ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಚಾಂಪಿಯನ್‌ಗೆ ನೀಡುವ ಬಹುಮಾನದ ಮೊತ್ತ ಎಷ್ಟು? ಆರ್‌ಸಿಬಿಗೆ ಸಿಗುವ ಹಣವೆಷ್ಟು?

IPL 2022: How Much Is The Prize Money For the Champion? How Much Money Does The RCB Get?

ಐಪಿಎಲ್ 2022ರ 15ನೇ ಸೀಸನ್​ ಮುಕ್ತಾಯಕ್ಕೆ ಇನ್ನು ಒಂದೇ ಪಂದ್ಯ ಮಾತ್ರ ಬಾಕಿ ಇದೆ. 74 ದಿನಗಳ ಸುದೀರ್ಘ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಫೈನಲ್‌ಗೆ ದಿನಾಂಕ, ವೇದಿಕೆ ಸಿದ್ಧವಾಗಿದೆ. ಈ ಸೀಸನ್‌ನಲ್ಲಿ 10 ಫ್ರಾಂಚೈಸಿಗಳ ತಂಡಗಳು ಸ್ಪರ್ಧಿಸಿದ್ದವು. ಅದರಲ್ಲಿ ಹೊಸ ತಂಡ ಗುಜರಾತ್ ಟೈಟನ್ಸ್ ಮತ್ತು ಮೊದಲ ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಹೈವೋಲ್ಟೆಜ್ ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಬಿಸಿಸಿಐ ಈಗಾಗಲೇ ಆನ್‌ಲೈನ್‌ನಲ್ಲಿ ಸಂಪೂರ್ಣ ಮಾರಾಟ ಮಾಡಿದೆ. ಕೊರೊನಾ ನಿರ್ಬಂಧಗಳನ್ನು ತೆಗೆದುಹಾಕುವುದರೊಂದಿಗೆ, ಸ್ಟೇಡಿಯಂನಲ್ಲಿ 100 ಪ್ರತಿಶತ ಪ್ರೇಕ್ಷಕರ ನಡುವೆ ಪಂದ್ಯಗಳನ್ನು ನಡೆಸಲು ಬಿಸಿಸಿಐಗೆ ಅನುಮತಿಸಲಾಗಿದೆ.

IPL 2022 Final: ರಾಜಸ್ಥಾನ್ vs ಗುಜರಾತ್ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?IPL 2022 Final: ರಾಜಸ್ಥಾನ್ vs ಗುಜರಾತ್ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?

ಐಪಿಎಲ್ 2022 ಫೈನಲ್ ಪಂದ್ಯ ಭಾನುವಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಐಪಿಎಲ್ 2022ರ ಸಮಾರೋಪ ಸಮಾರಂಭವು ಟಾಸ್‌ಗೆ ಒಂದು ಗಂಟೆ ಮೊದಲು ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.

ಫೈನಲ್ ಪಂದ್ಯ ಆರಂಭ ಯಾವಾಗ?

ಫೈನಲ್ ಪಂದ್ಯ ಆರಂಭ ಯಾವಾಗ?

ಭಾರತೀಯ ಕಾಲಮಾನ 7:30ಕ್ಕೆ ಟಾಸ್ ಮತ್ತು 8 ಗಂಟೆಗೆ ಪಂದ್ಯ ಆರಂಭವಾಗಲಿದೆ. ಹಾರ್ದಿಕ್ ಪಾಂಡ್ಯ ಈಗಾಗಲೇ ಆಟಗಾರನಾಗಿ 4 ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದ್ದಾರೆ. ಮುಂಬೈ ಇಂಡಿಯನ್ಸ್‌ನಲ್ಲಿ ಆಟಗಾರನಾಗಿ ಟ್ರೋಫಿ ಗೆದ್ದಿರುವ ಪಾಂಡ್ಯ, ಇದೇ ಮೊದಲ ಬಾರಿಗೆ ನಾಯಕನಾಗಿ ಕಪ್ ಗೆಲ್ಲುವ ತವಕದಲ್ಲಿದ್ದಾರೆ.

ಇನ್ನು ಈ ಬಾರಿ ಐಪಿಎಲ್ 2022ರ ಚಾಂಪಿಯನ್ ತಂಡಕ್ಕೆ ನೀಡುವ ಬಹುಮಾನದ ಮೊತ್ತದಲ್ಲಿ ಯಾವ ಬದಲಾವಣೆಗಳಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಆದರೆ ರನ್ನರ್ಅಪ್ ಮತ್ತು ವೈಯಕ್ತಿಕವಾಗಿ ನೀಡುವ ಬಹುಮಾನದ ಮೊತ್ತದಲ್ಲಿ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ. ಹಾಗಿದ್ದಲ್ಲಿ ಈ ಬಾರಿಯ ಬಹುಮಾನ ಮೊತ್ತ ಎಷ್ಟಿರಲಿದೆ ಎಂಬುದನ್ನು ತಿಳಿಯಿರಿ.

