ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈದಾನದಲ್ಲಿ ಯಾರ ಸೂಚನೆ ಆಲಿಸಬೇಕು; ಚೌಧರಿಗೆ ದೀಪಕ್ ಚಹರ್ ಸಲಹೆ ಏನು?

ಐಪಿಎಲ್ 2022ರ 15ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಸ್ಟಾರ್ ಬೌಲರ್ ದೀಪಕ್ ಚಹರ್ ಸೇವೆಯನ್ನು ಕಳೆದುಕೊಂಡಾಗ ಮುಖೇಶ್ ಚೌಧರಿ ಅವರನ್ನು ಹೆಚ್ಚಿನ ಆಯ್ಕೆಗಳಿಲ್ಲದೆ ಬಳಸಿಕೊಳ್ಳಲಾಗುತ್ತಿದೆ. ಸಿಎಸ್‌ಕೆ ತನ್ನ ಆರಂಭಿಕ ಪಂದ್ಯಗಳಲ್ಲಿ ಇತರೆ ವೇಗಿಗಳಿಗೆ ಅವಕಾಶ ನೀಡಿದರು, ಉತ್ತಮ ಪ್ರದರ್ಶನ ಕಾಣದೆ ಆರಂಭಿಕ ಸ್ಪೆಲ್‌ಗಳಲ್ಲಿಯೇ ಹೆಣಗಾಡಬೇಕಾಯಿತು.

ಪುಣೆ ಮೂಲದ ವೇಗಿ ಮುಖೇಶ್ ಚೌಧರಿ ಅಂತಿಮವಾಗಿ ಸಲಹೆಗಳನ್ನು ಸರಿಯಾಗಿ ಪಡೆಯಲು ಪ್ರಾರಂಭಿಸಿದರು ಮತ್ತು ಕಠಿಣ ಹಂತದ ಮೂಲಕ ಅದರಲ್ಲಿ ಯಶಸ್ವಿಯಾದರು. ಈ ವೇಳೆ ಮಾರ್ಗದರ್ಶನ ನೀಡಿದಕ್ಕಾಗಿ ಅವರು ದೀಪಕ್ ಚಹರ್‌ಗೆ ಕ್ರೆಡಿಟ್ ನೀಡಿದರು.

"ದೀಪಕ್ ಚಹರ್ ಭಾಯ್ ಈಗ ಸ್ವಲ್ಪ ಸಮಯದಿಂದ ಸಿಎಸ್‌ಕೆಗಾಗಿ ಆಡಿದ್ದಾರೆ ಮತ್ತು ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರೊಬ್ಬ ಅದ್ಭುತ ಬೌಲರ್. ನಾನು ಅವನೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇನೆ ಮತ್ತು ಅವರು ನನಗೆ ಸಾಕಷ್ಟು ಮಾರ್ಗದರ್ಶನ ನೀಡುತ್ತಾರೆ. ಪರಿಸ್ಥಿತಿಯನ್ನು ಹೇಗೆ ವಿಶ್ಲೇಷಿಸಬೇಕು ಮತ್ತು ನಿರ್ದಿಷ್ಟ ಸನ್ನಿವೇಶದಲ್ಲಿ ಏನು ಬೌಲಿಂಗ್ ಮಾಡಬೇಕು ಎಂದು ಅವರು ನನಗೆ ಹೇಳಿದ್ದಾರೆ ಎಂದು ಮುಖೇಶ್ ಚೌಧರಿ ತಿಳಿಸಿದರು.

 IPL 2022: Listen MS Dhoni Intructions; Deepak Chahar Advice To CSK Bowler Mukesh Chaudhary

"ಐಪಿಎಲ್ 2022 ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ನಾನು ಉತ್ತಮ ಪ್ರದರ್ಶನ ನೀಡಲಿಲ್ಲ. ದೀಪಕ್ ಭಾಯ್ ಕರೆ ಮಾಡಿ ಟಿಪ್ಸ್ ಕೊಟ್ಟರು. ನನಗೆ ಏನು ಕೊರತೆಯಿದೆ ಮತ್ತು ನಾನು ಹೇಗೆ ಸುಧಾರಿಸಬಹುದು ಎಂದು ಅವರು ನನಗೆ ಹೇಳಿದರು. ಅಲ್ಲಿಂದ ನಾನು ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸಿದೆ," ಎಂದು ಚೌಧರಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಕಳೆದ ಐಪಿಎಲ್‌ನಲ್ಲಿ ಸಿಎಸ್‌ಕೆಗೆ ನೆಟ್ ಬೌಲರ್ ಆಗಿದ್ದ ಮುಖೇಶ್ ಚೌಧರಿ ಇದುವರೆಗೆ ಎಂಟು ಪಂದ್ಯಗಳನ್ನು ಆಡಿದ್ದಾರೆ ಮತ್ತು 25.45 ಸರಾಸರಿಯಲ್ಲಿ 11 ವಿಕೆಟ್ ಪಡೆದಿದ್ದಾರೆ. ಸಿಎಸ್‌ಕೆ ಆಡಿದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಖೇಶ್ ಚೌಧರಿ 46 ನೀಡಿ, 4 ಪ್ರಮುಖ ವಿಕೆಟ್ ಪಡೆದು ಅತ್ಯುತ್ತಮ ಪ್ರದರ್ಶನ ನೀಡದ ಕಾರಣಕಾಕಗಿ ಗೆಲುವು ಸಾಧಿಸಿತು.

