ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಕರ್ನಾಟಕದ ಕ್ರಿಕೆಟ್ ಆಟಗಾರರಿಗೆ ಭಾರಿ ಡಿಮ್ಯಾಂಡ್

By Manjunatha
Karnataka cricket players getting good demand in IPL 2018 players auction

ಬೆಂಗಳೂರು, ಜನವರಿ 27: ಐಪಿಎಲ್ 2018 ಆಟಗಾರರ ಹರಾಜಿನಲ್ಲಿ ಕರ್ನಾಟಕದ ಆಟಗಾರರಿಗೆ ಭಾರಿ ಡಿಮ್ಯಾಂಡ್ ವ್ಯಕ್ತವಾಗುತ್ತಿದೆ. ಮೂಲ ಬೆಲೆಗಿಂತ ಐದು ಪಟ್ಟಿಗೂ ಹೆಚ್ಚಿನ ಮೊತ್ತಕ್ಕೆ ರಾಜ್ಯದ ಆಟಗಾರರು ಮಾರಾಟವಾಗುತ್ತಿದ್ದಾರೆ.

ಈ ವರೆಗೆ ರಾಜ್ಯದ ಬ್ಯಾಟ್ಸ್‌ಮನ್‌ಗಳಾದ ಕರುಣ್ ನಾಯರ್, ಕೆ.ಎಲ್.ರಾಹುಲ್ ಮತ್ತು ಮನೀಷ್ ಪಾಂಡೆ ಅವರಿಗೆ ಹರಾಜು ಪ್ರಕ್ರಿಯೆ ನಡೆದಿದ್ದು, ಮೂರು ಆಟಗಾರರು ಅತ್ಯುತ್ತಮ ಮೊತ್ತಕ್ಕೆ ಹರಾಜಾಗಿದ್ದಾರೆ.

2 ಕೋಟಿ ಮೂಲ ಬೆಲೆ ಇಟ್ಟುಕೊಂಡು ಹರಾಜಿನಲ್ಲಿದ್ದ ಮನೀಷ್ ಪಾಂಡೆ ಮತ್ತು ಕೆಎಲ್ ರಾಹುಲ್ ಅವರುಗಳು 11 ಕೋಟಿ ಬೃಹತ್ ಮೊತ್ತಕ್ಕೆ ಹರಾಜಾಗಿದ್ದಾರೆ. ಕೇವಲ 50 ಲಕ್ಷ ಮೂಲ ಬೆಲೆ ಹೊಂದಿದ್ದ ಕರುಣ್ ನಾಯರ್ ಅವರು 5.60 ಕೋಟಿಗೆ ಹರಾಜಾಗಿದ್ದಾರೆ.

LIVE: ಐಪಿಎಲ್ 2018 ಹರಾಜು: ಸ್ಟಾರ್ ಆಟಗಾರ ಮೆಕಲಂ ಆರ್ ಸಿ ಬಿ ಪಾಲುLIVE: ಐಪಿಎಲ್ 2018 ಹರಾಜು: ಸ್ಟಾರ್ ಆಟಗಾರ ಮೆಕಲಂ ಆರ್ ಸಿ ಬಿ ಪಾಲು

ಮನೀಷ್ ಪಾಂಡೆ ಅವರ ಹರಾಜು ಭಾರಿ ಕುತೂಹಲ ಕೆರಳಿಸಿತ್ತು. ಪಂಜಾಬ್, ಮುಂಬೈ, ಬೆಂಗಳೂರು, ಹೈದರಾಬಾದ್ ತಂಡ ಪ್ರಾಂಚೈಸಿಗಳು ಮನೀಷ್ ಪಾಂಡೆ ಅವರನ್ನು ಖರೀದಿಸಲು ಪೈಪೋಟಿಯ ಮೇಲೆ ಹರಾಜು ಕೂಗಿದವು.

ಬೆಂಗಳೂರು ತಂಡ 8 ಕೋಟಿಯ ವರೆಗೆ ಹರಾಜು ಕೂಗಿ ನಂತರ ಕೈಚೆಲ್ಲಿತು, ಪಂಜಾಬ್ 10.80 ಕೋಟಿ ವರೆಗೆ ಹರಾಜು ಕೂಗಿತು. ಆದರೆ 11 ಕೋಟಿ ಮೊತ್ತ ಮುಂದಿಟ್ಟ ಸನ್‌ರೈಸಸ್ ಹೈದರಾಬಾದ್ ಅವರಿಗೆ ಈ ಯುವ ಬ್ಯಾಟ್ಸ್‌ಮನ್ ಒಲಿದರು.

