
ಆಡುವ 11ರ ಬಳಗದಲ್ಲಿ ಬೆನ್ ಸ್ಟೋಕ್ಸ್ ಎಲ್ಲಿ ಸ್ಥಾನ
ಐಪಿಎಲ್ 2023ರಲ್ಲಿ ಸಿಎಸ್‌ಕೆ ತಂಡದ ಆಡುವ 11ರ ಬಳಗದಲ್ಲಿ ಬೆನ್ ಸ್ಟೋಕ್ಸ್ ಎಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದನ್ನು ನೋಡಲು ಕುತೂಹಲಕರವಾಗಿದೆ. ಬೆನ್ ಸ್ಟೋಕ್ಸ್ ಜೊತೆಗೆ ಇಂಗ್ಲೆಂಡ್ ತಂಡದ ಸಹ ಆಟಗಾರ ಮೊಯಿನ್ ಅಲಿ, ನ್ಯೂಜಿಲೆಂಡ್ ಓಪನರ್ ಡೆವೊನ್ ಕಾನ್ವೇ ಮತ್ತು ಶ್ರೀಲಂಕಾ ಸ್ಪಿನ್ನರ್ ಮಹೀಶ್ ತೀಕ್ಷಣ ಅವರನ್ನು ಮೊದಲ ಆಯ್ಕೆಯ ನಾಲ್ವರು ವಿದೇಶಿ ಆಟಗಾರರಾಗಿ ಆಡಿಸಬಹುದು.
ಬೆನ್ ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಹೊರತಾಗಿ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡ ರವೀಂದ್ರ ಜಡೇಜಾ ಮತ್ತು ದೀಪಕ್ ಚಹಾರ್, ಶಿವಂ ದುಬೆ ಅವರಂತಹ ಇತರ ಉಪಯುಕ್ತ ಆಲ್‌ರೌಂಡರ್‌ಗಳನ್ನು ಹೊಂದಿದೆ.

ಬೆನ್ ಸ್ಟೋಕ್ಸ್ ಅವರಿಗೆ ನಾಯಕತ್ವದ ಜವಾಬ್ದಾರಿ
ರವೀಂದ್ರ ಜಡೇಜಾ ಐಪಿಎಲ್ 2023ರ ಸಂಪೂರ್ಣ ಅವಧಿಗೆ ಫಿಟ್ ಆಗಿದ್ದರೆ, ಅವರೊಂದಿಗಿನ ಸಿಎಸ್‌ಕೆ ಪ್ರಯೋಗದ ನಂತರ ಬಹುಶಃ ಬೆನ್ ಸ್ಟೋಕ್ಸ್ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಬಹುದು. ರವೀಂದ್ರ ಜಡೇಜಾ ನಾಯಕನಾಗಿ ಐಪಿಎಲ್ 2022ರಲ್ಲಿ ಸಿಎಸ್‌ಕೆ ಸಂಪೂರ್ಣ ವಿಫಲವಾಗಿದೆ.
ಕಳೆದ ಋತುವಿನ ಮಧ್ಯದಲ್ಲಿ ರವೀಂದ್ರ ಜಡೇಜಾ ಬದಲಿಗೆ ಮತ್ತೆ ಎಂಎಸ್ ಧೋನಿ ನಾಯಕತ್ವ ವಹಿಸಿಕೊಂಡರು. ಇದೇ ವೇಳೆ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ನಾಯಕತ್ವದ ಹೊರೆಯನ್ನು ನಿಭಾಯಿಸಲು ಪ್ರಬುದ್ಧತೆ ತೋರಿಸಿದ್ದಾರೆ ಮತ್ತು ನಾಯಕತ್ವದಲ್ಲಿ ಎಂಎಸ್ ಧೋನಿಗೆ ಉತ್ತಮ ಬದಲಿಯಾಗಲಿದ್ದಾರೆ.

ಐಪಿಎಲ್ 2023ರಲ್ಲಿ ಸಿಎಸ್‌ಕೆ ಸಂಭಾವ್ಯ ಆಡುವ 11ರ ಬಳಗ
ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಎಂಎಸ್ ಧೋನಿ (ನಾಯಕ/ ವಿಕೆಟ್ ಕೀಪರ್), ರವೀಂದ್ರ ಜಡೇಜಾ, ದೀಪಕ್ ಚಾಹರ್, ಮುಖೇಶ್ ಚೌಧರಿ, ಮಹೀಶ್ ತೀಕ್ಷಣ.

ಐಪಿಎಲ್ 2023ರಲ್ಲಿ ಸಿಎಸ್‌ಕೆ ಪೂರ್ಣ ತಂಡ
ವಿಕೆಟ್ ಕೀಪರ್‌ಗಳು: ಎಂಎಸ್ ಧೋನಿ, ಡೆವೊನ್ ಕಾನ್ವೇ
ಬ್ಯಾಟರ್‌ಗಳು: ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಅಜಿಂಕ್ಯ ರಹಾನೆ.
ಆಲ್‌ರೌಂಡರ್‌ಗಳು: ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಬೆನ್ ಸ್ಟೋಕ್ಸ್, ಕೈಲ್ ಜೇಮಿಸನ್, ಅಜಯ್ ಮಂಡಲ್, ಭಗತ್ ವರ್ಮಾ, ನಿಶಾಂತ್ ಸಿಂಧು.
ಬೌಲರ್‌ಗಳು: ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ.