ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಡಿ ಫ್ಲಾಟ್ ಗೆದ್ದ ಮಿರ್ಜಾಪುರದ ಗೌರವ್

IPL : Garuav Kumar, Grand prize Winner of Jio Cricket Play Along 2018

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ 2018ರ ಅದ್ದೂರಿ ಬಹುಮಾನ ಗೆದ್ದ ಮಿರ್ಜಾಪುರದ ಹುಡುಗ, ಈಗ ಮುಂಬಯಿಯಲ್ಲಿ ಕನಸಿನ ಮನೆಯ ಒಡೆಯ! ಹಲವಾರು ಮಂದಿ ತಮ್ಮ ಕನಸಿನ ಮನೆ ಪಡೆಯಲು ತಮ್ಮ ಜೀವನದುದ್ದಕ್ಕೂ ಶ್ರಮಪಡುತ್ತಾರೆ. ಆದರೆ ಮಿರ್ಜಾಪುರದ ಗೌರವ್ ಕುಮಾರ್ ಎಂಬ ಈ ಯುವಕ ಅದನ್ನು ಒಂದೇ ಟಿ20 ಕ್ರಿಕೆಟ್ ಋತುವಿನಲ್ಲಿ ಗೆದ್ದಿದ್ದಾನೆ. ಇದು ಭಾರತೀಯರಿಗಾಗಿ ಜಿಯೋ ಡಿಜಿಟಲ್ ಲೈಫ್ ನೀಡುತ್ತಿರುವ ವಿಶಿಷ್ಟ ಅನುಭವ!

ಎಲ್ಲರಿಗೂ ಇಷ್ಟವಾಗುವ ಸಂಭ್ರಮದ ಅನುಭವ ಹಾಗೂ ದೊಡ್ಡ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಈ ವರ್ಷವೂ ತಂದಿದೆ - ಖೇಲೋ ಕ್ರಿಕೆಟ್, ಜಿಯೋ ಕ್ರಿಕೆಟ್! ಈಗ ಐಪಿಎಲ್ ಸೀಸನ್ ಆದರೆ, ಇದಕ್ಕೂ ಮುನ್ನ ಕಳೆದ ವರ್ಷದ ಟಿ20 ಸರಣಿಯಲ್ಲಿ ಜಿಯೋ ಪ್ಲೇ ಅಲಾಂಗ್ ನಲ್ಲಿ ಆಡಿದ ಗೌರವ್ ಗೆ ಅದೃಷ್ಟ ಒಲಿದಿದೆ.

ಐಪಿಎಲ್ ಟೂರ್ನಿಯಲ್ಲಿ ಆಟವಾಡಿ, ಆಕರ್ಷಕ ಬಹುಮಾನ ಗೆಲ್ಲಿರಿ

ಕನಸಿನ ಮನೆ ಪಡೆಯಲು ಜೀವನದುದ್ದಕ್ಕೂ ಶ್ರಮಪಡಬೇಕಾದ ಈ ಜಗತ್ತಿನಲ್ಲಿ, ಮಿರ್ಜಾಪುರದ ಗೌರವ್ ಕುಮಾರ್ ಎಂಬ ಯುವಕ 2018ರ ಟಿ20 ಕ್ರಿಕೆಟ್ ಖುತುವಿನಲ್ಲಿ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಅನ್ನು ನಿರಂತರವಾಗಿ ಆಡುವ ಮೂಲಕ ಅದನ್ನು ಒಂದೇ ಕ್ರಿಕೆಟ್ ಖುತುವಿನಲ್ಲಿ ಗೆದ್ದಿದ್ದಾನೆ. ನೆಲಹಾಸುಗಳಿಗೆ ಪ್ರಸಿದ್ಧವಾದ ಉತ್ತರ ಪ್ರದೇಶದ ಮಿರ್ಜಾಪುರದ ಗೌರವ್ ಕುಮಾರ್ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ನ ಭರ್ಜರಿ ಬಹುಮಾನ ಗೆಲ್ಲುವ ಮೂಲಕ ಮುಂಬಯಿ ದೊಂಬಿವಲಿಯ ಅಭಿವೃದ್ಧಿಶೀಲ ಪಲಾವಾ ಸಿಟಿಯಲ್ಲಿ 1 BHK ಫ್ಲಾಟ್ ಅನ್ನು ತನ್ನದಾಗಿಸಿಕೊಂಡಿದ್ದಾನೆ.

