ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಬೆನ್‌ ಸ್ಟೋಕ್ಸ್, ಮಯಾಂಕ್ ಅಗರ್ವಾಲ್ ಈ ತಂಡ ಸೇರುತ್ತಾರೆ ಎಂದ ಭಾರತದ ಮಾಜಿ ಕ್ರಿಕೆಟಿಗ

IPL 2023: SRH May Go For Ben Stokes And Mayank Agarwal In IPL Mini Auction: Aakash Chopra

ಐಪಿಎಲ್ ಮಿನಿ ಹರಾಜಿಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ಆಟಗಾರರನ್ನು ಬಿಡುಗಡೆ ಮಾಡಿವೆ. ಕೆಲವು ತಂಡಗಳು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿದ್ದು, ಮಿನಿ ಹರಾಜಿನಲ್ಲಿ ಬದಲೀ ಆಟಗಾರರನ್ನು ಸೇರಿಸಿಕೊಳ್ಳಲು ಮುಂದಾಗಿವೆ.

ಈ ಬಾರಿ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್ ಹೆಸರು ಸೇರಿಸಿದ್ದು, ಅವರನ್ನು ಯಾವ ತಂಡ ಖರೀದಿ ಮಾಡಲಿದೆ ಎನ್ನುವ ಕುತೂಹಲ ಶುರುವಾಗಿದೆ. ಪರ್ಸ್‌ನಲ್ಲಿ ಹೆಚ್ಚಿನ ಹಣ ಉಳಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಬೆನ್‌ಸ್ಟೋಕ್ಸ್‌ರನ್ನು ಖರೀದಿಸಲು ಪೈಪೋಟಿಗೆ ಬೀಳುವ ಸಾಧ್ಯತೆ ಇದೆ.

ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆನ್‌ ಸ್ಟೋಕ್ಸ್ ಮತ್ತು ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿರುವ ಮಯಾಂಕ್ ಅಗರ್ವಾಲ್‌ರನ್ನು ಸನ್‌ರೈಸರ್ಸ್ ಹೈದರಾಬಾದ್ ಖರೀದಿ ಮಾಡಬಹುದು ಎಂದು ಹೇಳಿದ್ದಾರೆ.

IPL 2023: SRH ತಂಡದಿಂದ ಹೊರಬಿದ್ದ ಕೇನ್‌ ವಿಲಿಯಮ್ಸನ್‌ ಮೇಲೆ 3 ಫ್ರಾಂಚೈಸಿ ಕಣ್ಣು!IPL 2023: SRH ತಂಡದಿಂದ ಹೊರಬಿದ್ದ ಕೇನ್‌ ವಿಲಿಯಮ್ಸನ್‌ ಮೇಲೆ 3 ಫ್ರಾಂಚೈಸಿ ಕಣ್ಣು!

ಸನ್‌ರೈಸರ್ಸ್ ಹೈದರಾಬಾದ್ ಪರ್ಸ್‌ನಲ್ಲಿ 42.25 ಕೋಟಿ ರುಪಾಯಿ ಉಳಿದುಕೊಂಡಿದ್ದು, ಬೆನ್‌ ಸ್ಟೋಕ್ಸ್‌ರನ್ನು ಖರೀದಿಸಲಿದೆ. ಹೈದರಾಬಾದ್ ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್ ಮತ್ತು ರೊಮಾರಿಯೋ ಶೆಫರ್ಡ್ ಅವರನ್ನು ಬಿಡುಗಡೆ ಮಾಡಿದೆ. ತಂಡದಲ್ಲಿ ಬ್ಯಾಟಿಂಗ್‌ ದುರ್ಬಲವಾಗಿರುವುದರಿಂದ ಬೆನ್‌ ಸ್ಟೋಕ್ಸ್ ಮತ್ತು ಮಯಾಂಕ್ ಅಗರ್ವಾಲ್‌ರನ್ನು ಖರೀದಿಸಲಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

IPL 2023: SRH May Go For Ben Stokes And Mayank Agarwal In IPL Mini Auction: Aakash Chopra

