ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಎಸ್‌ಎಲ್: ಮಿಂಚಿದ ಥಾಪಾ, ಚೆನ್ನೈಯಿನ್ ತಂಡದ ಜಯದ ಆರಂಭ

By Isl Media
isl 2020-21: chennaiyin fc won the match against jamshedpur

ಗೋವಾ, ನವೆಂಬರ್, 24, 2020: ಅನಿರುಧ್ ಥಾಪಾ (1ನೇ ನಿಮಿಷ) ಹಾಗೂ ಇಸ್ಮಾಯಿಲ್ ಗೊನ್ಸಾಲೀಸ್ (26ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಚೆನ್ನೈಯಿನ್ ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜಯದ ಆರಂಭ ಕಂಡಿದೆ. ಜೆಮ್ಷೆಡ್ಪುರ ತಂಡದ ಪರ ನೆರಿಜಸ್ ವಾಸ್ಕಿಸ್ (37ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ದ್ವಿತಿಯಾರ್ಧದಲ್ಲಿ ಜೆಮ್ಷೆಡ್ಪುರ ಉತ್ತಮ ಹೋರಾಟ ನೀಡಿ ಚೆಂಡಿನ ಮೇಲೆ ಹಿಡಿತ ಸಾಧಿಸಿದರೂ ಸಿಕ್ಕ ಅವಕಾಶವನ್ನು ಗೋಲಾಗಿಸುವಲ್ಲಿ ವಿಫಲವಾಯಿತು.

ಪ್ರಥಮಾರ್ಧದಲ್ಲಿ ಉತ್ತಮ ಹೋರಾಟ: ಅನಿರುಧ್ ಥಾಪಾ (1ನೇ ನಿಮಿಷ) ಮತ್ತು ಎಸ್ಮಾಯಿಲ್ ಗೊನ್ಸಾಲೀಸ್ (26ನೇ ನಿಮಿಷ) ಗಳಿಸಿದ ಗೋಲಿನಿಂದ ಚೆನ್ನೈಯಿನ್ ಎಫ್ ಸಿ ತಂಡ ಜೆಮ್ಷೆಡ್ಪುರ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 2-1 ಗೋಲುಗಳಿಂದ ಮುನ್ನಡೆ ಕಂಡಿದೆ, ಜೆಮ್ಷೆಡ್ಪುರ ಪರ ಭರವನಸೆಯ ಆಟಗಾರ ನೆರಿಜಸ್ ವಾಸ್ಕಿಸ್ (37ನೇ ನಿಮಿಷ) ಹೆಡರ್ ಮೂಲಕ ಗೋಲು ಗಳಿಸಿ ಪಂದ್ಯದ ಕುತೂಹಲ ಕಾಯ್ದರು.

ಐಎಸ್‌ಎಲ್: ಜೇಮ್ಶೆಡ್ಪುರ್ ಎಫ್‌ಸಿ vs ಚೆನ್ನೈಯಿನ್ ಎಫ್‌ಸಿ, ಅಂಕಿ-ಅಂಶಗಳುಐಎಸ್‌ಎಲ್: ಜೇಮ್ಶೆಡ್ಪುರ್ ಎಫ್‌ಸಿ vs ಚೆನ್ನೈಯಿನ್ ಎಫ್‌ಸಿ, ಅಂಕಿ-ಅಂಶಗಳು

