ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ನಾಯಕರಾಗಿ ಮುನ್ನಡೆಸಿದ ಬೌಲರ್‌ಗಳು ಈ ನಾಲ್ವರು ಮಾತ್ರ; ಗೆದ್ದದ್ದು ಎಷ್ಟರಲ್ಲಿ?

List of bowlers who led Team India as a captain in test cricket

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ಟೀಮ್ ಇಂಡಿಯಾ ತನ್ನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಹೌದು, ಕಳೆದ ವರ್ಷ ಆಯೋಜನೆಯಾಗಿ ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಜುಲೈ 1ರಿಂದ ಆರಂಭವಾಗುತ್ತಿದೆ.

ಈ 13 ಆಟಗಾರರು ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದದ್ದು ನೆನಪಿದೆಯಾ?ಈ 13 ಆಟಗಾರರು ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದದ್ದು ನೆನಪಿದೆಯಾ?

ಈ ಪಂದ್ಯಕ್ಕೆ ರೋಹಿತ್ ಶರ್ಮಾ ನಾಯಕತ್ವದ 15 ಆಟಗಾರರ ಟೀಮ್ ಇಂಡಿಯಾವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿತ್ತು. ಆದರೆ ಪಂದ್ಯ ಆರಂಭಕ್ಕೆ ಕೆಲ ದಿನಗಳು ಬಾಕಿ ಇದ್ದು, ಈ ಸಂದರ್ಭದಲ್ಲಿ ರೋಹಿತ್ ಶರ್ಮಾಗೆ ಕೊರೊನ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೌದು, ಈ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಲೀಸೆಸ್ಟರ್ ಶೈರ್ ವಿರುದ್ಧ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವನ್ನಾಡಿದ್ದು, ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿದಿದ್ದರು. ಆದರೆ ನಂತರ ರಾಪಿಡ್ ಆ್ಯಂಟಿಜನ್ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾಗೆ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ ಹಾಗೂ ಅಭ್ಯಾಸ ಪಂದ್ಯವನ್ನು ಮೊಟಕುಗೊಳಿಸಿದ ರೋಹಿತ್ ಶರ್ಮಾ ಸದ್ಯ ಐಸೋಲೇಶನ್ ನಿಯಮ ಅನುಸರಿಸುತ್ತಿದ್ದಾರೆ.

ಐರ್ಲೆಂಡ್ ಕ್ರೀಡಾಂಗಣದಲ್ಲಿಯೂ ಡಿಕೆಗೆ ಜೈಕಾರ; ದಿನೇಶ್ ಕಾರ್ತಿಕ್ ಕ್ರೇಜ್ ವಿಡಿಯೋ ಹಂಚಿಕೊಂಡ ಐರ್ಲೆಂಡ್ ಕ್ರಿಕೆಟಿಗಐರ್ಲೆಂಡ್ ಕ್ರೀಡಾಂಗಣದಲ್ಲಿಯೂ ಡಿಕೆಗೆ ಜೈಕಾರ; ದಿನೇಶ್ ಕಾರ್ತಿಕ್ ಕ್ರೇಜ್ ವಿಡಿಯೋ ಹಂಚಿಕೊಂಡ ಐರ್ಲೆಂಡ್ ಕ್ರಿಕೆಟಿಗ

ಹೀಗಾಗಿ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳಿದ್ದು, ಉಪ ನಾಯಕನಾಗಿರುವ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುವ ಸಾಧ್ಯತೆಗಳು ಹೆಚ್ಚಿವೆ. ಹೀಗಾದರೆ ಟೀಮ್ ಇಂಡಿಯಾವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ನಾಯಕನಾಗಿ ಮುನ್ನಡೆಸಿದ ಐದನೇ ಬೌಲರ್ ಎಂಬ ಮೈಲಿಗಲ್ಲನ್ನು ಜಸ್ಪ್ರೀತ್ ಬುಮ್ರಾ ನೆಡಲಿದ್ದು, ಈ ಹಿಂದೆ ಟೀಮ್ ಇಂಡಿಯಾವನ್ನು ನಾಯಕರಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ಮುನ್ನಡೆಸಿರುವ ಆ ನಾಲ್ವರು ಬೌಲರ್‌ಗಳ ವಿವರ ಮುಂದಿದೆ.