ಈ ವರ್ಷವೂ ಪ್ಲೇ ಅಲಾಂಗ್ ಲಭ್ಯ

ಈ ವರ್ಷವೂ ಪ್ಲೇ ಅಲಾಂಗ್ ಲಭ್ಯ

ಟಿ20 ಕ್ರಿಕೆಟ್ ಋತುವಿನಲ್ಲಿ ಈ ವಿಶಿಷ್ಟ ಜಿಯೋ ಡಿಜಿಟಲ್ ಲೈಫ್ ಅನುಭವದೊಡನೆ ಒಡನಾಡಲು ಹಾಗೂ ಆಕರ್ಷಕ ಬಹುಮಾನಗಳನ್ನು ಗೆಲ್ಲಲು ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಈ ವರ್ಷವೂ ಕ್ರಿಕೆಟ್ ಅಭಿಮಾನಿಗಳನ್ನು ಪ್ರೋತ್ಸಾಹಿಸುತ್ತಿದೆ. ಗೌರವ್ ಕುಮಾರ್ ಗೆಲುವಿನ ಕ್ಷಣಗಳನ್ನು ಎಲ್ಲರೂ ಯುಟ್ಯೂಬ್ ನಲ್ಲಿ ನೋಡಬಹುದಾಗಿದೆ. ಕಳೆದ ವರ್ಷದ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ ಆವೃತ್ತಿಯಲ್ಲಿ ಭರ್ಜರಿ ಬಹುಮಾನ ಗೆದ್ದ ಗೌರವ್ ಮತ್ತು ಆತನ ಕುಟುಂಬದ ಸಂಭ್ರಮ ಹಾಗೂ ಭಾವನೆಗಳನ್ನು ಈ ಕಿರುಚಿತ್ರ ಸುಂದರವಾಗಿ ಸೆರೆಹಿಡಿದಿದೆ.

ರಾತ್ರಿಯ ಊಟ ತಪ್ಪಿಸಿದ್ದು ಸಾರ್ಥವಾಯಿತು

ರಾತ್ರಿಯ ಊಟ ತಪ್ಪಿಸಿದ್ದು ಸಾರ್ಥವಾಯಿತು

"ಮುಂಬಯಿಯಲ್ಲಿ ಮನೆಯೊಂದನ್ನು ಗೆಲ್ಲುತ್ತೇನೆಂದು ಕನಸಿನಲ್ಲೂ ಎಣಿಸಿರಲಿಲ್ಲ!" ಎಂದು ಗೌರವ್ ಚಿತ್ರದ ಪ್ರಾರಂಭದಲ್ಲಿ ಹಿಗ್ಗಿನಿಂದ ಹೇಳಿದ್ದಾನೆ. ಈ ಭರ್ಜರಿ ಬಹುಮಾನ ಗೆಲ್ಲುವ ಪ್ರಯತ್ನದಲ್ಲಿ ನಿರಂತರವಾಗಿ ಆಡಿದ್ದರ ಬಗ್ಗೆ ಹೇಳುತ್ತ, ಗೌರವ್ "ಆಪ್‌ನಲ್ಲಿ 200ರಿಂದ 300 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತಿದ್ದ ದಿನಗಳೂ ಇದ್ದವು. ಕೆಲ ದಿನಗಳಲ್ಲಿ ಸಂಜೆ ನಾಲ್ಕು ಗಂಟೆಗೊಂದು, ಎಂಟು ಗಂಟೆಗೆ ಇನ್ನೊಂದು ಪಂದ್ಯ ಇರುತ್ತಿತ್ತು. ಅಂತಹ ದಿನಗಳಲ್ಲಿ ರಾತ್ರಿಯ ಊಟ ತಪ್ಪಿಸಿದ್ದೂ ಉಂಟು" ಎಂದು ಹೇಳಿದ್ದಾನೆ.

