ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಲ್ಕತ್ತಾ ಶತಕಕ್ಕಿಂತ ಸಿಡ್ನಿಯ ಶತಕ ನನ್ನ ಪಾಲಿಗೆ ವೆರಿ ವೆರಿ ಸ್ಪೆಷಲ್: ಲಕ್ಷ್ಮಣ್

Maiden ton at Sydney more memorable than 281 at Kolkata: Laxman

ಹೈದರಾಬಾದ್, ನವೆಂಬರ್ 16: ಆಸ್ಟ್ರೇಲಿಯಾ ವಿರುದ್ಧ ಕೋಲ್ಕತ್ತಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ತಾನು ಬಾರಿಸಿದ್ದ 281 ರನ್ ಸಾಧನೆ ಎಂದಿಗೂ ಅವಿಸ್ಮರಣೀಯ. ಆದರೆ ತನಗೆ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಬಾರಿಸಿದ್ದ ಶತಕ ಇನ್ನೂ ಹೆಚ್ಚು ಸ್ಮರಣೀಯ ಎಂದು ಮಾಜಿ ಆಟಗಾರ ವಿವಿಎಸ್‌ ಲಕ್ಷ್ಮಣ್ ಹೇಳಿದ್ದಾರೆ.

ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್‌ರಿಂದ ರಂಗೇರಲಿದೆ ಐಪಿಎಲ್ 12ನೇ ಆವೃತ್ತಿ!ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್‌ರಿಂದ ರಂಗೇರಲಿದೆ ಐಪಿಎಲ್ 12ನೇ ಆವೃತ್ತಿ!

ಟೆಸ್ಟ್ ಕ್ರಿಕೆಟ್ ನಲ್ಲಿ 225 ಇನ್ನಿಂಗ್ಸ್ ಗಳಲ್ಲಿ 8781 ರನ್ ಗಳಿಸಿರುವ ಹೈದರಾಬಾದ್ ನ ದಿಗ್ಗಜ ಲಕ್ಷ್ಮಣ್ ಹೈದರಾಬಾದ್ ನಲ್ಲಿ ಗುರುವಾರ (ನವೆಂಬರ್ 15) ತನ್ನ ಆತ್ಮಚರಿತ್ರೆ '281 ಆ್ಯಂಡ್ ಬಿಯಾಂಡ್' ಕೃತಿ ಬಿಡುಗಡೆ ಸಮಾರಂಭದಲ್ಲಿ ಕ್ರಿಕೆಟ್ ಕ್ಷಣವನ್ನು ಮೆಲುಕು ಹಾಕಿದರು.

'2001ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 281 ರನ್ ಬಾರಿಸಿದ್ದು ನನಗೆ ಯಾವತ್ತಿಗೂ ನೆನಪಿನಲ್ಲಿ ಉಳಿಯುವಂತ ಕ್ಷಣ. ಆದರೆ ನಾನು ದೊಡ್ಡ ಮಟ್ಟದಲ್ಲಿ ಸಾಧಿಸಬಹುದು ಎಂಬ ಆತ್ಮ ವಿಶ್ವಾಸ ನನಗೆ ಮೂಡಿದ್ದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾನು ಬಾರಿಸಿದ್ದ ಶತಕದಿಂದ (167 ರನ್)' ಎಂದು ವೆರಿವೆರಿ ಸ್ಪೆಷಲ್ ಬ್ಯಾಟ್ಸ್ಮನ್ ಹೇಳಿದರು.

ಟೆಸ್ಟ್ ಕ್ರಿಕೆಟ್ ನಲ್ಲಿ ಲಕ್ಷ್ಮಣ್ 281 ರನ್ ಸಿಡಿಸಿದ್ದ ಆಸ್ಟ್ರೇಲಿಯಾ ವಿರುದ್ಧದ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ 445+212 ರನ್ ಗಳಿಸಿತ್ತು. ಭಾರತ 171+657 ರನ್ ಪೇರಿಸಿ 171 ರನ್ ಗಳಿಂದ ಗೆದ್ದಿತ್ತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ ಅತ್ಯಧಿಕ ರನ್ ಕಲೆ ಹಾಕಲು ತಂಡಕ್ಕೆ ಲಕ್ಷ್ಮಣ್ ಬಾರಿಸಿದ್ದ 281 ರನ್ ನೆರವು ನೀಡಿತ್ತು.

ಐಪಿಎಲ್ 2019: ಯುವಿ, ಅಕ್ಸರ್, ಫಿಂಚ್ ಬಿಟ್ಟುಕೊಟ್ಟ ಕಿಂಗ್ಸ್ XI ಪಂಜಾಬ್ಐಪಿಎಲ್ 2019: ಯುವಿ, ಅಕ್ಸರ್, ಫಿಂಚ್ ಬಿಟ್ಟುಕೊಟ್ಟ ಕಿಂಗ್ಸ್ XI ಪಂಜಾಬ್

ಇದಕ್ಕೂ ಮುನ್ನ 2000 ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ವಿವಿಎಸ್‌, ದ್ವಿತೀಯ ಇನ್ನಿಂಗ್ಸ್ ನಲ್ಲಿ 167 ರನ್ ಬಾರಿಸಿದ್ದರು. ಆತಿಥೇಯ ಆಸ್ಟ್ರೇಲಿಯಾ ತಂಡ ಈ ಪಂದ್ಯವನ್ನು 141 ರನ್ ಗಳಿಂದ ಗೆದ್ದಿತ್ತು. ಆದರೆ ಲಕ್ಷ್ಮಣ್ ಹೇಳುವ ಪ್ರಕಾರ ಅವರ ಅವಿಸ್ಮರಣೀಯ 281 ರನ್ ಸಾಧನೆಗೆ ಆತ್ಮವಿಶ್ವಾಸ ಲಭಿಸಿದ್ದು 167 ರನ್ ಬಾರಿಸಿದ್ದ ದಿನವಂತೆ.

Story first published: Friday, November 16, 2018, 18:58 [IST]
Other articles published on Nov 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X