ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL Player Auction 2023: ಹರಾಜಿಗೆ ಮುನ್ನ ಆರ್‌ಸಿಬಿ ತಂಡ, ಆಟಗಾರರ ಸಂಬಳ, ಹರಾಜಿಗೆ ಉಳಿದಿರುವ ಹಣದ ವಿವರ

IPL Player Auction 2023: RCBs Remaining Purse, Players, And Their IPL Salaries

ಐಪಿಎಲ್ ಮಿನಿ ಹರಾಜಿಗಾಗಿ ಎಲ್ಲಾ 10 ಫ್ರಾಂಚೈಸಿಗಳು ಸಿದ್ದತೆ ಮಾಡಿಕೊಳ್ಳುತ್ತಿವೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಐಪಿಎಲ್‌ನ ಜನಪ್ರಿಯ ತಂಡಗಳಲ್ಲಿ ಒಂದಾಗಿರುವ ಆರ್‌ಸಿಬಿ ಕೂಡ ಕೆಲವು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಯೋಜನೆಯಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದರೂ ಟ್ರೋಫಿ ಗೆಲ್ಲು ಸಾಧ್ಯವಾಗುತ್ತಿಲ್ಲ. ಆದರೂ, ತಂಡದ ಅಭಿಮಾನಿಗಳ ಸಂಖ್ಯೆ ಕೂಡ ಕಡಿಮೆಯಾಗಿಲ್ಲ. ಕಳೆದ ಸೀಸನ್‌ನಲ್ಲಿ ತಂಡದ ನಾಯಕರಾಗಿ ಫಾಪ್ ಡುಪ್ಲೆಸಿಸ್ ಅವರನ್ನು ನೇಮಕ ಮಾಡಲಾಗಿತ್ತು.

ಟೆಸ್ಟ್ ನಾಯಕನಾಗಿ ಮೊದಲ ಗೆಲುವು: ಸಂತಸ ಹಂಚಿಕೊಂಡ ಕೆಎಲ್ ರಾಹುಲ್ಟೆಸ್ಟ್ ನಾಯಕನಾಗಿ ಮೊದಲ ಗೆಲುವು: ಸಂತಸ ಹಂಚಿಕೊಂಡ ಕೆಎಲ್ ರಾಹುಲ್

ಡುಪ್ಲೆಸಿಸ್ ಹಿರಿಯ ಆಟಗಾರರಾಗಿದ್ದು, ಈಗಲೇ ಬದಲೀ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ಅಗತ್ಯವಿದೆ. ಹಲವು ಆಟಗಾರರಿಗೆ ಬ್ಯಾಕಪ್‌ ಆಗಿ ಕೆಲವು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. 2022ರ ಮೆಗಾಹರಾಜಿನಲ್ಲಿ ಆರ್‌ಸಿಬಿ 55.35 ಕೋಟಿ ರುಪಾಯಿಗಳನ್ನು ವಿವಿಧ ಆಟಗಾರರನ್ನು ಖರೀದಿಸಲು ವ್ಯಯಿಸಿತ್ತು. 2023ರ ಐಪಿಎಲ್ ಹರಾಜಿಗೆ ಮುನ್ನ ಕೇವಲ 8.75 ಕೋಟಿ ರುಪಾಯಿ ಪರ್ಸ್ ಹೊಂದಿದೆ.

ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತಂಡ, ಕ್ವಾಲಿಫೈಯರ್ ಹಂತದಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿತ್ತು. ಕಳೆದ ಬಾರಿ ತಂಡ ಸಾಕಷ್ಟು ಸಮತೋಲನದಿಂದ ಕೂಡಿದ್ದರಿಂದ ಬಹುತೇಕ ಅದೇ ತಂಡವನ್ನು ಈ ಬಾರಿ ಉಳಿಸಿಕೊಳ್ಳಲಾಗಿದೆ.

