ಶ್ರೀಲಂಕಾದ 10 ವಿಕೆಟ್ ಮುರಿದ ಸ್ಟಾರ್ಕ್, ಆಸೀಸ್ ಮಡಿಲಿಗೆ ಟೆಸ್ಟ್ ಸರಣಿ!

ಸಿಡ್ನಿ, ಫೆಬ್ರವರಿ 4: ಆಸ್ಟ್ರೇಲಿಯಾ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಮಾರಕ ದಾಳಿಗೆ ಸಿಲುಕಿದ ಪ್ರವಾಸಿ ಶ್ರೀಲಂಕಾ, ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ಸೋಮವಾರ (ಫೆಬ್ರವರಿ 4) ಮುಕ್ತಾಯಗೊಂಡ ಶ್ರೀಲಂಕಾ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ 366 ರನ್ ಹೀನಾಯ ಸೋಲನುಭವಿಸಿದೆ. ಟೆಸ್ಟ್ ಸರಣಿಯನ್ನು ಆಸೀಸ್ 2-0ಯಿಂದ ಗೆದ್ದುಕೊಂಡಿದೆ.
ಶ್ರೀಲಂಕಾದ ಒಟ್ಟು 10 (5+5) ವಿಕೆಟ್ ಗಳನ್ನು ಉರುಳಿಸಿದ ಸ್ಟಾರ್ಕ್ ಪ್ರವಾಸಿಗರ ಸೋಲಿಗೆ ಕಾರಣವಾದರು. ಮತ್ತೊಂದೆಡೆ ಲಂಕಾದ ಬ್ಯಾಟಿಂಗ್ ದೌರ್ಬಲ್ಯವೂ ಸೋಲಿನ ಬೆಲೆ ತೆರುವಂತೆ ಮಾಡಿತು. ಮೊದಲ ಪಂದ್ಯದಲ್ಲಿ ಶ್ರೀಲಂಕಾ 40 ರನ್ ಸೋಲನುಭವಿಸಿತ್ತು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸೀಸ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಜೋ ಬರ್ನ್ಸ್ 180, ಟ್ರಾವಿಸ್ ಹೆಡ್ 161, ಕರ್ಟಿಸ್ ಪ್ಯಾಟರ್ಸನ್ 114 ರನ್ ಬಾರಿಸಿದ್ದರಿಂದ ಆಸ್ಟ್ರೇಲಿಯಾ 132 ಓವರ್‌ಗಳ್ಲಲಿ 5 ವಿಕೆಟ್ ನಷ್ಟಕ್ಕೆ 534 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತು.
ಲಂಕಾ ತಂಡ, ದಿಮುತ್ ಕರುಣರತ್ನೆ 59 ರನ್ ನೆರವಿನೊಂದಿಗೆ 68.3 ಓವರ್‌ನಲ್ಲಿ 215 ರನ್ ಬಾರಿಸುವುರೊಂದಿಗೆ ಹಿನ್ನಡೆ ಅನುಭವಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸೀಸ್ 47 ಓವರ್‌ನಲ್ಲಿ 3 ವಿಕೆಟ್ ಕಳೆದು 196 ರನ್ ಬಾರಿಸಿ ಮತ್ತೆ ಡಿಕ್ಲೇರ್ ಘೋಷಿಸಿತು.
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್‌ನಲ್ಲಿ ಸುಧಾರಣೆ ತೋರಿಸಲಿಲ್ಲ. 51 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 149 ರನ್ ಪೇರಿಸುವುದರೊಂದಿಗೆ ಹೀನಾಯ ಸೋಲನುಭವಿಸಿತು. ಮಿಚೆಲ್ ಸ್ಟಾರ್ಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಸರಣಿ ಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications