ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಜಡೇಜಾ ಅಲ್ಲ, ರುತುರಾಜ್ ಅಲ್ಲ; ಈತನೇ ಸಿಎಸ್‌ಕೆ ಭವಿಷ್ಯದ ನಾಯಕ ಎಂದ ಸುರೇಶ್ ರೈನಾ

IPL 2023: All-rounder Sam Curran Is CSKs Future Captain Says Suresh Raina

2023ರ ಐಪಿಎಲ್ ಋತುವಿಗಾಗಿ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರ ಶುಕ್ರವಾರದಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಮತ್ತು ತಂಡದ ಅಧಿಕಾರಿಗಳು ಮಿನಿ ಹರಾಜಿಗಾಗಿ ಈಗಾಗಲೇ ಕೊಚ್ಚಿಗೆ ಬಂದಿಳಿದಿದ್ದಾರೆ.

405 ಆಟಗಾರರ ಹೆಸರುಗಳು ಐಪಿಎಲ್ 2023ರ ಪಂದ್ಯಾವಳಿಗೂ ಮೊದಲು ಹರಾಜಾಗುವ ಅಂತಿಮ ಪಟ್ಟಿಯಲ್ಲಿವೆ. ಈ ಮೊದಲು ಮಿನಿ ಹರಾಜಿಗೆ 991 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದರು ಎಂಬುದನ್ನು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರಬೇಕು.

IPL 2023: ಮಿನಿ ಹರಾಜು ಯಾವ ಟಿವಿ ಚಾನೆಲ್‌ನಲ್ಲಿ ನೇರಪ್ರಸಾರ, ಉಚಿತ ಲೈವ್ ಸ್ಟ್ರೀಮಿಂಗ್, ಸಮಯದ ವಿವರIPL 2023: ಮಿನಿ ಹರಾಜು ಯಾವ ಟಿವಿ ಚಾನೆಲ್‌ನಲ್ಲಿ ನೇರಪ್ರಸಾರ, ಉಚಿತ ಲೈವ್ ಸ್ಟ್ರೀಮಿಂಗ್, ಸಮಯದ ವಿವರ

ಅವರಲ್ಲಿ ಫ್ರಾಂಚೈಸಿಗಳು 369 ಆಟಗಾರರನ್ನು ಮಾತ್ರ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು, ನಂತರ 10 ತಂಡಗಳಿಂದ 36 ಹೆಸರುಗಳನ್ನು ಸೇರಿಸಲಾಯಿತು, ಆಗ ಹರಾಜಾಗುವ ಪಟ್ಟಿಯ ಸಂಖ್ಯೆ 405ಕ್ಕೆ ಏರಿತು.

ಸ್ಯಾಮ್ ಕರ್ರಾನ್ ಅವರನ್ನು 19.5 ಕೋಟಿ ರೂ.ಗೆ ಖರೀದಿ

ಸ್ಯಾಮ್ ಕರ್ರಾನ್ ಅವರನ್ನು 19.5 ಕೋಟಿ ರೂ.ಗೆ ಖರೀದಿ

ಇನ್ನು 2023ರ ಐಪಿಎಲ್‌ಗಾಗಿ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರ್ರಾನ್ ಹಾಟ್ ಫೇವರಿಟ್‌ಗಳಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಯನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಹರಾಜಿನ ಒಂದು ದಿನದ ಮೊದಲು ಅಂದರೆ ಗುರುವಾರದಂದು ಈ ಹಿಂದಿನ ಐಪಿಎಲ್ ಆಟಗಾರರು ಅಣಕು ಮಿನಿ ಹರಾಜಿನಲ್ಲಿ ಭಾಗವಹಿಸಿದ್ದರು. ಈ ಅಣಕು ಹರಾಜಿನಲ್ಲಿ "ಚಿನ್ನ ಥಲಾ' ಎಂದೇ ಜನಪ್ರಿಯವಾಗಿರುವ ಮಾಜಿ ಸಿಎಸ್‌ಕೆ ಬ್ಯಾಟರ್ ಸುರೇಶ್ ರೈನಾ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದರು ಮತ್ತು ಅವರು ಸ್ಯಾಮ್ ಕರ್ರಾನ್ ಅವರನ್ನು 19.5 ಕೋಟಿ ರೂ.ಗೆ ಖರೀದಿಸಿದರು.

ಸಿಎಸ್‌ಕೆ ತಂಡದ ಒಟ್ಟು ಪರ್ಸ್ ಮೌಲ್ಯ 20.45 ಕೋಟಿ

ಸಿಎಸ್‌ಕೆ ತಂಡದ ಒಟ್ಟು ಪರ್ಸ್ ಮೌಲ್ಯ 20.45 ಕೋಟಿ

ಸಿಎಸ್‌ಕೆ ತಂಡದ ಒಟ್ಟು ಪರ್ಸ್ ಮೌಲ್ಯ 20.45 ಕೋಟಿಯಲ್ಲಿ 19.5 ಕೋಟಿ ರೂ.ಗಳಿಗೆ ಖರೀದಿಸಿದ ನಂತರ ಸುರೇಶ್ ರೈನಾ ಅವರು ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರ್ರಾನ್ ಕುರಿತು ದೊಡ್ಡ ಹೇಳಿಕೆ ನೀಡಿದರು.