ಹೈದರಾಬಾದ್ ಬೌಲಿಂಗ್ ಬಲಿಷ್ಠವಾಗಿದೆ

"ಹೈದರಾಬಾದ್‌ ಪರ್ಸ್‌ನಲ್ಲಿ 42 ಕೋಟಿ ರುಪಾಯಿ ಇಟ್ಟುಕೊಂಡಿದೆ. ಅವರು ತಂಡವನ್ನು ಸಂಪೂರ್ಣವಾಗಿ ಬದಲಾಯಿಸಲು ಸಿದ್ಧವಾಗಿದ್ದಾರೆ. ತಂಡದಲ್ಲಿ 12 ಆಟಗಾರರಿದ್ದಾರೆ, ಅದರಲ್ಲಿ6 ಮಂದಿ ವೇಗದ ಬೌಲರ್ ಇದ್ದಾರೆ. ಭುವನೇಶ್ವರ್ ಕುಮಾರ್, ಫಜಲ್ಹಾಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಮಾರ್ಕೊ ಜಾನ್ಸೆನ್, ಉಮ್ರಾನ್ ಮಲಿಕ್ ಮತ್ತು ಟಿ ನಟರಾಜನ್ ಇದ್ದು ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಅವರು ಬೌಲರ್ ಗಳನ್ನು ಖರೀದಿಸಲ್ಲ" ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

"ಅವರು ಮಯಾಂಕ್ ಅಗರ್ವಾಲ್‌ರನ್ನು ಖರೀದಿ ಮಾಡಬಹುದು. ಮನೀಶ್ ಪಾಂಡೆ ಖರೀದಿ ಬಗ್ಗೆ ಕೂಡ ಯೋಚಿಸಬಹುದು. ಆದರೆ, ಬೆನ್‌ ಸ್ಟೋಕ್ಸ್‌ರನ್ನು ಖಂಡಿತವಾಗಿಯೂ ಖರೀದಿ ಮಾಡಲು ಚಿಂತಿಸುತ್ತಾರೆ. ಅವರ ಬಳಿ ಸಾಕಷ್ಟು ಹಣವಿದೆ. ಬೌಲರ್ ಗಳು ಇರುವುದರಿಂದ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ಚಿಂತಿಸುತ್ತಿದೆ" ಎಂದು ಹೇಳಿದ್ದಾರೆ.

ಕೇನ್ ವಿಲಿಯಮ್ಸ್ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ಅಥವಾ ಏಡೆನ್ ಮಾರ್ಕ್ರಾಮ್ 2023ರ ಐಪಿಎಲ್‌ನಲ್ಲಿ ಹೈದರಾಬಾದ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

"ಅವರು ಬ್ಯಾಟರ್‌ಗಳು ಮತ್ತು ನಾಯಕನಿಗೆ ಶಾಪಿಂಗ್ ಮಾಡಬೇಕು. ಅವರು ಭುವನೇಶ್ವರ್ ಕುಮಾರ್‌ಗೆ ನಾಯಕತ್ವವನ್ನು ನೀಡಬಹುದೇ? ಅದನ್ನು ನಾನು ನೋಡಲು ಎದುರು ನೋಡುತ್ತಿದ್ದೇನೆ. ಈ ತಂಡದ ನಾಯಕ ಭುವನೇಶ್ವರ್ ಕುಮಾರ್ ಅಥವಾ ಏಡೆನ್ ಮಾರ್ಕ್ರಾಮ್ ಆಗಿರಬಹುದು. ನನಗೆ ಸಾಧ್ಯವಾಗುತ್ತಿಲ್ಲ. ಈ ತಂಡದಲ್ಲಿ ಮೂರನೇ ನಾಯಕನನ್ನು ನೀವು ಗುರುತಿಸಿ" ಎಂದು ಚೋಪ್ರಾ ಹೇಳಿದರು.

ಇತರ ಫ್ರಾಂಚೈಸಿಗಳಂತೆ ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಮಂಗಳವಾರ ಲೆಜೆಂಡರಿ ಆಲ್ ರೌಂಡರ್ ಡ್ವೇನ್ ಬ್ರಾವೋ ಅವರೊಂದಿಗಿನ 11 ವರ್ಷಗಳ ಅತ್ಯಂತ ಯಶಸ್ವಿ ಒಡನಾಟವನ್ನು ಕೊನೆಗೊಳಿಸಿತು. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಮುಂಚಿತವಾಗಿ ತಂಡಗಳು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಲು ಮಂಗಳವಾರ ಕೊನೆಯ ದಿನಾಂಕವಾಗಿತ್ತು.

Story first published: Wednesday, November 16, 2022, 19:36 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X