ನನ್ನ ವೇಗದ ಬೌಲಿಂಗ್ ದಾಖಲೆಯನ್ನ ಉಮ್ರಾನ್‌ ಮಲ್ಲಿಕ್ ಮುರಿದ್ರೆ ಸಂತೋಷವಾಗಲಿದೆ: ಶೋಯೆಬ್ ಅಖ್ತರ್‌

ಐಪಿಎಲ್ 15ನೇ ಸೀಸನ್‌ನಲ್ಲಿ ತನ್ನ ವೇಗದ ಬೌಲಿಂಗ್ ಮೂಲಕವೇ ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದಿರುವ ಬೌಲರ್ ಅಂದ್ರೆ ಉಮ್ರಾನ್ ಮಲ್ಲಿಕ್. ಸನ್‌ರೈಸರ್ಸ್ ಹೈದ್ರಾಬಾದ್ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಉಮ್ರಾನ್ ಕುರಿತಾಗಿ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಇಂಟ್ರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ.

ವಿಶ್ವದ ಅತ್ಯಂತ ವೇಗದ ಎಸೆತದ ದಾಖಲೆ ಹೊಂದಿರುವ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್, ತನ್ನ ದಾಖಲೆಯನ್ನ ಉಮ್ರಾನ್ ಮಲ್ಲಿಕ್ ಮುರಿದರೆ ಸಂತೋಷ ಪಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ 2003ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 161.3kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಹಿಂದಿದ್ದ ಎಲ್ಲಾ ದಾಖಲೆಯನ್ನ ನೆಲಸಮ ಮಾಡಿದರು. ಅಂದಿನಿಂದ ಇಂದಿನವರೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆ ಅಖ್ತರ್ ಹೆಸರಿನಲ್ಲಿಯೇ ಉಳಿದಿದೆ.

ಐಪಿಎಲ್ 2022ರ ಸೀಸನ್‌ನಲ್ಲಿ ಸರಾಸರಿ 150kmph ಬೌಲಿಂಗ್ ಮಾಡುವ ಉಮ್ರಾನ್ ಮಲ್ಲಿಕ್ 157kmph ವೇಗದಲ್ಲಿ ಎಸೆತವನ್ನ ಹಾಕುವ ಮೂಲಕ ಸೀಸನ್‌ನ ವೇಗದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ ಇದು ಎರಡನೇ ಅತ್ಯಂತ ವೇಗದ ಎಸೆತವಾಗಿದೆ.

12 ಐಪಿಎಲ್‌ ಪಂದ್ಯಗಳಲ್ಲಿ 18 ವಿಕೆಟ್ ಎಗರಿಸಿರುವ ಉಮ್ರಾನ್ ಮಲ್ಲಿಕ್ ವೇಗದ ಜೊತೆಗೆ ಸನ್‌ರೈಸರ್ಸ್ ಹೈದ್ರಾಬಾದ್‌ ಟ್ರಂಪ್‌ಕಾರ್ಡ್ ವಿಕೆಟ್ ಟೇಕರ್ ಕೂಡ ಆಗಿದ್ದಾರೆ. ಜಮ್ಮು ಕಾಶ್ಮೀರ ಮೂಲಕ ಈ ಯುವ ಬೌಲರ್‌ ಕುರಿತಾಗಿ ಕ್ರಿಕೆಟ್‌ ದಿಗ್ಗಜರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೋಯೆಬ್ ಅಖ್ತರ್ ಕೂಡ ಉಮ್ರಾನ್ ಮಲ್ಲಿಕ್ ವೇಗದ ಕುರಿತಾಗಿ ಹೊಗಳಿಕೆಯ ಮಾತನಾಡಿದ್ದು, ಆತ ಸುದೀರ್ಘ ವೃತ್ತಿಜೀವನವನ್ನ ಹೊಂದಲಿ ಎಂದು ಆಶಿಸಿದ್ದಾರೆ.

