ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡವನ್ನು ಘೋಷಿಸಿದ ಐರ್ಲೆಂಡ್

Ireland cricket announces 14-players squad for T20I series against New Zealand

ಇತ್ತೀಚೆಗಷ್ಟೇ ಭಾರತದ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಿದ್ದ ಐರ್ಲೆಂಡ್ ತಂಡ ಇದೀಗ ಮತ್ತೊಂದು ಚುಟಕು ಸರಣಿಗೆ ಸಜ್ಜಾಗಿದೆ. ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿ ಐರ್ಲೆಂಡ್ ತಂಡ ಸಜ್ಜಾಗಿದ್ದು ಈ ಸರಣಿಗಾಗಿ 14 ಸದಸ್ಯರ ಬಳಗವನ್ನು ಘೋಷಿಸಿದೆ. ಜುಲೈ 10ರಿಂದ ಈ ಸರಣಿ ಆಯೋಜನೆಯಾಗಲಿದೆ.

ಐರ್ಲೆಂಡ್ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ನ್ಯೂಜಿಲೆಂಡ್ ವಿರುದ್ಧದ ಈ ಸರಣಿಗೆ ಭಾರತದ ವಿರುದ್ಧ ಆಡಿದ್ದ ಬಳಗವನ್ನೇ ಉಳಿಸಿಕೊಂಡಿದೆ ಎಂಬುದು ಗಮನಾರ್ಹ ಸಂಗತಿ. ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡದ ವಿರುದ್ಧ ಆಡಿದ್ದ ಐರ್ಲೆಂಡ್ ಸ್ಕ್ವಾಡ್ ಕಿವೀಸ್ ವಿರುದ್ಧವೂ ಆಡಲಿದೆ.

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

ಭಾರತದ ವಿರುದ್ಧ ಎರಡನೇ ಪಂದ್ಯದಲ್ಲಿ ಮಿಂಚಿದ್ದ ಐರ್ಲೆಂಡ್

ಭಾರತದ ವಿರುದ್ಧ ಎರಡನೇ ಪಂದ್ಯದಲ್ಲಿ ಮಿಂಚಿದ್ದ ಐರ್ಲೆಂಡ್

ಭಾರತ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಐರ್ಲೆಂಡ್ ತಮಡ ಭಾರತಕ್ಕೆ ಸುಲಭವಾಗಿ ಸೋತಿತ್ತು. ಆದರೆ ಎರಡನೇ ಪಂದ್ಯದಲೊ್ಲಿ ಭಾರತ ತಮಡ ಬೃಹತ್ ಮೊತ್ತವನ್ನು ಗುರಿಯಾಗಿ ನೀಡಿದ್ದರೂ ಗೆಲುವಿನ ಸನಿಹಕ್ಕೆ ಬಂದು ಶರಣಾಗುವ ಮೂಲಕ ದೊಡ್ಡ ಮಟ್ಟದ ಪ್ರತಿರೋಧವೊಡ್ಡಿತ್ತು. ಇದೇ ಪ್ರದರ್ಶನವನ್ನು ಮುಂದಿನ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿಯೂ ಮುಂದುವರಿಸಿಕೊಂಡು ಹೋಗುವ ಆತ್ಮವಿಶ್ವಾಸದಲ್ಲಿದೆ ಐರ್ಲೆಂಡ್ ಪಡೆ.

ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬೆಂಬಲ ಎಂದ ಐರ್ಲೆಂಡ್ ಕ್ರಿಕೆಟ್

ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬೆಂಬಲ ಎಂದ ಐರ್ಲೆಂಡ್ ಕ್ರಿಕೆಟ್

ಇನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಂಡವನ್ನು ಆಯ್ಕೆ ಮಾಡಿದ ಬಳಿಕ ಐರ್ಲೆಂಡ್ ಕ್ರಿಕೆಟ್ ಮಾಧ್ಯಮ ಹೇಲಿಕೆ ಬಿಡುಗಡೆಗೊಳಿಸಿದೆ. "ಸಹಜವಾಗಿಯೇ ಭಾರತದ ವಿರುದ್ಧದ ಸರಣಿಯಲ್ಲಿ ಉತ್ತಮವಾಗಿ ಆಡಿದ ಆಟಗಾರರಿಗೆ ಬೆಂಬಲವನ್ನು ನೀಡಲಾಗಿದೆ. ಉತ್ಕೃಷ್ಟ ಮಟ್ಟದ ಆಟವನ್ನು ನಾವು ನೋಡಿದ್ದೇವೆ ಇಂತಾದ್ದೇ ಪ್ರದರ್ಶನವನ್ನು ನ್ಯೂಜಿಲೆಂಡ್ ವಿರುದ್ಧವೂ ನಿರೀಕ್ಷಿಸುತ್ತೇವೆ" ಎಂದು ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸರಣಿಯ ಮಾಹಿತಿ

ಸರಣಿಯ ಮಾಹಿತಿ

ನ್ಯೂಜಿಲೆಂಡ್ ತಂಡದ ವಿರುದ್ಧದ ಟಿ20 ಸರಣಿಯ ಪಂದ್ಯಗಳು ಜುಲೈ 10, 12, ಮತ್ತು 15 ರಂದು ಡಬ್ಲಿನ್‌ನ ದಿ ವಿಲೇಜ್‌ನಲ್ಲಿ ನಡೆಯಲಿದೆ. ಅದಾದ ಬಳಿಕ ಮೂರು ಪಮದ್ಯಗಳ ಏಕದಿನ ಸರಣಿ ಕುಡ ನಡೆಯಲಿದ್ದು ಬೆಲ್‌ಫಾಸ್ಟ್‌ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್‌ನಲ್ಲಿ ಈ ಪಂದ್ಯಗಳು ಆಯೋಜನೆಯಾಗಲಿದೆ. ಜುಲೈ 18, 20 ಮತ್ತು 22 ರಂದು ಏಕದಿನ ಸರಣಿಯ ಪಂದ್ಯಗಳು ನಡೆಯಲಿದೆ.

ಐರ್ಲೆಂಡ್ ಟಿ20ಐ ಸ್ಕ್ವಾಡ್ ಹೀಗಿದೆ

ಐರ್ಲೆಂಡ್ ಟಿ20ಐ ಸ್ಕ್ವಾಡ್ ಹೀಗಿದೆ

ಆಂಡ್ರ್ಯೂ ಬಾಲ್ಬಿರ್ನಿ (ಕ್ಯಾಪ್ಟನ್), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಕ್ರೇಗ್ ಯಂಗ್.

Story first published: Tuesday, July 5, 2022, 16:13 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X