ಐವರನ್ನು ಬಿಡುಗಡೆ ಮಾಡಿದ ಆರ್‌ಸಿಬಿ

ಐವರನ್ನು ಬಿಡುಗಡೆ ಮಾಡಿದ ಆರ್‌ಸಿಬಿ

2023ರ ಮಿನಿ ಹರಾಜಿಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ಹಲವು ಆಟಗಾರರನ್ನು ಬಿಡುಗಡೆ ಮಾಡಿದವು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಐವರು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿತು. ಜೇಸನ್ ಬೆಹ್ರೆಂಡಾರ್ಫ್ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೇಡಿಂಗ್ ಮೂಲಕ ಬಿಟ್ಟುಕೊಟ್ಟಿತು.

ಅನೀಶ್ವರ್ ಗೌತಮ್, ಚಾಮಾ ಮಿಲಿಂದ್, ಲುವ್ನಿತ್ ಸಿಸೋಡಿಯಾ, ಶೆರ್ಫಾನೆ ರುದರ್‌ಫೋರ್ಡ್ ಅವರನ್ನು ಬಿಡುಗಡೆ ಮಾಡುವ ಮೂಲಕ 8.75 ಕೋಟಿ ರುಪಾಯಿಗಳನ್ನು ಮಿನಿ ಹರಾಜಿಗೆ ಉಳಿಸಿಕೊಂಡಿದೆ. ಇವರಿಗೆ ಬದಲಿಯಾಗಿ ಯಾವ ಆಟಗಾರರನ್ನು ಖರೀದಿಗೆ ಮುಂದಾಗಲಿದೆ ಎನ್ನುವುದು ಡಿಸೆಂಬರ್ 23ರಂದು ತಿಳಿಯಲಿದೆ.

IND vs BAN 2nd Test: ಎರಡು ಟೆಸ್ಟ್‌ನಲ್ಲಿ 15 ವಿಕೆಟ್ ಪಡೆದರೂ ಆಡುವ ಬಳಗದಲ್ಲಿ ಇಲ್ಲ ಸ್ಥಾನ

ಆರ್‌ಸಿಬಿ ತಂಡದ ಆಟಗಾರರು ಮತ್ತು ಅವರ ಸಂಬಳ

ಆರ್‌ಸಿಬಿ ತಂಡದ ಆಟಗಾರರು ಮತ್ತು ಅವರ ಸಂಬಳ

ಆರ್‌ಸಿಬಿ ತಂಡದಲ್ಲಿ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಪ್ರತಿ ಸೀಸನ್‌ಗೆ 15 ಕೋಟಿ ರುಪಾಯಿ ಪಡೆಯಲಿದ್ದು ಅಗ್ರಸ್ಥಾನದಲ್ಲಿದ್ದಾರೆ. ಉಳಿದಂತೆ ನಾಯಕ ಫಾಫ್ ಡು ಪ್ಲೆಸಿಸ್ (7 ಕೋಟಿ ರುಪಾಯಿ), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ ರು.), ವನಿಂದು ಹಸರಂಗ (10.75 ಕೋಟಿ ರು.), ಹರ್ಷಲ್ ಪಟೇಲ್ (10.75 ಕೋಟಿ ರು.) ಪಡೆಯುವ ಅಗ್ರ ಆಟಗಾರರಾಗಿದ್ದಾರೆ.

ಇನ್ನು ತಂಡದ ಸ್ಫೋಟಕ ಬ್ಯಾಟರ್ ದಿನೇಶ್ ಕಾರ್ತಿಕ್ 5.5 ಕೋಟಿ ರುಪಾಯಿ ಪಡೆಯುತ್ತಿದ್ದು, ವೇಗಿ ಮೊಹಮ್ಮದ್ ಸಿರಾಜ್ ಬರೊಬ್ಬರಿ 7 ಕೋಟಿ ರುಪಾಯಿ ವೇತನ ಪಡೆಯುತ್ತಾರೆ. ಜೋಶ್ ಹೇಜಲ್‌ವುಡ್ (7 ಕೋಟಿ ರುಪಾಯಿ), ಅನುಜ್ ರಾವತ್ (3.4 ಕೋಟಿ ರು.), ಶಹಬಾಜ್ ಅಹ್ಮದ್ (2.4 ಕೋಟಿ ರು.), ಡೇವಿಡ್ ವಿಲ್ಲಿ (2 ಕೋಟಿ ರು.), ಮಹಿಪಾಲ್ ಲೊಮ್ರೋರ್ ( 95 ಲಕ್ಷ ರು.), ಫಿನ್ ಅಲೆನ್ (80 ಲಕ್ಷ ರು.), ಸಿದ್ಧಾರ್ಥ್ ಕೌಲ್ (75 ಲಕ್ಷ ರು.), ಕರಣ್ ಶರ್ಮಾ (50 ಲಕ್ಷ ರು.) ಸುಯಶ್ ಪ್ರಭುದೇಸಾಯಿ (30 ಲಕ್ಷ ರು.), ರಜತ್ ಪಾಟಿದಾರ್ (20 ಲಕ್ಷ ರು.), ಆಕಾಶ್ ದೀಪ್ (20 ಲಕ್ಷ ರು.) ಪಡೆಯುತ್ತಾರೆ.

