ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: 20ನೇ ಓವರ್‌ಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಡೇಂಜರಸ್ ಆಟಗಾರರ ಟಾಪ್ 5 ಪಟ್ಟಿ

IPL 2022: List of batsmen who smashed most number of sixes in 20th over

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲಾಗದೇ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದು ಮುಖಭಂಗಕ್ಕೊಳಗಾದವು.

ದೀಪಕ್ ಚಹರ್ ಮದುವೆಗೆ ಟೀಮ್ ಇಂಡಿಯಾ ಆಟಗಾರರ ಜತೆ ಬಂದಿದ್ರಾ ಪಾಕ್‌ ಆಟಗಾರ? ಇಲ್ಲಿದೆ ಸತ್ಯಾಂಶದೀಪಕ್ ಚಹರ್ ಮದುವೆಗೆ ಟೀಮ್ ಇಂಡಿಯಾ ಆಟಗಾರರ ಜತೆ ಬಂದಿದ್ರಾ ಪಾಕ್‌ ಆಟಗಾರ? ಇಲ್ಲಿದೆ ಸತ್ಯಾಂಶ

ಹೌದು, 5 ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು 4 ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮುಗ್ಗರಿಸಿದರೆ, ನೂತನ ತಂಡವಾದ ಗುಜರಾತ್ ಟೈಟನ್ಸ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಅಬ್ಬರಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಮುಗ್ಗರಿಸಿದ್ದರೂ, ಆ ತಂಡಗಳ ಆಟಗಾರರು ಮಾಡಿರುವ ಸಾರ್ವಕಾಲಿಕ ದಾಖಲೆಗಳು ಈ ಆವೃತ್ತಿಯಲ್ಲಿಯೂ ಮುರಿಯಲ್ಪಡದೇ ಹಾಗೆಯೇ ಉಳಿದುಕೊಂಡಿವೆ. ಅಂತಹ ಸಾರ್ವಕಾಲಿಕ ದಾಖಲೆಗಳಲ್ಲಿ 20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆ ಕೂಡ ಒಂದು. ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ಆಗಮನವಾದ್ದರಿಂದ ಟೂರ್ನಿಯಲ್ಲಿ ಬರೋಬ್ಬರಿ 1062 ಸಿಕ್ಸರ್ ದಾಖಲಾದವು ಹಾಗೂ ಟೂರ್ನಿಯಲ್ಲಿ ಜೋಸ್ ಬಟ್ಲರ್ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡರು.

ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದಿರುವ ಆಟಗಾರರ ಪಟ್ಟಿಯಲ್ಲಿ ಧೋನಿಗೆ 7ನೇ ಸ್ಥಾನ; ಇಲ್ಲಿದೆ ಟಾಪ್ 10 ಪಟ್ಟಿಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದಿರುವ ಆಟಗಾರರ ಪಟ್ಟಿಯಲ್ಲಿ ಧೋನಿಗೆ 7ನೇ ಸ್ಥಾನ; ಇಲ್ಲಿದೆ ಟಾಪ್ 10 ಪಟ್ಟಿ

ಇನ್ನು ಐಪಿಎಲ್ ಪಂದ್ಯಗಳ ಅಂತಿಮ 6 ಎಸೆತಗಳಲ್ಲಿ ಸಿಕ್ಸರ್ ಬಾರಿಸುವುದು ಸುಲಭದ ಮಾತಲ್ಲ. ಸಿಕ್ಕಾಪಟ್ಟೆ ಒತ್ತಡವಿರುವ ಈ ಸಂದರ್ಭದಲ್ಲಿಯೂ ಕೆಲ ಆಟಗಾರರು ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿ ಅಬ್ಬರಿಸಿದ್ದಾರೆ. ಹೀಗೆ ಪಂದ್ಯಗಳ ಅಂತಿಮ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿ ಮುಂದೆ ಇದೆ ಓದಿ.