ಮನೀಷ್ ಪಾಂಡೆ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲೇ ಬೇಕೆಂಬ ಹಠದಿಂದ ಹರಾಜು ಕೂಗಿದ ಪಂಜಾಬ್‌ ತಂಡದ ಒಡತಿ ಪ್ರೀತಿ ಜಿಂಟಾ ಅವರು ಕ್ಷಣ ಕಾಲವೂ ಯೋಚಿಸದೆ ಸತತವಾಗಿ ಹರಾಜು ಕೂಗಿದರು. ಅವರಿಗೆ ಸಮ ಬಲದ ಹೋರಾಟ ನೀಡಿದ ಹೈದರಾಬಾದ್‌ ಕೂಡ ಪ್ರೀತಿ ಅವರ ಹರಾಜು ಕೂಗಿಗೆ ಪ್ರತಿಕೂಗು ಕೂಗತ್ತಲೇ ಹೋಯಿತು. ಈಗಾಗಲೇ ಅಶ್ವಿನ್, ಕೆಎಲ್ ರಾಹುಲ್ ಅವರನ್ನು ಭಾರಿ ಮೊತ್ತ ಖರೀದಿಸಿರುವ ಪಂಜಾಬ್ ಕೊನೆಗೆ 10.80 ಕೋಟಿಗೆ ಹರಾಜು ಕೈಚೆಲ್ಲಿತು. 11 ಕೋಟಿಗೆ ಮನೀಷ್‌ ಅವರು ಹೈದರಾಬಾದ್ ಪಾಲಾದರು.

ಕಳೆದ ಬಾರಿ ಕೊಲ್ಕತ್ತ ತಂಡದಲ್ಲಿದ್ದ ಮನೀಷ್ ಪಾಂಡೆ ಅವರು ತಮ್ಮ ಅತ್ಯುತ್ತಮ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಿಂದಾಗಿ ಗಮನ ಸೆಳೆದಿದ್ದಾರೆ. ಐಪಿಎಲ್‌ನಲ್ಲಿ ಶತಕ ಭಾರಿಸಿದ ಮೊದಲ ಭಾರತೀಯ ಆಟಗಾರ ಎಂದ ಶ್ರೇಯವೂ ಇವರದ್ದೇ ಆಗಿದೆ.

ಸ್ಥಿರ ಬ್ಯಾಟ್ಸ್‌ಮನ್ ಎಂದು ಹೆಸರಾಗಿರುವ ಕೆ.ಎಲ್.ರಾಹುಲ್ ಅವರಿಗೂ ಕೂಡ ಭಾರಿ ಪೈಪೋಟಿ ಎರ್ಪಟ್ಟಿತ್ತು. ಕೊಲ್ಕತ್ತಾ, ಹೈದರಾಬಾದ್ ಮತ್ತು ಮುಂಬೈ ತಂಡದ ಫ್ರಾಂಚೈಸಿಗಳು ಕೆ.ಎಲ್.ರಾಹುಲ್‌ಗಾಗಿ ಬಡಿದಾಡಿದವು. ಸತತ ಬಿಡ್‌ ಕೂಗಿದ ಮುಂಬೈ 10.80 ಕೋಟಿ ವರೆಗೆ ತನ್ನ ಹರಾಜು ವಿಸ್ತರಿಸಿತು. ಆದರೆ ಪಟ್ಟು ಬಿಡದ ಪಂಜಾಬ್‌ ತಂಡದ ಒಡತಿ ಪ್ರೀತಿ ಜಿಂಟಾ 11 ಕೋಟಿಗೆ ರಾಹುಲ್ ಅವರನ್ನು ಖರೀದಿಸಿದರು.

ಕೇವಲ 50 ಲಕ್ಷ ಮೂಲ ಬೆಲೆ ಹೊಂದಿದ್ದ ಕರ್ನಾಟಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅವರಿಗೂ ಉತ್ತಮ ಬೇಡಿಕೆ ವ್ಯಕ್ತವಾಯಿತು. ಮುಂಬೈ ತಂಡ ಕರುಣ್ ಅವರನ್ನು ತಮ್ಮ ತಂಡಕ್ಕೆ ತೆಗೆದುಕೊಳ್ಳಲು ಉತ್ಸುಕತೆ ತೋರಿತು ಆದರೆ ಪಂಜಾಬ್ ನ ಪ್ರೀತಿ ಜಿಂಟಾ ಅವರು 5.60 ಕೋಟಿ ಹರಾಜು ಕೂಗುವ ಮೂಲಕ ಕರುಣ್ ಅವರನ್ನು ತಮ್ಮ ತಂಡಕ್ಕೆ ಸೆಳೆದುಕೊಂಡರು.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

Story first published: Saturday, January 27, 2018, 16:55 [IST]
Other articles published on Jan 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X