ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಸಿಎಸ್‌ಕೆ ತಂಡಕ್ಕೆ ಈತನೇ ಮುಂದಿನ ಹೊಸ ನಾಯಕ; ಎಂಎಸ್ ಧೋನಿ ಯುಗಾಂತ್ಯ?

IPL 2023: Ben Stokes Will Be Captain To CSK After MS Dhoni Says Scott Styris

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ನಡೆದ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ.

16.25 ಕೋಟಿ ರೂಪಾಯಿಗೆ ಬೆನ್ ಸ್ಟೋಕ್ಸ್ ಅವರನ್ನು 4 ಬಾರಿಯ ಐಪಿಎಲ್ ಚಾಂಪಿಯನ್ ಸಿಎಸ್‌ಕೆ ತಂಡ ಖರೀದಿ ಮಾಡಿತು. ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ಬೆನ್ ಸ್ಟೋಕ್ಸ್, ಚೆನ್ನೈ ತಂಡದಲ್ಲಿ ಭವಿಷ್ಯದ ನಾಯಕನ ಆಯ್ಕೆಯಾಗಿಯೂ ಪರಿಗಣಿಸಲ್ಪಟ್ಟಿದ್ದಾರೆ.

IPL 2023: 16ನೇ ಐಪಿಎಲ್ ಆವೃತ್ತಿ ಆರಂಭದ ದಿನಾಂಕ ಪಕ್ಕಾ?; ಈ ದಿನದಿಂದ ಅದ್ಧೂರಿ ಚಾಲನೆIPL 2023: 16ನೇ ಐಪಿಎಲ್ ಆವೃತ್ತಿ ಆರಂಭದ ದಿನಾಂಕ ಪಕ್ಕಾ?; ಈ ದಿನದಿಂದ ಅದ್ಧೂರಿ ಚಾಲನೆ

ಇದೇ ವೇಳೆ ನ್ಯೂಜಿಲೆಂಡ್‌ನ ಮಾಜಿ ಆಲ್‌ರೌಂಡರ್ ಸ್ಕಾಟ್ ಸ್ಟೈರಿಸ್, ಐಪಿಎಲ್ ಲೀಗ್‌ನ 16ನೇ ಆವೃತ್ತಿಗೆ ಮುಂಚಿತವಾಗಿ ಇಂಗ್ಲೆಂಡ್ ಸ್ಟಾರ್ ಅಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ಎಂಎಸ್ ಧೋನಿಯಿಂದ ನಾಯಕತ್ವ ಕ್ಯಾಪ್ ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಒಪ್ಪಿಕೊಳ್ಳುತ್ತಾರೆಯೇ?

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಒಪ್ಪಿಕೊಳ್ಳುತ್ತಾರೆಯೇ?

ಬೆನ್ ಸ್ಟೋಕ್ಸ್ ನಿಸ್ಸಂದೇಹವಾಗಿ ವಿಶ್ವ ಕ್ರಿಕೆಟ್‌ನಲ್ಲಿ ಹೆಚ್ಚು ಬೇಡಿಕೆಯಿರುವ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರ ಐಪಿಎಲ್ ವೃತ್ತಿಜೀವನದ ಅವಧಿಯಲ್ಲಿ ಬ್ಯಾಟ್ ಮತ್ತು ಬೌಲ್‌ನೊಂದಿಗೆ ಏನು ಮಾಡಬಹುದು ಎಂಬುದನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ಆದರೆ, ಬೆನ್ ಸ್ಟೋಕ್ಸ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಒಪ್ಪಿಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಜಿಯೋ ಸಿನಿಮಾದ ಮಾತುಕತೆಯಲ್ಲಿ ಮಾತನಾಡಿದ ಸ್ಕಾಟ್ ಸ್ಟೈರಿಸ್, ಕಳೆದ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ಅವರೊಂದಿಗೆ ಮಾಡಿದಂತೆಯೇ ಎಂಎಸ್ ಧೋನಿ ಅವರು ನಾಯಕತ್ವದ ಕ್ಯಾಪ್ ಅನ್ನು ಬೆನ್ ಸ್ಟೋಕ್ಸ್‌ಗೆ ನೇರವಾಗಿ ವರ್ಗಾಯಿಸುತ್ತಾರೆ ಎಂದು ತಿಳಿಸಿದರು.