ಆರ್‌ಸಿಬಿ ಈ ಆಟಗಾರರ ಬಗ್ಗೆ ಗಮನ ಹರಿಸಬೇಕು

ಆರ್‌ಸಿಬಿ ಈ ಆಟಗಾರರ ಬಗ್ಗೆ ಗಮನ ಹರಿಸಬೇಕು

ನ್ಯೂಜಿಲೆಂಡ್‌ನ ವೇಗದ ಬೌಲರ್, ಆರ್‌ಸಿಬಿ ಮಾಜಿ ಆಟಗಾರ ಕೈಲ್ ಜೇಮಿಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಫ್ರಾಂಚೈಸಿ ಚಿಂತಿಸಬಹುದಾಗಿದೆ. 2021ರಲ್ಲಿ ಆರ್‌ಸಿಬಿ ಅವರನ್ನು 15 ಕೋಟಿ ರುಪಾಯಿಗೆ ಬಿಡ್ ಮಾಡಿತ್ತು. ಆದರೂ, ಅವರು ಗಾಯದ ಸಮಸ್ಯೆಯ ಕಾರಣ ಕೇವಲ 9 ಪಂದ್ಯಗಳನ್ನು ಮಾತ್ರ ಆಡಿದ್ದರು. ಗಾಯದಿಂದ ಚೇತರಿಸಿಕೊಂಡಿರುವ ಅವರು ಚಿನ್ನಸ್ವಾಮಿ ಅಂಗಳದಲ್ಲಿ ಪರಿಣಾಮಕಾರಿಯಾಗಬಲ್ಲರು.

ಇಂಗ್ಲೆಂಡ್ ತಂಡದ ವೇಗಿ ರೀಸ್ ಟೋಪ್ಲಿ ತಂಡಕ್ಕೆ ಉತ್ತಮ ಬೌಲಿಂಗ್ ಆಯ್ಕೆಯಾಗಲಿದ್ದಾರೆ. ಇಂಗ್ಲೆಂಡ್ ತಂಡದ ಪರವಾಗಿ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅಂತಿಮ ಓವರ್ ಗಳಲ್ಲಿ ಅವರು ಪರಿಣಾಮಕಾರಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಕರ್ನಾಟಕದ ವೇಗಿ ವಾಸುಕಿ ಕೌಶಿಕ್ ಕೂಡ ಆರ್‌ಸಿಬಿ ತಂಡಕ್ಕೆ ಉತ್ತಮ ಆಯ್ಕೆಯಾಗಲಿದ್ದಾರೆ. ಸ್ಥಳೀಯ ಆಟಗಾರ ವಾಸುಕಿ ಕೌಶಿಕ್, ಇತ್ತೀಚೆಗೆ ಮುಕ್ತಾಯಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ 9 ಪಂದ್ಯಗಳಲ್ಲಿ 18 ವಿಕೆಟ್ ಗಳಿಸಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ಆಡಿದ ಅನುಭವ ಹೊಂದಿರುವ ಅವರನ್ನು ಆರ್‌ಸಿಬಿ ಪರಿಗಣಿಸುವ ಸಾಧ್ಯತೆ ಇದೆ.

Story first published: Monday, December 19, 2022, 17:55 [IST]
Other articles published on Dec 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X