ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ವನಿತೆಯರನ್ನ ಅವರದ್ದೇ ನೆಲದಲ್ಲಿ ಮಣಿಸಿದ ಐರ್ಲೆಂಡ್: ಟಿ20 ಸರಣಿ ಗೆಲುವಿನ ಸಂಭ್ರಮ

Ireland women cricket

ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವನಿತೆಯರನ್ನು ಅವರದ್ದೇ ನೆಲದಲ್ಲಿ ಮಣಿಸುವ ಮೂಲಕ ಐರ್ಲೆಂಡ್ ವನಿತೆಯರು ಪಂದ್ಯದ ಜೊತೆಗೆ ಟಿ20 ಸರಣಿಯನ್ನು ಗೆದ್ದು ಬೀಗಿದ್ದಾರೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-1ರ ಅಂತರದಲ್ಲಿ ಐರ್ಲೆಂಡ್ ಜಯ ಸಾಧಿಸಿದೆ.

ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ವನಿತೆಯರು 4 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿದರು. ಇದಕ್ಕೆ ಉತ್ತರವಾಗಿ ಗುರಿ ಬೆನ್ನತ್ತುವಲ್ಲಿ ವಿಫಲಗೊಂಡ ಪಾಕಿಸ್ತಾನ ವನಿತಾ ತಂಡ 18.5 ಓವರ್‌ಗಳಲ್ಲಿ 133 ರನ್‌ಗಳಿಗೆ ಆಲೌಟ್‌ ಆಗಿದೆ. ಪರಿಣಾಮ ಐರ್ಲೆಂಡ್ ವನಿತೆಯರು 34 ರನ್‌ಗಳ ಗೆಲುವಿನೊಂದಿಗೆ ಟಿ20 ಸರಣಿ ಮುಡಿಗೇರಿಸಿಕೊಂಡಿದ್ದಾರೆ.

IPL 2023: SRH ತಂಡದಿಂದ ಹೊರಬಿದ್ದ ಕೇನ್‌ ವಿಲಿಯಮ್ಸನ್‌ ಮೇಲೆ 3 ಫ್ರಾಂಚೈಸಿ ಕಣ್ಣು!IPL 2023: SRH ತಂಡದಿಂದ ಹೊರಬಿದ್ದ ಕೇನ್‌ ವಿಲಿಯಮ್ಸನ್‌ ಮೇಲೆ 3 ಫ್ರಾಂಚೈಸಿ ಕಣ್ಣು!

ಇದಕ್ಕೂ ಮುನ್ನ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ 6 ವಿಕೆಟ್‌ಗಳ ಗೆಲುವನ್ನ ಸಾಧಿಸಿದ್ರೆ, ಎರಡನೇ ಟಿ20 ಪಂದ್ಯದಲ್ಲಿ ಮಳೆಯಿಂದಾಗಿ ಕಡಿತಗೊಂಡಿದ್ದ 17 ಓವರ್‌ಗಳ ಪಂದ್ಯದಲ್ಲಿ ಪಾಕಿಸ್ತಾನ ವನಿತೆಯರು 6 ವಿಕೆಟ್‌ಗಳ ಜಯ ಸಾಧಿಸಿ ಸರಣಿ ಸಮಬಲ ಸಾಧಿಸಿದ್ರು. ಆದ್ರೆ ಅಂತಿಮ ಪಂದ್ಯದಲ್ಲಿ ಪ್ರಬಲ ಹೋರಾಟ ಪ್ರದರ್ಶಿಸಿದ ಐರ್ಲೆಂಡ್ ವನಿತೆಯರು ಪಂದ್ಯದ ಜೊತೆಗೆ ಸರಣಿಯನ್ನು ಗೆದ್ದಿದ್ದಾರೆ.

ಟಿ20 ಸರಣಿಗೂ ಮುನ್ನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ ವನಿತೆಯರು 3-0 ಅಂತರದಲ್ಲಿ ಐರ್ಲೆಂಡ್ ವನಿತೆಯರನ್ನ ವೈಟ್‌ವಾಶ್ ಮಾಡಿದರು. ಈ ಎಲ್ಲಾ ಪಂದ್ಯಗಳಿಗೆ ಲಾಹೋರ್‌ನ ಗಡಾಫಿ ಸ್ಟೇಡಿಯಂ ಆತಿಥ್ಯ ವಹಿಸಿದೆ.

ಪಾಕಿಸ್ತಾನ ವನಿತೆಯರ ವಿರುದ್ಧ ಟಿ20 ಸರಣಿ ಮುಡಿಗೇರಿಸಿಕೊಂಡ ಬಳಿಕ ಐರ್ಲೆಂಡ್ ವನಿತೆಯರು ಟೀಂ ಬಸ್‌ನಲ್ಲಿ ಹಾಡು ಹೇಳುವ ಮೂಲಕ ಗೆಲುವನ್ನ ಸಂಭ್ರಮಿಸಿದ್ದಾರೆ. 1980ರ ದಶಕದ ಖ್ಯಾತ ಗೀತಿ 'ಜಸ್ಟ್ ಕಾಂಟ್ ಗೆಟ್ ಎನಾಫ್' ಹಾಡಿಗೆ ತಂಡದ ಎಲ್ಲಾ ಸದಸ್ಯರು ಧ್ವನಿಗೂಡಿಸಿದ್ದಾರೆ. ಈ ಕುರಿತಾದ ವೀಡಿಯೋವನ್ನು ಐರ್ಲೆಂಡ್ ಕ್ರಿಕೆಟ್‌ ಸಮಿತಿಯು ತನ್ನ ಅಧಿಕೃತ ಟ್ವಿಟ್ಟರ್‌ ಅಕೌಂಟ್‌ನಿಂದ ಟ್ವೀಟ್ ಮಾಡಿದೆ.

Story first published: Wednesday, November 16, 2022, 20:16 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X