ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೆ ಈತ ಬೇಕೇ ಬೇಕು: ಹರ್ಭಜನ್ ಸಿಂಗ್ ಹೇಳಿದ ಆ ಆಟಗಾರ ಯಾರು?

IPL 2022: Harbhajan Singh said Dinesh Karthik should included in the ICC T20 World Cup squad

ಈ ಬಾರಿಯ ಐಪಿಎಲ್‌ನಲ್ಲಿ ಆಟಗಾರರ ಪ್ರದರ್ಶನ ಮುಂಬರುವ ಟಿ20 ವಿಶ್ವಕಪ್‌ನ ದೃಷ್ಟಿಯಿಂದ ಬಹಳಷ್ಟು ಪ್ರಮುಖ ಪಾತ್ರವನ್ನು ವಹಿಸಿಕೊಳ್ಳುತ್ತದೆ. ಅದರಲ್ಲೂ ಕೆಲ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದು ತಂಡದ ಪ್ರಮುಖ ಆಟಗಾರರಿಗೆ ಪೈಪೋಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅನುಭವಿ ಆಟಗಾರನೋರ್ವನ ಪ್ರದರ್ಶನ ಎಲ್ಲರ ಗಮನಸೆಳೆಯುತ್ತಿದ್ದು ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಈತನಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಜೋರಾಗಿ ಕೇಳಿ ಬರುತ್ತಿದೆ. ಈ ಅಭಿಪ್ರಾಯಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ದನಿಗೂಡಿಸಿದ್ದಾರೆ.

ಆ ಅನುಭವಿ ಆಟಗಾರ ಬೇರೆ ಯಾರೂ ಅಲ್ಲ. ರಾಯಲ್ ಚಾಲೆಂಜರ್ಸ್ ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್. ಆರ್‌ಸಿಬಿ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಡಿಕೆ ಪ್ರತಿ ಪಂದ್ಯದಲ್ಲಿಯೂ ಸ್ಪೋಟಕ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದಾರೆ. ಆರ್‌ಸಿಬಿ ತಂಡದ ಈ ಆಟಗಾರನ ಪ್ರದರ್ಶನವನ್ನು ನೋಡಿ ಹರ್ಭಜನ್ ಸಿಂಗ್ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನಾನು ಆಯ್ಕೆಗಾರನಾಗಿದ್ದರೆ ಡಿಕೆಗೆ ಅವಕಾಶ ನೀಡುತ್ತಿದ್ದೆ

ನಾನು ಆಯ್ಕೆಗಾರನಾಗಿದ್ದರೆ ಡಿಕೆಗೆ ಅವಕಾಶ ನೀಡುತ್ತಿದ್ದೆ

ಈ ಬಾರಿಯ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮಾಡುತ್ತಿರುವ ರೀತಿಗೆ ಹರ್ಭಜನ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತಾನು ಆಯ್ಕೆಗಾರನಾಗಿದ್ದರೆ ದಿನೇಶ್ ಕಾರ್ತಿಕ್‌ಗೆ ಈ ಬಾರಿಯ ವಿಶ್ವಕಪ್‌ನ ತಂಡದಲ್ಲಿ ಅವಕಾಶವನ್ನು ನೀಡುತ್ತಿದ್ದೆ ಎಂಬ ಹೇಳಿಕೊಂಡಿದ್ದಾರೆ.

"ಆರ್‌ಸಿಬಿ ತಂಡದ ಪರವಾಗಿ ದಿನೇಶ್ ಕಾರ್ತಿಕ್ ಅದ್ಭುತವಾಗಿ ಆಡುತ್ತಿದ್ದಾರೆ. ಆಫ್‌ಸೈಡ್‌ಗಿಂತ ಅದ್ಭುತವಾಗಿ ಲೆಗ್‌ಸೈಡ್‌ನಲ್ಲಿ ಅವರು ಬ್ಯಾಟ್ ಬೀಸುತ್ತಾರೆ. ಒಂದು ರನ್‌ಗಳನ್ನು ಕೂಡ ಅದ್ಭುತವಾಗಿ ತೆಗೆದುಕೊಳ್ಳುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ತನ್ನ ಆಟವನ್ನು ಅವರು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಹರ್ಭಜನ್ ಸಿಂಗ್.