1. ಗುಲಾಮ್ ಅಹ್ಮದ್

1. ಗುಲಾಮ್ ಅಹ್ಮದ್

ಆಫ್ ಸ್ಪಿನ್ನರ್ ಗುಲಾಂ ಅಹ್ಮದ್ ಟೀಮ್ ಇಂಡಿಯಾವನ್ನು 3 ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಿದ್ದರು. ಆದರೆ ಈ ಯಾವುದೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಜಯ ಸಾಧಿಸಲಿಲ್ಲ.

2. ಶ್ರೀನಿವಾಸರಾಘವನ್ ವೆಂಕಟರಾಘವನ್

2. ಶ್ರೀನಿವಾಸರಾಘವನ್ ವೆಂಕಟರಾಘವನ್

ಎಸ್ ವೆಂಕಟರಾಘವನ್ ಟೀಮ್ ಇಂಡಿಯಾವನ್ನು ನಾಯಕನಾಗಿ ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ ಬೌಲರ್‌ಗಳಲ್ಲಿ ಓರ್ವರಾಗಿದ್ದಾರೆ. ಚೆನ್ನೈ ಮೂಲದ ಇವರು ಟೀಮ್ ಇಂಡಿಯಾವನ್ನು 1975 ಮತ್ತು 1979ರ ವಿಶ್ವಕಪ್‌ನಲ್ಲಿ ನಾಯಕನಾಗಿ ಮುನ್ನಡೆಸಿದ್ದರು. ಆದರೆ, ಟೆಸ್ಟ್ ತಂಡದ ನಾಯಕನಾಗಿ ವೆಂಕಟರಾಘವನ್ ಯಶಸ್ಸು ಸಾಧಿಸಲಿಲ್ಲ. ತಾವು ಟೀಮ್ ಇಂಡಿಯಾವನ್ನು 5 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದರೂ ಯಾವುದೇ ಪಂದ್ಯದಲ್ಲಿಯೂ ತಂಡ ಗೆಲ್ಲಲಿಲ್ಲ.

3. ಬಿಷನ್ ಸಿಂಗ್ ಬೇಡಿ

3. ಬಿಷನ್ ಸಿಂಗ್ ಬೇಡಿ

ಬೌಲರ್‌ಗಳಿಗೆ ಟೀಮ್ ಇಂಡಿಯಾವನ್ನು ಹೆಚ್ಚು ದಿನಗಳವರೆಗೆ ಮುನ್ನಡೆಸುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಬಿಷನ್ ಸಿಂಗ್ ಬೇಡಿ ಅವಧಿಯಲ್ಲಿ ಹೆಚ್ಚು ಅವಕಾಶ ಒದಗಿ ಬಂದಿತ್ತು. ಈ ಎಡಗೈ ಸ್ಪಿನ್ನರ್ 22 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳು ಸೇರಿದಂತೆ ಒಟ್ಟು 6 ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದರು.

ಸಹ ಆಟಗಾರನನ್ನು‌ ನಿಂದಿಸಿದ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟು ಬೆವರಳಿಸಿದ ವಿರಾಟ್ ಕೊಹ್ಲಿ | Oneindia Kannada
4. ಅನಿಲ್ ಕುಂಬ್ಳೆ

4. ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ ಇತ್ತೀಚಿನ ವರ್ಷಗಳಲ್ಲಿ ಟೀಮ್ ಇಂಡಿಯಾವನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ನಾಯಕನಾಗಿ ಮುನ್ನಡೆಸಿದ್ದ ಬೌಲರ್ ಎನಿಸಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ನಾಯಕತ್ವವನ್ನು ತ್ಯಜಿಸಿದ ನಂತರ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡ ಅನಿಲ್ ಕುಂಬ್ಳೆ 14 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 3 ಪಂದ್ಯಗಳಲ್ಲಿ ಯಶಸ್ಸು ಸಾಧಿಸಿದ್ದರು.

Story first published: Tuesday, June 28, 2022, 10:33 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X