ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

DC vs SRH: ಅರ್ಧ ಶತಕ ಬಾರಿಸಿ T20ಯಲ್ಲಿ ಕ್ರಿಸ್ ಗೇಲ್ ದಾಖಲೆ ಮುರಿದ ಡೇವಿಡ್ ವಾರ್ನರ್

ದೆಹಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಓಪನಿಂಗ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಗುರುವಾರ ರಾತ್ರಿ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಬಾರಿಸಿ ಸಂಭ್ರಮಿಸಿದರು.

ಕಡಿಮೆ ಸಮಯದಲ್ಲಿ ತಮ್ಮ 89ನೇ ಅರ್ಧಶತಕವನ್ನು ಬಾರಿಸುವ ಮೂಲಕ ಟಿ20ಯಲ್ಲಿ ಅತಿ ಹೆಚ್ಚು ಅರ್ಧಶತಕಗಳ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದರು. ಡೇವಿಡ್ ವಾರ್ನರ್ ಈಗ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ಮೊದಲಿಗರಾಗಿದ್ದಾರೆ.

IPL 2022: DC vs SRH; David Warner Breaks Chris Gayles Record For Most Half Centuries In T20 Cricket

ಡೇವಿಡ್ ವಾರ್ನರ್ ಅವರು ಭುವನೇಶ್ವರ್ ಕುಮಾರ್ ಅವರ ಎರಡನೇ ಓವರ್‌ನಲ್ಲಿ ಕೇವಲ ಒಂದು ಸಿಂಗಲ್ ಗಳಿಸಿ ನಿಧಾನವಾಗಿ ಇನ್ನಿಂಗ್ಸ್ ಪ್ರಾರಂಭಿಸಿದರು. ನಂತರ ಬ್ಯಾಟಿಂಗ್ ವೇಗ ಹೆಚ್ಚಿಸಿ ಐಪಿಎಲ್ 2022ರಲ್ಲಿ ನಾಲ್ಕನೇ ಅರ್ಧಶತಕವನ್ನು ಕೇವಲ 34 ಎಸೆತಗಳಲ್ಲಿ ಗಳಿಸಿದ ವಾರ್ನರ್ ಅವರನ್ನು ಯಾರೂ ತಡೆಯಲಾಗಲಿಲ್ಲ.

ಡಿಸಿ vs ಎಸ್‌ಆರ್‌ಹೆಚ್: ವಾರ್ನರ್, ಪೋವೆಲ್ ಅಬ್ಬರ: ಹೈದರಾಬಾದ್‌ಗೆ ಬೃಹತ್ ಗುರಿ ನೀಡಿದ ಡೆಲ್ಲಿಡಿಸಿ vs ಎಸ್‌ಆರ್‌ಹೆಚ್: ವಾರ್ನರ್, ಪೋವೆಲ್ ಅಬ್ಬರ: ಹೈದರಾಬಾದ್‌ಗೆ ಬೃಹತ್ ಗುರಿ ನೀಡಿದ ಡೆಲ್ಲಿ

ಟಿ20ಯಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದವರು
89 - ಡೇವಿಡ್ ವಾರ್ನರ್*
88 - ಕ್ರಿಸ್ ಗೇಲ್
76 - ವಿರಾಟ್ ಕೊಹ್ಲಿ*

ಇನ್ನು ಆಸ್ಟ್ರೇಲಿಯದ ಆರನ್ ಫಿಂಚ್ ಅವರು ಟಿ20 ಮಾದರಿಯಲ್ಲಿ 70 ಅರ್ಧಶತಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಹೆಸರಿನಲ್ಲಿ 69 ಅರ್ಧಶತಕಗಳಿದ್ದು, ಐದನೇ ಸ್ಥಾನದಲ್ಲಿದ್ದಾರೆ.

IPL 2022: DC vs SRH; David Warner Breaks Chris Gayles Record For Most Half Centuries In T20 Cricket

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಪಂದ್ಯ 50ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ತನ್ನ ಮಾಜಿ ಫ್ರಾಂಚೈಸಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಾರ್ನರ್ 2013ರ ನಂತರ ಮೊದಲ ಬಾರಿಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದರು.

ಬ್ಯಾಟಿಂಗ್ ಕ್ರಮಾಂಕದ ಅಗ್ರಸ್ಥಾನದಲ್ಲಿರುವ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಇಲ್ಲಿಯವರೆಗೆ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. IPL 2022 ರಲ್ಲಿ ಅವರು 50ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಸ್ಕೋರ್ ಮಾಡಿದ್ದಾರೆ ಮತ್ತು ಸ್ಟ್ರೈಕ್-ರೇಟ್ 150 ಮಾರ್ಕ್ ಅನ್ನು ಮೀರಿದೆ.

2014ರಿಂದ 2021 ರವರೆಗೆ ಸನ್‌ರೈಸರ್ಸ್ ಹೈದರಾಬಾದ್ ಡ್ರೆಸ್ಸಿಂಗ್ ರೂಂನಲ್ಲಿ ಡೇವಿಡ್ ವಾರ್ನರ್ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಆಸ್ಟ್ರೇಲಿಯನ್ ಓಪನರ್ ಸನ್‌ರೈಸರ್ಸ್ ಅನ್ನು 2016ರಲ್ಲಿ ತಮ್ಮ ಏಕಾಂಗಿ ಹೋರಾಟದಿಂದ ಪ್ರಶಸ್ತಿವರೆಗೂ ಕೊಂಡೊಯ್ದಿದ್ದರು.

ಆದಾಗ್ಯೂ, ಡೇವಿಡ್ ವಾರ್ನರ್ ಅವರ ಉತ್ತಮ ಪ್ರದರ್ಶನವು ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಮೇಲೇಳಲು ಸಾಧ್ಯವಾಗಲಿಲ್ಲ. ಏಕೆಂದರೆ ಪಾಯಿಂಟ್ ಟೇಬಲ್‌ನ ಕೆಳಗಿನ ಅರ್ಧಭಾಗದಲ್ಲಿದ್ದಾರೆ.

ಗುಜರಾತ್ ಟೈಟನ್ಸ್ (ಜಿಟಿ) ಇದುವರೆಗೆ 10 ಪಂದ್ಯಗಳಿಂದ 8 ಗೆಲುವಿನ ದಾಖಲೆಯೊಂದಿಗೆ ಪ್ರಸ್ತುತ ಲೀಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. 10 ಪಂದ್ಯಗಳಿಂದ 7 ಗೆಲುವುಗಳೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ನಂತರದ ಸ್ಥಾನದಲ್ಲಿದೆ.

Story first published: Thursday, May 5, 2022, 22:27 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X