20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಆಟಗಾರರ ಟಾಪ್ 5 ಪಟ್ಟಿ

20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಆಟಗಾರರ ಟಾಪ್ 5 ಪಟ್ಟಿ

1. ಎಂಎಸ್ ಧೋನಿ - ಚೆನ್ನೈ ಸೂಪರ್ ಕಿಂಗ್ಸ್ - 52 ಸಿಕ್ಸರ್

2. ಕೀರನ್ ಪೊಲಾರ್ಡ್ - ಮುಂಬೈ ಇಂಡಿಯನ್ಸ್ - 33 ಸಿಕ್ಸರ್

3. ರವೀಂದ್ರ ಜಡೇಜಾ - ಚೆನ್ನೈ ಸೂಪರ್‌ ಕಿಂಗ್ಸ್ - 26 ಸಿಕ್ಸರ್

4. ಹಾರ್ದಿಕ್ ಪಾಂಡ್ಯ - ಗುಜರಾತ್ ಟೈಟನ್ಸ್ - 25 ಸಿಕ್ಸರ್

5. ರೋಹಿತ್ ಶರ್ಮಾ - ಮುಂಬೈ ಇಂಡಿಯನ್ಸ್ - 23 ಸಿಕ್ಸರ್

ಎಂಎಸ್ ಧೋನಿ ಟಾಪ್ 1

ಎಂಎಸ್ ಧೋನಿ ಟಾಪ್ 1

ಹೀಗೆ ಐಪಿಎಲ್ ಇತಿಹಾಸದಲ್ಲಿ ಅಂತಿಮ ಓವರ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಂ ಎಸ್ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಎಂಎಸ್ ಧೋನಿ ಇಪ್ಪತ್ತನೇ ಓವರ್‌ನಲ್ಲಿ 52 ಸಿಕ್ಸರ್ ಮತ್ತು 48 ಬೌಂಡರಿಗಳನ್ನೂ ಸಹ ಬಾರಿಸಿದ್ದಾರೆ.

ಪಾಕಿಸ್ತಾನದ ದಿಗ್ಗಜ ಫಾಸ್ಟ್ ಬೌಲರ್ ದಾಖಲೆ ಮೇಲೆ ಕಣ್ಣಿಟ್ಟ Umran Malik | #Cricket | Oneindia Kannada
ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರದ್ದೇ ಪಾರುಪತ್ಯ

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರದ್ದೇ ಪಾರುಪತ್ಯ

ಮೊದಲೇ ಹೇಳಿದಂತೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಂಕಾಗಿರಬಹುದು, ಆದರೆ ಆ ತಂಡದ ಆಟಗಾರರು ಈ ಹಿಂದೆ ನಿರ್ಮಿಸಿದ ಕೆಲ ದಾಖಲೆಗಳು ಈ ಆವೃತ್ತಿಯಲ್ಲಿಯಲ್ಲೂ ಯಾರಿಂದಲೂ ಮುರಿಯಲ್ಪಡದೇ ಹಾಗೆಯೇ ಉಳಿದುಕೊಂಡಿವೆ. ಮೇಲಿನ ಟಾಪ್ 5 ಪಟ್ಟಿಯನ್ನು ಗಮನಿಸಿದರೆ ಎಲ್ಲಾ ಆಟಗಾರರೂ ಸಹ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿದವರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಈ ಬಾರಿ ಗುಜರಾತ್ ಟೈಟನ್ಸ್ ತಂಡದ ಪರ ಆಡಿರಬಹುದು, ಆದರೆ ಈ ದಾಖಲೆಯಲ್ಲಿ ತಮ್ಮ ಹೆಸರು ಬರುವ ಹಾಗೆ ಮಾಡಿದ್ದು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದಾಗಿನ ಅಂಕಿಅಂಶ.

Story first published: Sunday, June 5, 2022, 20:07 [IST]
Other articles published on Jun 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X