು ಗಳಿಸಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ನಂತರ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2022ರ ಅಂಕಗಳ ಪಟ್ಟಿಯಲ್ಲಿ 18 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಎರಡು ಹೊಸ ಫ್ರಾಂಚೈಸಿಗಳು ಮಾತ್ರ ಪ್ಲೇಆಫ್ ಅರ್ಹತೆ ಪಡೆದಿವೆ.

ರಾಜಸ್ಥಾನ ರಾಯಲ್ಸ್ ಸದ್ಯ ಮೂರನೇ (16) ಸ್ಥಾನದಲ್ಲಿದ್ದರೆ, ಗುಜರಾತ್ ಟೈಟನ್ಸ್ ವಿರುದ್ಧ ಗೆಲುವಿನೊಂದಿಗೆ ಆರ್‌ಸಿಬಿ (16) ಪ್ರಸ್ತುತ ನಾಲ್ಕನೇ ಸ್ಥಾನವನ್ನು ಮರಳಿ ಪಡೆದುಕೊಂಡಿದೆ. ಇವರ ಹಿಂದೆಯೇ 13 ಪಂದ್ಯಗಳಿಂದ ಏಳು ಗೆಲುವುಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಐದನೇ ಸ್ಥಾನದಲ್ಲಿದೆ.

ಕೆಕೆಆರ್, ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಕ್ರಮವಾಗಿ ಆರು, ಏಳನೇ ಮತ್ತು ಎಂಟನೇ ಸ್ಥಾನದಲ್ಲಿದ್ದರೆ, ಮಾಜಿ ಚಾಂಪಿಯನ್‌ಗಳಾದ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ಕ್ರಮವಾಗಿ 9 ಮತ್ತು 10ನೇ ಸ್ಥಾನದಲ್ಲಿ ಅಂಕಪಟ್ಟಿಯ ಕೆಳಭಾಗದಲ್ಲಿವೆ.

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಯಾರು ಮುಂದೆ

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಯಾರು ಮುಂದೆ

ಪಂಜಾಬ್ ಕಿಂಗ್ಸ್ ತಂಡದ ಜೋಸ್ ಬಟ್ಲರ್ 13 ಪಂದ್ಯಗಳಿಂದ 627 ರನ್ ಗಳಿಸಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ 14 ಪಂದ್ಯಗಳಿಂದ 537 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಲಕ್ನೋ ತಂಡದ ಕ್ವಿಂಟನ್ ಡಿ ಕಾಕ್ 14 ಪಂದ್ಯಗಳಿಂದ 502 ರನ್ ಗಳಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಗುರುವಾರ ಗುಜರಾತ್ ವಿರುದ್ಧ 44 ರನ್ ಗಳಿಸಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಡೇವಿಡ್ ವಾರ್ನರ್ 427 ರನ್‌ಗಳೊಂದಿಗೆ ಟಾಪ್ 5ನೇ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ ನೀಡಿದ ಈ ಹೇಳಿಕೆಯಿಂದ ರೊಚ್ಚಿಗೆದ್ದ RCB ಅಭಿಮಾನಿಗಳು | Oneindia Kannada
ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾರು ಮುನ್ನಡೆ

ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾರು ಮುನ್ನಡೆ

ಆರ್‌ಸಿಬಿಯ ವನಿಂದು ಹಸರಂಗಾ ಮತ್ತು ಯುಜ್ವೇಂದ್ರ ಚಹಾಲ್ 24 ವಿಕೆಟ್‌ಗಳೊಂದಿಗೆ ಸಮಬಲದಲ್ಲಿದ್ದಾರೆ. ಆದರೆ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗಾ ಉತ್ತಮ ಎಕಾನಮಿ ಕಾರಣದಿಂದಾಗಿ ಒಂದನೇ ಸ್ಥಾನದಲ್ಲಿದರೆ, ಯುಜ್ವೇಂದ್ರ ಚಹಲ್ ಎರಡನೇ ಸ್ಥಾನಲ್ಲಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡದ ಕಗಿಸೊ ರಬಾಡ ಮೂರನೇ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ ಪ್ರಸ್ತುತ 21 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಕುಲದೀಪ್ ಯಾದವ್ ಟಾಪ್ 5ನೇ ಸ್ಥಾನದಲ್ಲಿದ್ದಾರೆ.

Story first published: Friday, May 20, 2022, 10:39 [IST]
Other articles published on May 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X