ಐಪಿಎಲ್ 2022ರ ಬಹುಮಾನದ ಮೊತ್ತ

ಐಪಿಎಲ್ 2022ರ ಬಹುಮಾನದ ಮೊತ್ತ

ಕಳೆದ ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 20 ಕೋಟಿ ಮತ್ತು ರನ್ನರ್ ಅಪ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 13 ಕೋಟಿ ರೂ. ಬಹುಮಾನ ಮೊತ್ತ ಸಿಕ್ಕಿತ್ತು. ಅದರಂತೆ ಈ ಬಾರಿಯೂ ಚಾಂಪಿಯನ್ ತಂಡಕ್ಕೆ 20 ಕೋಟಿ ರೂ. ಮತ್ತು ರನ್ನರ್ ಅಪ್ ತಂಡಕ್ಕೆ ಕಳೆದ ಬಾರಿಗಿಂತ 50 ಲಕ್ಷ ರೂ. ಹೆಚ್ಚಳ ಸಿಗಲಿದೆ ಎಂದು ಬಿಸಿಸಿಐ ತಿಳಿಸಿದೆ. ಅದರಂತೆ ತಂಡಗಳಿಗೆ ನೀಡಲಾಗುವ ಹಾಗೂ ಇತರೆ ಬಹುಮಾನಗಳ ಮೊತ್ತ ಇಲ್ಲಿದೆ.

ಚಾಂಪಿಯನ್ ತಂಡ- 20 ಕೋಟಿ ರೂ.
ರನ್ನರ್ ಅಫ್ ತಂಡ- 13 ಕೋಟಿ ರೂ. (50 ಲಕ್ಷ ಹೆಚ್ಚಳ)
3ನೇ ಸ್ಥಾನದಲ್ಲಿರುವ ಆರ್‌ಸಿಬಿ ತಂಡ- 7 ಕೋಟಿ ರೂ.
4ನೇ ಸ್ಥಾನದಲ್ಲಿರುವ ಎಲ್‌ಎಸ್‌ಜಿ- 6.5 ಕೋಟಿ ರೂ.
ಆರೆಂಜ್ ಕ್ಯಾಪ್ ವಿನ್ನರ್- 15 ಲಕ್ಷ ರೂ.
ಪರ್ಪಲ್ ಕ್ಯಾಪ್ ವಿನ್ನರ್- 15 ಲಕ್ಷ ರೂ.
ಉದಯೋನ್ಮುಕ ಆಟಗಾರ- 20 ಲಕ್ಷ ರೂ. ಬಹುಮಾನವಾಗಿ ಮೊತ್ತ ಸಿಗಲಿದೆ.

ಐಪಿಎಲ್ ಟೂರ್ನಿ ಆರಂಭದಲ್ಲಿ ಐಪಿಎಲ್ ಬಹುಮಾದ ಮೊತ್ತಗಳೆಷ್ಟು?

ಐಪಿಎಲ್ ಟೂರ್ನಿ ಆರಂಭದಲ್ಲಿ ಐಪಿಎಲ್ ಬಹುಮಾದ ಮೊತ್ತಗಳೆಷ್ಟು?

ಇನ್ನು ಐಪಿಎಲ್ ಆರಂಭವಾದ 2008ರಲ್ಲಿ ಚಾಂಪಿಯನ್ ತಂಡದಿಂದ ಹಿಡಿದು ಎಲ್ಲಾ ಬಹುಮಾನದ ಮೊತ್ತಗಳು ಈಗಿನ ಮೊತ್ತಕ್ಕಿಂತ ಕಡಿಮೆ ಇದ್ದವು. ಅವುಗಳ ಅಂಕಿಅಂಶ ನೋಡುವುದಾದರೆ, ಚಾಂಪಿಯನ್ ತಂಡಕ್ಕೆ 4.8 ಕೋಟಿ ರೂ., ರನ್ನರ್ ಅಪ್ ತಂಡಕ್ಕೆ 2.4 ಕೋಟಿ ರೂ., 3ನೇ ಸ್ಥಾನ ಪಡೆದವರಿಗೆ 1.2 ಕೋಟಿ ರೂ. ಬಹುಮಾನದ ಮೊತ್ತ ಸಿಕ್ಕಿತ್ತು.

ಐಪಿಎಲ್ 2022ರ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಯಾರಾಗಬಹುದು

ಐಪಿಎಲ್ 2022ರ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಯಾರಾಗಬಹುದು

ಐಪಿಎಲ್ 2022 ಫೈನಲ್ ಹಂತಕ್ಕೆ ತಲುಪಿದ್ದು, ಚಾಂಪಿಯನ್ ಯಾರೆಂದು ತಿಳಿಯಲು ಕೇವಲ ಒಂದು ಮಾತ್ರ ಬಾಕಿ ಇದೆ. ಇದರ ನಡುವೆ ಈ ಬಾರಿಯ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಜೇತರಿಗೆ ಬಹುಮಾನ ರೂಪವಾಗಿ ತಲಾ ಹದಿನೈದು ಲಕ್ಷ ನೀಡಲಾಗುವುದು.

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ 824 ರನ್ ಗಳಿಸಿ ಈ ಬಾರಿಯ ಆರೆಂಜ್ ಕ್ಯಾಪ್ ವಿನ್ನರ್ ಎಂದೇ ಹೇಳಬಹುದಾಗಿದೆ. ಆದರೆ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಹಸರಂಗ ಮೊದಲ ಸ್ಥಾನದಲ್ಲಿದ್ದರೂ, ಫೈನಲ್ ಪಂದ್ಯದಲ್ಲಿ ಕೇವಲ ಒಂದೇ ಒಂದು ವಿಕೆಟ್ ಪಡೆದರೆ ಯುಜ್ವೇಂದ್ರ ಚಹಲ್ ಪರ್ಪಲ್ ಕ್ಯಾಪ್ ವಿನ್ನರ್ ಆಗಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಇಬ್ಬರು ಆಟಗಾರರು ಈ ಬಾರಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಜೇತರಾಗುವ ಸಾಧ್ಯತೆಗಳಿವೆ.

Story first published: Saturday, May 28, 2022, 20:19 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X