ಗ್ಲೋಬಲ್ ಮೊಬೈಲ್ ಅವಾರ್ಡ್ಸ್ 2019 ಗೆದ್ದ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌

ಜಿಯೋ ಕಾರಣದಿಂದ ನನಗೆ ಈ ಮನೆ ಸಿಕ್ಕಿದೆ

ಜಿಯೋ ಕಾರಣದಿಂದ ನನಗೆ ಈ ಮನೆ ಸಿಕ್ಕಿದೆ

"ಜಿಯೋ ಕಾರಣದಿಂದ ನನಗೆ ಈ ಮನೆ ಸಿಕ್ಕಿದೆ, ನನಗೆ ಸಂಭ್ರಮವಾಗುತ್ತಿದೆ" ಎಂದು ಕುಮಾರ್ ಚಿತ್ರದಲ್ಲಿ ಹೇಳಿದ್ದಾನೆ.ಮುಂಬಯಿಯ ಮನೆಗೆ ಭೇಟಿಕೊಟ್ಟ ಸಂದರ್ಭದಲ್ಲಿ ಭಾವುಕರಾಗಿದ್ದ ಗೌರವ್‌ನ ತಾಯಿ, "ನಮ್ಮ ಮಗ ಜಿಯೋ ಕಾರಣದಿಂದ ಈ ಮನೆ ಗೆದ್ದಿರುವುದರಿಂದ... ನಮ್ಮ ಅದೃಷ್ಟವೇ ತಿರುಗಿದೆ!" ಎಂದು ಸಂತೋಷದಿಂದ ಹೇಳಿದ್ದಾರೆ.ಮನೆಯ ಕೀಲಿ ಪಡೆದುಕೊಳ್ಳಲು ಮುಂಬಯಿಗೆ ಪ್ರಯಾಣ ಬೆಳೆಸಿದ್ದ ಗೌರವ್ ಕುಮಾರ್, "ಮುಂಬಯಿಯಲ್ಲಿ ನಮಗೊಂದು ಮನೆ ಸಿಗಬಹುದು ಎಂದು ನಾನು ಯೋಚಿಸಿಯೇ ಇರಲಿಲ್ಲ, ಈಗ ನನ್ನ ಭಾವನೆಗಳನ್ನು ವರ್ಣಿಸುವುದಕ್ಕೇ ಆಗುತ್ತಿಲ್ಲ" ಎಂದು ಹೇಳಿದ್ದಾನೆ.

ಪ್ಲೇ ಅಲಾಂಗ್ ಜನರನ್ನು ಒಟ್ಟಿಗೆ ಸೇರಿಸಿತು

ಪ್ಲೇ ಅಲಾಂಗ್ ಜನರನ್ನು ಒಟ್ಟಿಗೆ ಸೇರಿಸಿತು

ವೀಕ್ಷಕರನ್ನು ಆಟಗಾರರನ್ನಾಗಿ ಬದಲಿಸುವ ಮೂಲಕ, ಭಾರತವನ್ನು ತನ್ನ ಅಚ್ಚುಮೆಚ್ಚಿನ ತಂಡ ಹಾಗೂ ಆಟಗಾರರಿಗೆ ಇನ್ನಷ್ಟು ಹತ್ತಿರ ತರುವ ಮೂಲಕ ದೇಶದ ಅತ್ಯಂತ ಜನಪ್ರಿಯ ಆಟವನ್ನು ಸಂಭ್ರಮಿಸಲು ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಜನರನ್ನು ಒಟ್ಟಿಗೆ ಸೇರಿಸಿತು. ಪಂದ್ಯದ ಪ್ರಸಾರಕ್ಕೆ ಹೊಂದಿಕೊಂಡಂತೆ ಪ್ರತಿ ಚೆಂಡಿನ ಫಲಿತಾಂಶ ಏನಾಗಬಹುದು ಎಂದು ಮೈಜಿಯೋ ಆಪ್‌ನಲ್ಲಿ ಹೇಳುವ ಅವಕಾಶವನ್ನು ಈ ಅಪ್ಲಿಕೇಶನ್ ಆಟಗಾರರಿಗೆ ನೀಡುತ್ತದೆ. ಸರಿಯುತ್ತರ ನೀಡಿದ ಆಟಗಾರರಿಗೆ ಅಂಕಗಳು ದೊರಕುತ್ತವೆ. ಸರಿಯುತ್ತರಗಳನ್ನು ಆರಿಸುವ ಮೂಲಕ ಟ್ರಿವಿಯಾ ಪ್ರಶ್ನೆಗಳಿಗೆ ಉತ್ತರಿಸಿ ಆಟಗಾರರು ಹೆಚ್ಚುವರಿ ಅಂಕಗಳನ್ನೂ ಪಡೆಯಬಹುದು.