ಚೆನ್ನೈಯಿನ್ ಗೆ 2-0 ಮುನ್ನಡೆ

ಚೆನ್ನೈಯಿನ್ ಗೆ 2-0 ಮುನ್ನಡೆ

ಪ್ರತಿಯೊಂದು ಹಂತದಲ್ಲೂ ಪಂದ್ಯದ ಮೇಲೆ ಮೇಲುಗೈ ಸಾಧಿಸಿದ ಚೆನ್ನೈಯಿನ್ ತಂಡಕ್ಕೆ 26ನೇ ನಿಮಿಷದಲ್ಲಿ ಮತ್ತೊಂದು ಯಶಸ್ಸು, ಈ ಬಾರಿ ಜೆಮ್ಷೆಡ್ಪುರ ತಂಡದ ಆಟಗಾರರೇ ಮಾಡಿದ ಪ್ರಮಾದಕ್ಕೆ ತಕ್ಕ ಬೆಲೆ ತೆರಬೇಕಾಯಿತು. ವನಮಾಲ್ಸಾಮಾ ಛಕ್ಛುವಾಕ್ ಪೆನಾಲ್ಟಿ ವಲಯದಲ್ಲಿ ಚೆನ್ನೈಯಿನ್ ಆಟಗಾರನನ್ನು ಉದ್ದೇಶಪೂರ್ವಕವಾಗಿ ತಡೆ ಕಾರಣ ರೆಫರಿ ತಡಮಾಡದೆ ಪೆನಾಲ್ಟಿ ಘೋಷಿಸಿದರು. ಎಸ್ಮಾಯಿಲ್ ಗೊನ್ಸಾಲ್ವಿಸ್ ಯಾವುದೇ ಪ್ರಮಾದ ಎಸಗದೆ ಜೆಮ್ಷೆಡ್ಪುರ ಗೋಲ್ ಕೀಪರ್ ರೆಹನೇಶ್ ಅವರನ್ನು ವಂಚಿಸಿ ತಂಡದ ಪರ ಎರಡನೇ ಗೋಲು ಗಳಿಸಿದರು.

ಮೊದಲ ನಿಮಿಷದಲ್ಲೇ ಚೆನ್ನೈಗೆ ಯಶಸ್ಸು

ಮೊದಲ ನಿಮಿಷದಲ್ಲೇ ಚೆನ್ನೈಗೆ ಯಶಸ್ಸು

ಪಂದ್ಯ ಆರಂಭಗೊಂಡ ಮೊಲ ನಿಮಿಷದಲ್ಲೇ ಅನಿರುಧ್ ಥಾಪಾ ಗಳಿಸಿ ಗೋಲಿನಿಂದ ಚೆನ್ನೈಯಿನ್ ತಂಡ ಮೇಲುಗೈ ಸಾಧಿಸಿತು. ಥಾಪಾ ಕಳೆದ ಋತುವಿನಲ್ಲೂ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಋತುವಿನಲ್ಲಿ ಇದುವರೆಗೂ ನಡೆದ ಪಂದ್ಯದಲ್ಲಿ ಮೊದಲ ನಿಮಿಷದಲ್ಲೇ ಗೋಲು ಗಳಿಸಿದ ತಂಡವೆಂದೆನಿಸಿತು. ಇದರೊಂದಿಗೆ ಜೆಮ್ಷೆಡ್ಪುರದ ಡಿಫೆನ್ಸ್ ವಿಭಾಗ ಆರಂಭದಲ್ಲೇ ಆತಂಕಕ್ಕೆ ಈಡಾಯಿತು. ಥಾಪಾ ಪ್ರಸಕ್ತ ಋತುವಿನಲ್ಲಿ ಗೋಲು ಗಳಿಸಿದ ಮೊದಲ ಭಾರತೀಯ ಆಟಗಾರರೆನಿಸಿದರು. 7ನೇ ನಿಮಿಷದಲ್ಲಿ ಜೆಮ್ಷೆಡ್ಪುರ ತಂಡಕ್ಕೆ ಹೆಡರ್ ಮೂಲಕ ಗೋಲು ಗಳಿಸಿ ಸಮಬಲ ಸಾಧಿಸುವ ಅವಕಾಶ ಉತ್ತಮವಾಗಿತ್ತು, ಆದರೆ ನಾಯಕ ವಿಲಿಯಮ್ ಹಾರ್ಟ್ಲಿ ಯಶಸ್ಸು ಕಾಣುವಲ್ಲಿ ವಿಫಲರಾದರು.