 IPL 2022: Listen MS Dhoni Intructions; Deepak Chahar Advice To CSK Bowler Mukesh Chaudhary

ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರ ವಿಕೆಟ್‌ಗಳನ್ನು ಒಳಗೊಂಡಂತೆ ಮುಂಬೈ ಇಂಡಿಯನ್ ವಿರುದ್ಧ 19 ರನ್ ನೀಡಿ, 3 ವಿಕೆಟ್ ಕಿತ್ತು ಗಮನ ಸೆಳೆಯುವ ಪ್ರದರ್ಶನ ನೀಡಿದರು. ಆಟದ ನಂತರ ದೀಪಕ್ ಚಹರ್ ತನಗೆ ಕರೆ ಮಾಡಿ ಅತ್ಯಮೂಲ್ಯ ಸಲಹೆ ನೀಡಿದರು ಎಂದು ಚೌಧರಿ ಹೇಳಿದರು.

"ಸನ್‌ರೈಸರ್ಸ್ ವಿರುದ್ಧ ನಾನು 4 ವಿಕೆಟ್ ಪಡೆದಾಗ, ಅವರು (ಚಹರ್) ಕರೆ ಮಾಡಿ ನನ್ನನ್ನು ಶ್ಲಾಘಿಸಿದರು. ಚೆನ್ನಾಗಿದೆ, ಒಳ್ಳೆಯ ಆಟ ಮುಂದುವರೆಸಿ ಎಂದು ಹೇಳಿದರು. ನಿಮ್ಮ ಕಣ್ಣನ್ನು ಬ್ಯಾಟ್ಸ್‌ಮನ್ ಮೇಲೆ ಇರಿಸಿ ಮತ್ತು ಮಹಿ ಭಾಯ್ ಅವರ ಸೂಚನೆಗಳನ್ನು ಆಲಿಸಿ. ಅವರು ನನಗೆ ತುಂಬಾ ಸಹಾಯ ಮಾಡಿದ್ದಾರೆ. ನಿಜವಾಗಲೂ ನಾನು ಒತ್ತಡದಲ್ಲಿದ್ದೆ, ಆದರೆ ದೀಪಕ್ ಭಾಯ್ ಅವರ ಮಾತುಗಳು ನನಗೆ ತುಂಬಾ ಉತ್ತೇಜನ ನೀಡಿತು," ಎಂದು ಮುಖೇಶ್ ಚೌಧರಿ ತಿಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಒಂಬತ್ತು ಪಂದ್ಯಗಳಿಂದ ಕೇವಲ ಮೂರು ಗೆಲುವುಗಳು ಮತ್ತು ಆರು ಸೋಲುಗಳೊಂದಿಗೆ ಅಂಕಪಟ್ಟಿಯ ಕೆಳಗಿನಿಂದ ಎರಡನೇ ಸ್ಥಾನದಲ್ಲಿದೆ. ಆದರೂ ಇನ್ನೂ ಪ್ಲೇಆಫ್‌ಗೇರಲು ಸ್ಪರ್ಧೆಯಲ್ಲಿದ್ದಾರೆ. ಸಿಎಸ್‌ಕೆಗೆ ಇಲ್ಲಿಂದ ಪ್ರತಿಯೊಂದು ಪಂದ್ಯವನ್ನೂ ಅವಶ್ಯಕವಾಗಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಇತ್ತೀಚೆಗೆ ಹೈದರಾಬಾದ್ ವಿರುದ್ಧದ ಪಂದ್ಯದ ಮೊದಲು, ರವೀಂದ್ರ ಜಡೇಜಾ ನಾಯಕತ್ವದಿಂದ ಕೆಳಗಿಳಿದರು. ಎಂಎಸ್ ಧೋನಿ ಮತ್ತೊಮ್ಮೆ ತಂಡವನ್ನು ಮುನ್ನಡೆಸುವುದರೊಂದಿಗೆ ರವೀಂದ್ರ ಜಡೇಜಾ ತಮ್ಮ ವೈಯಕ್ತಿಕ ಪ್ರದರ್ಶನದ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾರೆ.

Story first published: Wednesday, May 4, 2022, 14:14 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X