ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ನೂತನ ಜೆರ್ಸಿ, ಹೊಸ ಹುಮ್ಮಸ್ಸಿನಲ್ಲಿ ಭಾರತ!

Men in Blue put on the revamped jerseys for the first time

ಹೈದರಾಬಾದ್, ಮಾರ್ಚ್ 2: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 2) ನಡೆಯುವ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಟೀಮ್ ಇಂಡಿಯಾ ಹೊಸ ಮೆರಗಿನಿಂದ ಗಮನ ಸೆಳೆಯಲಿದೆ. ಕಾರಣ, ಭಾರತ ಕ್ರಿಕೆಟ್ ತಂಡ ನೂತನ ಜೆರ್ಸಿಯೊಂದಿಗೆ ಮೈದಾನಕ್ಕಿಳಿಯಲಿದೆ.

ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45585

ತೆಂಡೂಲ್ಕರ್ ದಾಖಲೆ ಮುರಿಯುವತ್ತ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಣ್ಣುತೆಂಡೂಲ್ಕರ್ ದಾಖಲೆ ಮುರಿಯುವತ್ತ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಣ್ಣು

ಬಿಸಿಸಿಐಯು ಭಾರತ ಕ್ರಿಕೆಟ್ ತಂಡದ ನೂತನ ಜೆರ್ಸಿಯ ಚಿತ್ರ, ವಿಡಿಯೋವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಹಿಂದಿನ ಜೆರ್ಸಿಗೆ ಹೋಲಿಸಿದರೆ ನೂತನ ಜೆರ್ಸಿ ಕೊಂಚ ಭಿನ್ನವಾಗಿ ಮತ್ತು ಆಕರ್ಷಕವಾಗಿದೆ. ಆಕಾಶ ನೀಲಿ, ಕೇಸರಿ ಮತ್ತು ಬಿಳಿ ಬಣ್ಣದ ಜೆರ್ಸಿಯಲ್ಲಿ ಪ್ರಾಯೋಜಕ 'ಒಪ್ಪೋ' ಮೊಬೈಲ್ ಬ್ರ್ಯಾಂಡ್ ಪ್ರಿಂಟ್ ಹಾಕಲಾಗಿದೆ.

ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ, ಶಿಖರ್ ಧವನ್, ಯುಜುವೇಂದ್ರ ಚಾಹಲ್ ಮೊದಲಾದವರಿದ್ದಾರೆ. ನೂತನ ಕಿಟ್‌ ಅನ್ನು ಉಪನಾಯಕ ಪರಿಚಯಿಸಿದ್ದಾರೆ. ವಿಶೇಷವೆಂದರೆ ಜೆರ್ಸಿಯ ನೆಕ್ ಭಾಗದಲ್ಲಿ 25 ಜೂನ್ 1983 (ಚೊಚ್ಚಲ ವಿಶ್ವಕಪ್ ಗೆದ್ದ ದಿನಾಂಕ), 24 ಸೆಪ್ಟೆಂಬರ್ 2007 (ಟಿ20 ವಿಶ್ವಕಪ್), 2 ಏಪ್ರಿಲ್ 2011 (ದ್ವಿತೀಯ ವಿಶ್ವಕಪ್) ದಿನಾಂಕಗಳನ್ನು ಅಚ್ಚು ಹಾಕಲಾಗಿದೆ.

ಟ್ವಿಟರ್‌ನಲ್ಲಿ ಹಾಕಲಾಗಿರುವ ಚಿತ್ರದಲ್ಲಿ ಕೊಹ್ಲಿ, ಧೋನಿ, ಮನ್‌ಪ್ರೀತ್ ಕೌರ್, ಪೃಥ್ವಿ ಶಾ ಮೊದಲಾದವರಿದ್ದಾರೆ. ಆದರೆ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕಾಣಿಸಿಕೊಂಡಿಲ್ಲ. ಇದಕ್ಕೆ ಕೆಲ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ತಂಡದ ಉಪನಾಯಕ ರೋಹಿತ್ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಕೆಲವರು ಬರೆದುಕೊಂಡಿದ್ದಾರೆ.

Story first published: Saturday, March 2, 2019, 13:11 [IST]
Other articles published on Mar 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X