ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ನಿರ್ಣಾಯಕ SRH ವಿರುದ್ಧ ಗೆಲ್ಲಬೇಕಾದರೆ RCB ಪ್ಲೇಯಿಂಗ್ 11 ಹೀಗಿರಬೇಕು

 IPL 2022: Royal Challengers Bangalore Predicted Playing XI Against SunRisers Hyderabad

ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಸೀಸನ್‌ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಸೆಣಸಲಿದೆ.

ಪ್ರಸ್ತುತ ಆರ್‌ಸಿಬಿ 11 ಪಂದ್ಯಗಳಿಂದ 12 ಅಂಕಗಳೊಂದಿಗೆ (6 ಗೆಲುವುಗಳು ಮತ್ತು 5 ಸೋಲುಗಳು) ಐಪಿಎಲ್ 2022 ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ RCB 13 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಅನ್ನು ಸೋಲಿಸಿತು. ಕಳೆದ ವರ್ಷದ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್ ಮೂರು ಪ್ರಮುಖ ವಿಕೆಟ್‌ ಪಡೆದು ಗೆಲುವಿನ ರೂವಾರಿಯಾದರು.

SRH ವಿರುದ್ಧ RCB ಪ್ಲೇಯಿಂಗ್ 11 ಹೀಗಿರಲಿದೆ

SRH ವಿರುದ್ಧ RCB ಪ್ಲೇಯಿಂಗ್ 11 ಹೀಗಿರಲಿದೆ

ವಿರಾಟ್ ಕೊಹ್ಲಿ: ಮಾಜಿ ಆರ್‌ಸಿಬಿ ನಾಯಕ ಈ ಋತುವಿನಲ್ಲಿ ಕಳಪೆ ಫಾರ್ಮ್‌ಲ್ಲಿದ್ದು, ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ಬಂದಿಲ್ಲ ಮತ್ತು ಸಿಎಸ್‌ಕೆ ವಿರುದ್ಧದ ಗೆಲುವಿನ ಸಮಯದಲ್ಲಿ 33 ಎಸೆತಗಳಲ್ಲಿ 30 ರನ್‌ಗಳನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಯಿತು. ಆದರೆ ವಿರಾಟ್ ಕೊಹ್ಲಿ ತಂಡದ ಶಕ್ತಿಯಾಗಿದ್ದು, ಇವರ ಬ್ಯಾಟ್‌ನಿಂದ ರನ್ ಹೊಳೆ ಹರಿದರೆ ಗೆಲುವು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆರ್‌ಸಿಬಿ ತಂಡದ ಶಕ್ತಿಯಾಗಿರುವ ಕೊಹ್ಲಿ ಬ್ಯಾಟ್‌ನಿಂದ ಶತಕ ಗಳಿಸಲಿ ಎಂದು ಕೋಟ್ಯಂತರ ಅಭಿಮಾನಿಗಳು ಆಶಯ ವ್ಯಕ್ತಪಡಿಸುತ್ತಿದ್ದಾರೆ.

ಫಾಫ್ ಡು ಪ್ಲೆಸಿಸ್: ಈ ಋತುವಿನಲ್ಲಿ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. 11 ಪಂದ್ಯಗಳಲ್ಲಿ RCB ನಾಯಕ ಎರಡು ಅರ್ಧಶತಕ ಸೇರಿದಂತೆ 316 ರನ್ ದಾಖಲಿಸಿದ್ದಾರೆ. ಆದರೆ ನಿರ್ಣಾಯಕ ಪಂದ್ಯಗಳಲ್ಲಿ ಈ ಓಪನಿಂಗ್ ಬ್ಯಾಟ್ಸ್‌ನ್ ತುಂಬಾ ಸಲೀಸಾಗಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಒಂದು ವೇಳೆ ಇವರು ಅಬ್ಬರಿಸಿದರೆ ಆರ್‌ಸಿಬಿ ತಂಡದ ಗೆಲುವು ನಿಶ್ಚಿತ.

ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿರುವ ಮ್ಯಾಕ್ಸ್‌ವೆಲ್

ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿರುವ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್: ಆಸೀಸ್ ಆಲ್‌ರೌಂಡರ್ ಐಪಿಎಲ್ 2022ರಲ್ಲಿ ಇನ್ನೂ ತನ್ನ ವಿಶ್ವರೂಪ ತೋರಿಸಿದಂತಿಲ್ಲ. ಅವರು ಈ ವರ್ಷ ಎಂಟು ಪಂದ್ಯಗಳಲ್ಲಿ ಕೇವಲ 160 ರನ್ ಗಳಿಸಲು ಶಕ್ತರಾಗಿದ್ದಾರೆ ಮತ್ತು ಕೇವಲ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿರುವ ಮ್ಯಾಕ್ಸ್‌ವೆಲ್, ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಮಹಿಪಾಲ್ ಲೊಮ್ರೋರ್: ಮಹಿಪಾಲ್ ಲೊಮ್ರೋರ್ ಸಿಎಸ್‌ಕೆ ವಿರುದ್ಧ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದರು ಮತ್ತು 27 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 42 ರನ್ ಗಳಿಸಿ, ಉತ್ತಮ ಟಾರ್ಗೆಟ್ ನೀಡಲು ಸಹಕಾರಿಯಾದರು. ಮಧ್ಯಮ ಕ್ರಮಾಂಕದಲ್ಲಿ ಆಡುವ ಈ ಬ್ಯಾಟ್ಸ್‌ಮನ್ ಅಬ್ಬರಿಸಲಿ ಎಂದು ಆರ್‌ಸಿಬಿ ಅಭಿಮಾನಿಗಳು ಆಶಿಸುತ್ತಿದ್ದಾರೆ.