ಮಹಿಳಾ ಟಿ20 ಚಾಲೆಂಜ್ 2022: ಮೂರು ತಂಡಗಳ ಸ್ಕ್ವಾಡ್‌ ಪ್ರಕಟಿಸಿದ ಬಿಸಿಸಿಐಮಹಿಳಾ ಟಿ20 ಚಾಲೆಂಜ್ 2022: ಮೂರು ತಂಡಗಳ ಸ್ಕ್ವಾಡ್‌ ಪ್ರಕಟಿಸಿದ ಬಿಸಿಸಿಐ

''ಆತ ಸುದೀರ್ಘ ವೃತ್ತಿಜೀವನವನ್ನು ಹೊಂದಲು ನಾನು ಬಯಸುತ್ತೇನೆ. ಕೆಲವು ದಿನಗಳ ಹಿಂದೆ, ನಾನು ವೇಗದ ಎಸೆತವನ್ನು ಬೌಲ್ ಮಾಡಿ 20 ವರ್ಷಗಳು ಕಳೆದಿವೆ. ಆದರೆ ಯಾರೂ ಆ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ ಎಂದು ನನ್ನನ್ನು ಅಭಿನಂದಿಸಿದರು. ಆದರೆ, ಈ ದಾಖಲೆಯನ್ನು ಮುರಿಯಬಲ್ಲ ಯಾರಾದರೂ ಇರಲೇಬೇಕು ಎಂದು ನಾನು ಹೇಳಿದೆ. ಉಮ್ರಾನ್ ನನ್ನ ದಾಖಲೆಯನ್ನು ಮುರಿದರೆ ನನಗೆ ಸಂತೋಷವಾಗುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಅವನು ಗಾಯಗೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಅವರು ಯಾವುದೇ ಗಾಯಗೊಳ್ಳದೆ ದೀರ್ಘಾವಧಿಯವರೆಗೆ ಕ್ರಿಕೆಟ್ ಆಡುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ'' ಎಂದು ಕ್ರಿಕೆಟ್ ಪಾಕಿಸ್ತಾನ್ ವರದಿ ಮಾಡಿದೆ.

ಆತನನ್ನು ನಾನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೋಡಲು ಬಯಸುತ್ತೇನೆ ಎಂದು ಹೇಳಿರುವ ಅಖ್ತರ್‌, ಯುವ ಬೌಲರ್ ಇಂಜ್ಯುರಿಯಾಗದಂತೆ ಎಚ್ಚರಿಕೆವಹಿಸಿದ್ರೆ ಮಾತ್ರ ದೀರ್ಘಾವಧಿ ಕಾಲ ವೃತ್ತಿಜೀವನವನ್ನು ಹೊಂದಲು ಸಾಧ್ಯ ಎಂಬ ಸಲಹೆ ನೀಡಿದ್ದಾರೆ.

ಐಪಿಎಲ್ 2022ರ ವೇಗದ ಎಸೆತಗಳು
ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಅತ್ಯಂತ ವೇಗವಾದ ಎಸೆತಗಳನ್ನು ಮಾಡಿ ಬೌಲರ್‌ಗಳ ಪಟ್ಟಿಯಲ್ಲಿ ಟಾಪ್ 8ರಲ್ಲಿ ಉಮ್ರಾನ್‌ ಮಲ್ಲಿಕ್ ಅಗ್ರಸ್ಥಾನ ಅಷ್ಟೇ ಅಲ್ಲದೆ ಆರು ಸ್ಥಾನಗಳನ್ನ ಪಡೆದಿದ್ದಾರೆ. ಆ ಕುರಿತು ಮಾಹಿತಿಯನ್ನ ಈ ಕೆಳಗೆ ಕಾಣಬಹುದು.

ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿಕೊಂಡ ಪಂತ್ ! | Oneindia Kannada

157.00- ಉಮ್ರಾನ್ ಮಲಿಕ್
154.00 - ಉಮ್ರಾನ್ ಮಲಿಕ್
153.90 - ಲ್ಯುಕಿ ಫರ್ಗುಸನ್
153.30 - ಉಮ್ರಾನ್ ಮಲಿಕ್
153.10 - ಉಮ್ರಾನ್ ಮಲಿಕ್
152.8 - ಉಮ್ರಾನ್ ಮಲಿಕ್
152.60 - ಲ್ಯುಕಿ ಫರ್ಗುಸನ್
152.60 - ಉಮ್ರಾನ್ ಮಲಿಕ್

For Quick Alerts
ALLOW NOTIFICATIONS
For Daily Alerts
Story first published: Monday, May 16, 2022, 18:14 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X