ಸ್ಯಾಮ್ ಕರ್ರಾನ್ ಸಿಎಸ್‌ಕೆ ತಂಡದ ಭವಿಷ್ಯದ ನಾಯಕರಾಗಬಹುದು ಎಂಬ ಕಾರಣಕ್ಕೆ ಅವರನ್ನು ಇಷ್ಟು ದೊಡ್ಡ ಬೆಲೆಗೆ ಆಯ್ಕೆ ಮಾಡಿದೆ ಎಂದು ಸುರೇಶ್ ರೈನಾ ತಿಳಿಸಿದರು.

ಸ್ಯಾಮ್ ಕರ್ರಾನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ

"ಸ್ಯಾಮ್ ಕರ್ರಾನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭವಿಷ್ಯದ ನಾಯಕರಾಗಬಹುದು" ಎಂದು ಇಂಗ್ಲೆಂಡ್ ಆಲ್‌ರೌಂಡರ್‌ನನ್ನು ತಮ್ಮ ತಂಡಕ್ಕೆ ಕರೆತರಲು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೀರಿಸಿದ ನಂತರ ಸುರೇಶ್ ರೈನಾ ಹೇಳಿದರು.

ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ ಅನಿಲ್ ಕುಂಬ್ಳೆ ಕೂಡ ತಮ್ಮ ತಂಡವು ಸ್ಯಾಮ್ ಕರ್ರಾನ್‌ನತ್ತ ನೋಡಬಹುದೆಂದು ಭಾವಿಸಿದರು. "ಕರ್ರಾನ್ ಮುಂಬೈ ಇಂಡಿಯನ್ಸ್ ತಂಡಕ್ಕೆ 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ತರುತ್ತಾರೆ," ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟರು.

ಬೆನ್ ಸ್ಟೋಕ್ಸ್‌ರನ್ನು 19 ಕೋಟಿ ರೂ. ಬೆಲೆಗೆ ಖರೀದಿಸಿದ ಪಂಜಾಬ್

ಬೆನ್ ಸ್ಟೋಕ್ಸ್‌ರನ್ನು 19 ಕೋಟಿ ರೂ. ಬೆಲೆಗೆ ಖರೀದಿಸಿದ ಪಂಜಾಬ್

ಇನ್ನು ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಬಹು ಫ್ರಾಂಚೈಸಿಗಳಿಂದ ಹೆಚ್ಚಿನ ಆಸಕ್ತಿಯನ್ನು ಗಳಿಸಿದರು. ಅವರಲ್ಲಿ ಐವರು ಫ್ರಾಂಚೈಸಿಗಲು ಇಂಗ್ಲೆಂಡ್ ಟೆಸ್ಟ್ ನಾಯಕನಿಗೆ ಪೈಪೋಟಿಯಿಂದ ಬಿಡ್ ಮಾಡಿದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಇಯಾನ್ ಮಾರ್ಗನ್ ಅವರು ಬೆನ್ ಸ್ಟೋಕ್ಸ್‌ರನ್ನು 19 ಕೋಟಿ ರೂ. ಬೆಲೆಗೆ ಖರೀದಿಸಿದರು.

"ಬೆನ್ ಸ್ಟೋಕ್ಸ್ ಪ್ರತಿ ಪೈಸೆಗೆ ಯೋಗ್ಯರು. ಅವರು ನಾಯಕತ್ವವನ್ನು ವಹಿಸಿಕೊಳ್ಳುವುದು ಮಾತ್ರವಲ್ಲದೆ ಒತ್ತಡದಲ್ಲಿ ಹೆಚ್ಚಿನ ಅನುಭವವನ್ನು ತರುತ್ತಾರೆ. ಪಂಜಾಬ್ ಕಿಂಗ್ಸ್ ತಂಡದ ಪ್ರದರ್ಶನದ ದೃಷ್ಟಿಯಿಂದ ಇದು ಅಗತ್ಯವಿದೆ," ಎಂದು ಇಯಾನ್ ಮಾರ್ಗನ್ ತಿಳಿಸಿದರು.

ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 23ರ ಮಧ್ಯಾಹ್ನ 2:30ಕ್ಕೆ

ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 23ರ ಮಧ್ಯಾಹ್ನ 2:30ಕ್ಕೆ

ಇದೇ ವೇಳೆ ಸುರೇಶ್ ರೈನಾ ಮತ್ತು ಅನಿಲ್ ಕುಂಬ್ಳೆ ಅವರು ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗೆ ಸರಿಹೊಂದುತ್ತಾರೆ ಎಂದು ಅಭಿಪ್ರಾಯಪಟ್ಟರು.

ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 23ರ ಶುಕ್ರವಾರದ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ. ಟಿವಿ ಪಟ್ಟಿಗಳ ಪ್ರಕಾರ, ಮಿನಿ ಹರಾಜು ಸುಮಾರು ರಾತ್ರಿ 9:00ಕ್ಕೆ ಕೊನೆಗೊಳ್ಳುತ್ತದೆ.

ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಶುಕ್ರವಾರ ಮಧ್ಯಾಹ್ನ ಐಪಿಎಲ್ ಹರಾಜನ್ನು ನೇರ ಪ್ರಸಾರ ಮಾಡಲಿದೆ. ಅಭಿಮಾನಿಗಳು ಹರಾಜನ್ನು ವೀಕ್ಷಿಸಬಹುದಾದ ಟಿವಿ ಚಾನೆಲ್‌ಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

Story first published: Thursday, December 22, 2022, 22:45 [IST]
Other articles published on Dec 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X