ಫಲಿತಾಂಶವನ್ನು ತತ್‌ಕ್ಷಣದಲ್ಲಿ ಊಹಿಸುವ ಕಲೆ

ಫಲಿತಾಂಶವನ್ನು ತತ್‌ಕ್ಷಣದಲ್ಲಿ ಊಹಿಸುವ ಕಲೆ

ಟೀವಿಯಲ್ಲಿ ಪಂದ್ಯಗಳ ನೇರಪ್ರಸಾರ ಆಗುತ್ತಿರುವಾಗಲೇ ಬಳಕೆದಾರರು ತಮ್ಮ ಮೊಬೈಲ್ ಪರದೆಯಲ್ಲಿ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ನಲ್ಲಿ ಭಾಗವಹಿಸಬಹುದು. ಈ ಪರಿಕಲ್ಪನೆಯು ಪ್ರತಿಕ್ರಿಯಾತ್ಮಕತೆಯ ಮೂಲಭೂತ ಸಿದ್ಧಾಂತವನ್ನು ಆಧರಿಸಿದ್ದು, ಬಳಕೆದಾರರು ತಮ್ಮ ಅಚ್ಚುಮೆಚ್ಚಿನ ಕ್ರಿಕೆಟ್ ಪಂದ್ಯವನ್ನು ನೋಡುವುದಷ್ಟೇ ಅಲ್ಲದೆ ಫಲಿತಾಂಶವನ್ನು ತತ್‌ಕ್ಷಣದಲ್ಲಿ ಊಹಿಸುವ ಮೂಲಕ ಅದರಲ್ಲಿ ಪಾಲ್ಗೊಳ್ಳುವುದನ್ನೂ ಸಾಧ್ಯವಾಗಿಸುತ್ತದೆ.

ಇದು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ

ಇದು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ

ಈ ಆಟವು ಜಿಯೋ ಚಂದಾದಾರರಿಗೆ ಹಾಗೂ ಚಂದಾದಾರರಲ್ಲದವರಿಗೂ ಲಭ್ಯವಿದೆ. ಬಳಕೆದಾರರು ಮೈಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ಸಾಕು, ಆಟವಾಡಲು ಸಿದ್ಧರಾಗುತ್ತಾರೆ. ತತ್‌ಕ್ಷಣದ ಫಲಿತಾಂಶಗಳನ್ನು ಊಹಿಸಿ ಸರಿಯಾದ ಊಹೆಗೆ ಅಂಕಗಳನ್ನು ಪಡೆದುಕೊಳ್ಳುವ ಜೊತೆಗೆ, ಆಟಗಾರರು ತಮ್ಮ ಕ್ರಿಕೆಟ್ ಜ್ಞಾನವನ್ನೂ ಪರೀಕ್ಷಿಸಿಕೊಳ್ಳಬಹುದಾಗಿದೆ.

ವಿನೂತನ ಪ್ರತಿಕ್ರಿಯಾತ್ಮಕ ಪರಿಕಲ್ಪನೆ

ವಿನೂತನ ಪ್ರತಿಕ್ರಿಯಾತ್ಮಕ ಪರಿಕಲ್ಪನೆ

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಒಂದು ವಿನೂತನ ಪ್ರತಿಕ್ರಿಯಾತ್ಮಕ ಪರಿಕಲ್ಪನೆಯಾಗಿದ್ದು, ಮಾರ್ಚ್ 23, 2019ರಿಂದ ಮೇ 5, 2019ರವರೆಗೆ ಪ್ರಸಾರವಾಗುವ ಕ್ರಿಕೆಟ್ ಪಂದ್ಯಗಳ ಜೊತೆಯಲ್ಲೇ ನಾವೂ ಕ್ರಿಕೆಟ್ ಆಡುವ ಸಂತಸವನ್ನು ಬಳಕೆದಾರರಿಗೆ ನೀಡುತ್ತದೆ. ರತಿ ಪಂದ್ಯದದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಆಟಗಾರರ ಜೊತೆಗೆ ಒಟ್ಟಾರೆಯಾಗಿ ಉನ್ನತ ಅಂಕ ಗಳಿಸಿದವರಿಗೂ ಬಹುಮಾನ ನೀಡಲಾಗುವುದು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, April 14, 2019, 11:31 [IST]
Other articles published on Apr 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more