ಈ ಆವೃತ್ತಿಯ ಅದ್ಭುತ ಫಿನಿಷರ್

ಈ ಆವೃತ್ತಿಯ ಅದ್ಭುತ ಫಿನಿಷರ್

ಕೊನೆಯ ಆಯ್ಕೆ ಎಂಬಂತೆ ಯಾವಾಗ ಅವರು ತಮ್ಮ ಕಣಕ್ಕೆ ಇಳಿಯುತ್ತಾರೋ ಆಗ ಅವರು ಖಂಡಿತವಾಗಿಯೂ ಪಂದ್ಯವನ್ನು ಫಿನಿಷ್ ಮಾಡುತ್ತಾರೆ. ನನ್ನ ಪ್ರಕಾರ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತವಾಗಿ ಫಿನಿಷರ್ ಕಾರ್ಯವನ್ನು ನಿರ್ವಹಿಸಿದವರಲ್ಲಿ ದಿನೇಶ್ ಕಾರ್ತಿಕ್ ಅವರೇ ಪ್ರಮುಖರು" ಎಂದಿದ್ದಾರೆ ಹರ್ಭಜನ್ ಸಿಂಗ್.

ಟಿ20 ವಿಶ್ವಕಪ್‌ಗೆ ಡಿಕೆ ಅಗತ್ಯ

ಟಿ20 ವಿಶ್ವಕಪ್‌ಗೆ ಡಿಕೆ ಅಗತ್ಯ

"ನಾನು ಆಯ್ಕೆಗಾರನಾಗಿದ್ದರೆ ನಾನು ದಿನೇಶ್ ಕಾರ್ತಿಕ್‌ಗೆ ಖಂಡಿತವಾಗಿಯೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಆಯ್ಕೆ ಮಾಡುತ್ತಿದ್ದೆ. ಯಾಕೆಂದರೆ ಆತ ಅದಕ್ಕೆ ಅರ್ಹನಾಗಿದ್ದಾರೆ. ಭಾರತ ತಂಡಕ್ಕೆ ಅತ್ಯುತ್ತಮ ಫಿನಿಷರ್‌ನ ಅಗತ್ಯವಿದೆ ಎಂದಿದ್ದರೆ ಅದು ಖಂಡಿತವಾಗಿಯೂ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಅವರೇ ಆಗಿರುತ್ತಾರೆ. ಈ ಆಟಗಾರರು ತಂಡವನ್ನು ಬಲಿಷ್ಠಗೊಳಿಸುತ್ತಾರೆ" ಎಂದಿದ್ದಾರೆ ಹರ್ಭಜನ್ ಸಿಂಗ್.

ಭಾರತಕ್ಕೆ ಪಾಕಿಸ್ತಾನ ಮಾಜಿ ಆಟಗಾರನ ಸವಾಲ್ !! | Oneindia Kannada
 ಪ್ಲೇಆಫ್ ಮೇಲೆ ಆರ್‌ಸಿಬಿ ಕಣ್ಣು

ಪ್ಲೇಆಫ್ ಮೇಲೆ ಆರ್‌ಸಿಬಿ ಕಣ್ಣು

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ 12 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿಕೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ 13ನೇ ಪಂದ್ಯವನ್ನಾಡಲಿದ್ದು ಈ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿಯ ಪ್ಲೇಆಫ್ ಪ್ರವೇಶದ ಹಾದಿ ಸುಗಮವಾಗಲಿದೆ. ಆದರೆ ಸೋತರೆ ಅಷ್ಟೇ ಕಠಿಣವಾಗಲಿದೆ.

ಆರ್‌ಸಿಬಿ ಸಂಪೂರ್ಣ ಬಳಗ: ಫಾಫ್ ಡು ಪ್ಲೆಸಿಸ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಜತ್ ಪಾಟಿದಾರ್, ಅನುಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫೇನ್ ರುದರ್‌ಫೋರ್ಡ್, ಚಾಮ ವಿ ಮಿಲಿಂದ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಜೋಶ್ ಹೇಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್

ಪಂಜಾಬ್ ಕಿಂಗ್ಸ್: ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಾಹರ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಪ್ರಭಾಸಿಮ್ರಾನ್ ಸಿಂಗ್, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಒಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್ ಮಂಕಡ್, ಅಥರ್ವ ಟೈಡೆ, ವೈಭವ್ ಅರೋರಾ, ಭಾನುಕಾ ರಾಜಪಕ್ಸೆ, ರಿಟಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ಜಿತೇಶ್ ಶರ್ಮಾ, ಬೆನ್ನಿ ಹೋವೆಲ್, ನಾಥನ್ ಎಲ್ಲಿಸ್

Story first published: Saturday, May 14, 2022, 9:30 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X