ಬೆನ್ ಸ್ಟೋಕ್ಸ್ ಸಿಎಸ್‌ಕೆ ನಾಯಕರಾಗುತ್ತಾರೆ

ಬೆನ್ ಸ್ಟೋಕ್ಸ್ ಸಿಎಸ್‌ಕೆ ನಾಯಕರಾಗುತ್ತಾರೆ

"ನನಗೆ ಅನಿಸುತ್ತದೆ, ಬೆನ್ ಸ್ಟೋಕ್ಸ್ ನಾಯಕರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಎಂಎಸ್ ಧೋನಿ ನಾಯಕತ್ವವನ್ನು ಪಾಸ್ ಮಾಡಲು ಪ್ರಯತ್ನಿಸುವುದನ್ನು ನಾವು ನೋಡಿದ್ದೇವೆ. ಅವರು ಐಪಿಎಲ್ ನಡುವೆ ನಿಯಮಿತವಾಗಿ ಕ್ರಿಕೆಟ್ ಆಡುತ್ತಿಲ್ಲ. ಎಂಎಸ್ ಧೋನಿ ನಾಯಕತ್ವ ವರ್ಗಾಯಿಸಲು ಇದು ಒಂದು ಅವಕಾಶವೆಂದುಕೊಳ್ಳುತ್ತೇನೆ. ಅದನ್ನು ತಕ್ಷಣವೇ ಮಾಡುತ್ತಾರೆ ಮತ್ತು ಬೆನ್ ಸ್ಟೋಕ್ಸ್ ಸಿಎಸ್‌ಕೆ ನಾಯಕರಾಗುತ್ತಾರೆ," ಎಂದು ಮಾಜಿ ಕಿವೀಸ್ ಆಟಗಾರ ಸ್ಕಾಟ್ ಸ್ಟೈರಿಸ್ ಹೇಳಿದರು.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಕೊನೆಯ ಋತುವಿನಲ್ಲಿ ಆಡುತ್ತಿರುವ ಎಂಎಸ್ ಧೋನಿ, ತಮ್ಮ ಉತ್ತರಾಧಿಕಾರಿಯನ್ನು ಹುಡುಕುವ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ಕಳೆದ ವರ್ಷ ರವೀಂದ್ರ ಜಡೇಜಾಗೆ ಪಾತ್ರವನ್ನು ನೀಡುವ ಪ್ರಕ್ರಿಯೆಯು ಹಿನ್ನಡೆಯಾಯಿತು. ರವೀಂದ್ರ ಜಡೇಜಾ ಋತುವಿನ ಮಧ್ಯದಲ್ಲಿ ಜವಾಬ್ದಾರಿಯನ್ನು ತ್ಯಜಿಸಲು ನಿರ್ಧರಿಸಿದರು, ಮತ್ತೆ ಎಂಎಸ್ ಧೋನಿ ಸಿಎಸ್‌ಕೆ ತಂಡದ ನಾಯಕನ ಜವಾಬ್ದಾರಿ ಹೊತ್ತಿದ್ದರು.

ಬೆನ್ ಸ್ಟೋಕ್ಸ್ ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ತಂಡಕ್ಕೆ ನಾಯಕತ್ವದ ಅಭ್ಯರ್ಥಿಯಾಗಿ ಕಂಡುಬಂದರೆ, ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದ ಭಾರವನ್ನು ಹಾಕಲು ನಿರ್ಧರಿಸುವ ಮೊದಲು ಸ್ವಲ್ಪ ಸಮಯಗಳ ಕಾಲ ತಂಡದಲ್ಲಿ ನಿರಂತರವಾಗಿ ಆಡಲು ಬಯಸಬಹುದು.

ಏಪ್ರಿಲ್ 1ರಂದು ಐಪಿಎಲ್ ಲೀಗ್‌ಗೆ ಚಾಲನೆ

ಏಪ್ರಿಲ್ 1ರಂದು ಐಪಿಎಲ್ ಲೀಗ್‌ಗೆ ಚಾಲನೆ

ಐಪಿಎಲ್ 2023 ಮಿನಿ ಹರಾಜಿನ ಮುಕ್ತಾಯದ ನಂತರ ಶ್ರೀಮಂತ ಕ್ರಿಕೆಟ್ ಲೀಗ್‌ನ ಪ್ರಾರಂಭದ ದಿನಾಂಕವನ್ನು ದೃಢೀಕರಿಸಲಾಗಿದೆ. ಇನ್‌ಸೈಡ್‌ಸ್ಪೋರ್ಟ್ ವರದಿಯ ಪ್ರಕಾರ, ಐಪಿಎಲ್‌ನ ಎಲ್ಲಾ 10 ಫ್ರಾಂಚೈಸಿಗಳಿಗೆ ಲೀಗ್‌ ಪ್ರಾರಂಭದ ಬಗ್ಗೆ ತಿಳಿಸಲು ಬಿಸಿಸಿಐ ಮೇಲ್ ಕಳಿಸಿದೆಯಂತೆ, ಆ ಮೇಲ್‌ನಲ್ಲಿ ಏಪ್ರಿಲ್ 1ರಂದು 16ನೇ ಆವೃತ್ತಿಯ ಐಪಿಎಲ್ ಲೀಗ್‌ಗೆ ಚಾಲನೆ ನೀಡಲಾಗುವುದು ಎಂದು ಬರೆಯಲಾಗಿದೆ ಎಂದು ತಿಳಿಸಿದೆ.

Story first published: Saturday, December 24, 2022, 15:26 [IST]
Other articles published on Dec 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X