ಕುತೂಹಲದ ಕದನ

ಕುತೂಹಲದ ಕದನ

ಕಳೆದ ಬಾರಿ ಕೊನೆಯ ಸ್ಥಾನಕ್ಕೇರಿ ಫೀನಿಕ್ಸ್ ನಂತೆ ಪುಟಿದೆದ್ದು ಫೈನಲ್ ತಲುಪಿದ್ದ ಚೆನ್ನೈಯಿನ್ ಎಫ್ ಸಿ ವಿರುದ್ಧ ಜೆಮ್ಷೆಡ್ಪುರ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ 5ನೇ ಪಂದ್ಯದಲ್ಲಿ ಹೋರಾಟ ನಡೆಸಲು ತಿಲಕ್ ಮೈದಾನಕ್ಕೆ ಇಳಿದವು. ಓವೆನ್ ಕಾಯ್ಲ್ ಜೆಮ್ಷೆಡ್ಪುರ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದು, ಕಳೆದ ಬಾರಿ, ಗೋಲ್ಡನ್ ಬೂಟ್ ಹಂಚಿಕೊಂಡಿದ್ದ ನೆರಿಜಸ್ ವಾಸ್ಕಿಸ್ ಅವರು ತಮ್ಮ ಹಿಂದಿನ ತಂಡದ ವಿರುದ್ಧ ಸೆಣಸಲಿರುವುದು ವಿಶೇಷ. ಡಿಫೆನ್ಸ್ ನಿಂದ ಅಟ್ಯಾಕ್ ವರೆಗೂ ಸ್ಟೀಲ್ ತಂಡ ಅತ್ಯಂತ ಸಮತೋಲನದಿಂದ ಕೂಡಿದೆ. ಆದರೆ ಒಂದು ತಂಡವಾಗಿ ಹೊಂದಾಣಿಕೆಯಿಂದ ಆಡಬೇಕಾಗಿರುವುದು ಜೆಮ್ಷೆಡ್ಪುರದ ಮೇಲಿರುವ ಜವಾಬ್ದಾರಿ. ಚೆನ್ನೈಯಿನ್ ತಂಡ ಜೆಮ್ಷೆಡ್ಪುರ ವಿರುದ್ಧ ಹಿಂದಿನ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಜಯ ಗಳಿಸಿ, ಒಂದರಲ್ಲಿ ಸೋಲುಂಡು ಉಳಿದ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿತ್ತು.

ಜೆಮ್ಶೆಡ್‌ಪುರ ಹೋರಾಟ

ಜೆಮ್ಶೆಡ್‌ಪುರ ಹೋರಾಟ

ಚೆನ್ನೈ ಕೋಚ್ ಕ್ಸಾಬಾ ಲಾಸ್ಜ್ಲೋ ಅವರು ನೆರಿಜಸ್ ವಾಸ್ಕಿಸ್ ಸ್ಥಾನದಲ್ಲಿ ಎಸ್ಮಾಯಿಲ್ ಗೊನ್ಸ್ಲಾವಿಸ್ ಮತ್ತು ಜಾಕಬ್ ಸಿಲ್ವೆಸ್ಟರ್ ಅವರನ್ನು ಅಂಗಣಕ್ಕಿಳಿಯಲಿದ್ದಾರೆ. ಜೆಮ್ಷೆಡ್ಪುರದ ಆಟಗಾರ ಮೆಮೊ ಮೌರಾ ಚೆನ್ನೈ ಸೇರಿದ್ದು, ತಂಡದ ಮಿಡ್ ಫೀಲ್ಡ್ ವಿಭಾಗ ಮತ್ತಷ್ಟು ಬಲಿಷ್ಠಗೊಂಡಂತಾಗಿದೆ. ಅನಿರುಧ್ ಥಾಪಾ, ಜರ್ಮನ್ ಪ್ರೀತ್ ಸಿಂಗ್ ವೆಡ್ವಿನ್ ವಾನ್ಸ್ಪೌಲ್ ರಫಾಯಲ್ ಕ್ರಿವೆಲ್ಲರೊ ಅವರಿಂದ ಚೆನ್ನೈಯಿನ್ ತಂಡದ ಮಿಡ್ ಫೀಲ್ಡ್ ವಿಭಾಗ ಬಲಿಷ್ಠವಾಗಿದೆ. ಬ್ರೆಜಿಲ್ ಮೂಲದ ಆಟಗಾರ ಕಳೆದ ಋತುವಿನಲ್ಲಿ ಏಳು ಗೋಲು ಗಳಿಸಿದ್ದು ಮತ್ತು ಎಂಟು ಗೋಲು ಗಳಿಸುವಲ್ಲಿ ನೆರವಾಗಿದ್ದು, ತಂಡದ ಯಶಸ್ಸಿನಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ಜೆಮ್ಷೆಡ್ಪುರ ತನ್ನ ದಾಖಲೆಯನ್ನು ಸರಿಗಟ್ಟಿ ಮೇಲುಗೈ ಸಾಧಿಸಲು ಹೋರಾಟಕ್ಕಿಳಿಯಿತು.

Story first published: Wednesday, November 25, 2020, 10:00 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X