ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ವಾಸಿಂ ಜಾಫರ್ ನೇಮಕ

IPL 2023: Former Cricketer Wasim Zafar Appointed As Batting Coach Of Punjab Kings

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 16ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ನೇಮಕಗೊಂಡಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಬ್ರಾಡ್ ಹಡ್ಡಿನ್ ಅವರು ಸಹಾಯಕ ಬ್ಯಾಟಿಂಗ್ ಕೋಚ್ ಜವಾಬ್ದಾರಿ ಹೊರಲಿದ್ದಾರೆ.

ಈ ಕುರಿತು, ಪಂಜಾಬ್ ಮೂಲದ ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್‌ನ ಅಧಿಕೃತ ಟ್ವಿಟ್ಟರ್‌ನಲ್ಲಿ ವಾಸಿಂ ಜಾಫರ್ ಅವರ ನೇಮಕವನ್ನು ಘೋಷಿಸಿದ್ದು, ಅವರು ಕೂಡ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಿದೆ.

IND vs NZ: ಐರ್ಲೆಂಡ್ ಬೌಲರ್ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಭುವನೇಶ್ವರ್ ಕುಮಾರ್IND vs NZ: ಐರ್ಲೆಂಡ್ ಬೌಲರ್ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಭುವನೇಶ್ವರ್ ಕುಮಾರ್

"ಯಾರಿಗಾಗಿ ನಾವು ಹೆಚ್ಚಾಗಿ ಕಾಯುತ್ತಿದ್ದೆವೆಯೋ ಅವರು ನಮ್ಮ ತಂಡದ ಹೊಸ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಈ ಮೂಲಕ ವಾಸಿಂ ಜಾಫರ್ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ರಾಜನನ್ನು ಸ್ವಾಗತಿಸಲು ಒಂದು ಮೆಮ್‌ನೊಂದಿಗೆ ಉತ್ತರಿಸಿ!" ಎಂದು ಪಂಜಾಬ್ ಕಿಂಗ್ಸ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

2021ರ ಋತುವಿನವರೆಗೆ ಸಹಾಯಕ ಸಿಬ್ಬಂದಿಯೊಂದಿಗೆ ನಿಕಟವಾಗಿ ಕೆಲಸ

ಇದಕ್ಕೂ ಮೊದಲು ಮಾಜಿ ಬ್ಯಾಟ್ಸ್‌ಮನ್ ವಾಸಿಂ ಜಾಫರ್ ಅವರು 2022ರ ಐಪಿಎಲ್ ಮೆಗಾ ಹರಾಜಿನ ಮುನ್ನಾದಿನ ತಮ್ಮ ಬ್ಯಾಟಿಂಗ್ ಕೋಚ್ ಆಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯಿಂದ ನಿರ್ಗಮಿಸುವುದಾಗಿ ಘೋಷಿಸಿದ್ದರು.

ವಾಸಿಂ ಜಾಫರ್ 2019ರಲ್ಲಿ ಆಗಿನ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಸೇರಿದ್ದರು ಮತ್ತು 2021ರ ಋತುವಿನವರೆಗೆ ಸಹಾಯಕ ಸಿಬ್ಬಂದಿಯೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು. ಸದ್ಯ ವಾಸಿಂ ಜಾಫರ್ ಬಾಂಗ್ಲಾದೇಶದ ಅಂಡರ್-19 ಮತ್ತು "ಎ' ತಂಡದ ಬ್ಯಾಟಿಂಗ್ ಸಲಹೆಗಾರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು

ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು

ಇನ್ನು ಪಂಜಾಬ್ ಕಿಂಗ್ಸ್ ತಂಡ ಮುಂಬರುವ ಋತುವಿನಲ್ಲಿ ತಮ್ಮ ಸಹಾಯಕ ಕೋಚ್ ಆಗಿ ಬ್ರಾಡ್ ಹಡ್ಡಿನ್ ಅವರನ್ನು ನೇಮಕ ಮಾಡುವುದಾಗಿ ಘೋಷಿಸಿದ್ದು, ಅದನ್ನೂ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ.

ನವೆಂಬರ್ 15ರಂದು ಎಲ್ಲಾ ಐಪಿಎಲ್ ತಂಡಗಳು ತಮ್ಮ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿವೆ. ಪ್ರತಿ ತಂಡವು ತಮ್ಮ ರೂ 90 ಕೋಟಿ ರೂಪಾಯಿ ಮೂಲ ಮಿತಿಯನ್ನು ಹೊರತುಪಡಿಸಿ ಹೆಚ್ಚುವರಿ 5 ಕೋಟಿ ರೂ.ಗಳನ್ನು ಹೊಂದಿರುತ್ತದೆ. ಮಿನಿ ಹರಾಜು, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ.

ಬ್ಯಾಗ್‌ನಲ್ಲಿ 32.20 ಕೋಟಿ ರೂ. ಇದೆ

ಬ್ಯಾಗ್‌ನಲ್ಲಿ 32.20 ಕೋಟಿ ರೂ. ಇದೆ

ಪಂಜಾಬ್ ಕಿಂಗ್ಸ್ ತಂಡ ತಮ್ಮ ಪಟ್ಟಿಯಿಂದ ಎಂಟು ಆಟಗಾರರನ್ನು ಕೈಬಿಡಲು ನಿರ್ಧರಿಸಿದ್ದು, ಕೈಬಿಟ್ಟ ಆಟಗಾರರೆಂದರೆ, ಮಯಾಂಕ್ ಅಗರ್ವಾಲ್, ವೈಭವ್ ಅರೋರಾ, ಬೆನ್ನಿ ಹೋವೆಲ್, ಇಶಾನ್ ಪೊರೆಲ್, ಅನ್ಶ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ರಿತ್ತಿಕ್ ಚಟರ್ಜಿ.

ಪಂಜಾಬ್ ಕಿಂಗ್ಸ್ ತಂಡದ ಉಳಿಸಿಕೊಂಡ ಆಟಗಾರರ ಪಟ್ಟಿ: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಭಾನುಕಾ ರಾಜಪಕ್ಸೆ, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಹರ್‌ಪ್ರೀತ್ ಬ್ರಾರ್, ರಾಜ್ ಬಾವಾ, ರಿಷಿ ಧವನ್, ಅಥರ್ವ ತಾಜ್ಡೆ, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್, ರಾಹುಲ್ ಚಹಾರ್, ನಾಥನ್ ಎಲ್ಲಿಸ್, ಬಲ್ತೇಜ್ ಸಿಂಗ್.

ಡಿಸೆಂಬರ್‌ನಲ್ಲಿ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಎರಡನೇ ಅತಿ ದೊಡ್ಡ ಪರ್ಸ್ ಮೌಲ್ಯವನ್ನು ಹೊಂದಿದ್ದು, ಅವರ ಬ್ಯಾಗ್‌ನಲ್ಲಿ 32.20 ಕೋಟಿ ರೂ. ಇದೆ.

Story first published: Wednesday, November 16, 2022, 22:40 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X