ರಜತ್ ಪಾಟಿದಾರ್: ರಜತ್ ಪಾಟಿದಾರ್ ಅವರು ಸಿಎಸ್‌ಕೆ ವಿರುದ್ಧ 15 ಎಸೆತಗಳಲ್ಲಿ 21 ರನ್ ಗಳಿಸಿದರು ಮತ್ತು ಎಸ್‌ಆರ್‌ಎಚ್ ವಿರುದ್ಧ ಪಂದ್ಯದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಫಿನಿಶರ್ ಆಗಿ ಅದ್ಭುತವಾಗಿ ಆಡುತ್ತಿರುವ ಕಾರ್ತಿಕ್

ಫಿನಿಶರ್ ಆಗಿ ಅದ್ಭುತವಾಗಿ ಆಡುತ್ತಿರುವ ಕಾರ್ತಿಕ್

ದಿನೇಶ್ ಕಾರ್ತಿಕ್: ದಿನೇಶ್ ಕಾರ್ತಿಕ್ ಸಿಎಸ್‌ಕೆ ವಿರುದ್ಧ 17 ಎಸೆತಗಳಲ್ಲಿ 26 ರನ್ ಗಳಿಸಿ ಅಜೇಯವಾಗಿ ಉಳಿದರು. ಅವರು 11 ಪಂದ್ಯಗಳಲ್ಲಿ 244 ರನ್‌ಗಳೊಂದಿಗೆ ಆರ್‌ಸಿಬಿಯ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ ಮತ್ತು ಫಿನಿಶರ್ ಆಗಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವನಿಂದು ಹಸರಂಗಾ: ಶ್ರೀಲಂಕಾದ ಸ್ಪಿನ್ನರ್ ಈ ಋತುವಿನಲ್ಲಿ ಕೇವಲ 11 ಪಂದ್ಯಗಳಲ್ಲಿ 16 ವಿಕೆಟ್ ಪಡೆಯುವುದರೊಂದಿಗೆ ಆರ್‌ಸಿಬಿ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಶಹಬಾಜ್ ಅಹ್ಮದ್: ಶಹಬಾಜ್ ಅಹ್ಮದ್ ಈ ಋತುವಿನಲ್ಲಿ ಆರ್‌ಸಿಬಿಗೆ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಬೌಲಿಂಗ್ ಮೂಲಕವೂ ತಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇವರೂ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ.

ಅಷ್ಟೊಂದು ಖ್ಯಾತಿ ಕೊಟ್ಟ IPL ಬಗ್ಗೆ ಕ್ರಿಸ್ ಗೇಲ್ ಗೆ ಬೇಸರ ಯಾಕೆ? | Oneindia Kannada
ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್

ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್

ಹರ್ಷಲ್ ಪಟೇಲ್: ಕಳೆದ ವರ್ಷದ ಪರ್ಪಲ್ ಕ್ಯಾಪ್ ವಿಜೇತ ಹರ್ಷಲ್ ಪಟೇಲ್, ಕಳೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್ ಪಡೆದರು ಮತ್ತು ಕೇವಲ 35 ರನ್ ಬಿಟ್ಟುಕೊಟ್ಟಿದ್ದಾರೆ. ಡೆತ್ ಓವರ್‌ಗಳಲ್ಲಿ ಹರ್ಷಲ್ ಪಟೇಲ್ ತಂಡದ ಗೆಲುವಿಗೆ ಪ್ರಮುಖ ಅಸ್ತ್ರವಾಗಿದ್ದಾರೆ.

ಮೊಹಮ್ಮದ್ ಸಿರಾಜ್: ಈ ಐಪಿಎಲ್ ಋತುವಿನಲ್ಲಿ ಆರ್‌ಸಿಬಿಯ ವೇಗದ ಬೌಲರ್ ವಿಶ್ವಾಸ ಮೂಡಿಸಿದ್ದರು. ಆದರೆ ಇವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಎದುರಾಳಿಗಳಿಗೆ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ಈ ಬಾರಿ 11 ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ. ತಂಡದಲ್ಲಿ ಸಿರಾಜ್ ಸ್ಥಾನ ಖಚಿತವಾಗಿರುತ್ತದೆ.

ಜೋಶ್ ಹ್ಯಾಜಲ್‌ವುಡ್: ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿಯ ದೊಡ್ಡ ವಿಕೆಟ್ ಪಡೆದ ಜೋಶ್ ಹ್ಯಾಜಲ್‌ವುಡ್, ನಾಲ್ಕು ಓವರ್‌ಗಳಲ್ಲಿ ಕೇವಲ 19 ರನ್ ಬಿಟ್ಟುಕೊಟ್ಟರು. ಅವರು ಈ ಋತುವಿನಲ್ಲಿ ವೇಗದ ಬೌಲಿಂಗ್‌ನ ಮುಂಚೂಣಿಯಲ್ಲಿದ್ದಾರೆ.

Story first published: Sunday, May 8, 2022, 10:10 [IST]
Other articles published on May 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X