ಮಿಚೆಲ್ ಸ್ಟಾರ್ಕ್ vs ರೋಹಿತ್, ಧವನ್, ಕೊಹ್ಲಿ: ಕುತೂಹಲಕಾರಿ ಅಂಕಿಅಂಶಗಳು!

ಮುಂಬೈ, ಜನವರಿ 14: ಭಾರತಕ್ಕೆ ಪ್ರವಾಸ ಬಂದಿದ್ದ ಶ್ರೀಲಂಕಾ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧ ನೀರಸ ಪ್ರದರ್ಶನ ನೀಡಿತ್ತು. ಆದರೆ ಮಂಗಳವಾರದಿಂದ (ಜನವರಿ 14) ಬಲಿಷ್ಠ ಆಸ್ಟ್ರೇಲಿಯಾ ತಂಡ ವಿರಾಟ್ ಕೊಹ್ಲಿ ಪಡೆಯ ವಿರುದ್ಧ ಏಕದಿನ ಸರಣಿಯ ಸವಾಲು ಸ್ವೀಕರಿಸುತ್ತಿದೆ.

ಭಾರತ vs ಆಸ್ಟ್ರೇಲಿಯಾ: ದಾಖಲೆಯ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ!

ಮೂರು ಪಂದ್ಯಗಳ ಏಕದಿನ ಸರಣಿಯ ಪಂದ್ಯಗಳು ಮುಂಬೈ, ರಾಜ್‌ಕೋಟ್‌ ಮತ್ತು ಬೆಂಗಳೂರು ತಾಣಗಳಲ್ಲಿ ನಡೆಯುವುದರಲ್ಲಿದೆ. ಭಾರತ-ಆಸ್ಟ್ರೇಲಿಯಾ ಎರಡೂ ತಂಡಗಳಲ್ಲೂ ಬಿರುಗೈ ದಾಂಡಿಗರಿದ್ದಾರೆ, ಮಾರಕ ಬೌಲರ್‌ಗಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ, 1ನೇ ಏಕದಿನ, Live ಸ್ಕೋರ್‌ಕಾರ್ಡ್

1
46130

ಭಾರತದ ಟಾಪ್ ಬ್ಯಾಟಿಂಗ್‌ ಆರ್ಡರ್ ವಿರುದ್ಧ ಆಸ್ಟ್ರೇಲಿಯಾ ಮಾರಕ ಬೌಲರ್ ಮಿಚೆಲ್ ಸ್ಟಾರ್ಕ್‌ ಅವರ ಅಂಕಿ-ಅಂಶಗಳು ಏನು ಹೇಳುತ್ತವೆ ಗೊತ್ತಾ?

10 ವರ್ಷಗಳ ಬಳಿಕ ಭಾರತಕ್ಕೆ

10 ವರ್ಷಗಳ ಬಳಿಕ ಭಾರತಕ್ಕೆ

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಮುಂಚೂಣಿ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಭಾರತದಲ್ಲಿ ನಡೆದ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಟಾಪ್ ಬ್ಯಾಟಿಂಗ್ ಆರ್ಡರ್‌ ಅನ್ನು ಸುಲಭವಾಗಿ ಕಟ್ಟಿಹಾಕಲು ಸ್ಟಾರ್ಕ್ ಅವರಿಂದಾಗಿಲ್ಲ. ಗಮ್ಮತ್ತಿನ ವಿಚಾರವೆಂದರೆ ಸ್ಟಾರ್ಕ್ ಭಾರತದಲ್ಲಿ ಕಡೇಯ ಪಂದ್ಯವನ್ನಾಡಿದ್ದು ಸುಮಾರು 10 ವರ್ಷಗಳ ಹಿಂದೆ.

ಮಿಚೆಲ್ ಸ್ಟಾರ್ಕ್ vs ರೋಹಿತ್ ಶರ್ಮಾ

ಮಿಚೆಲ್ ಸ್ಟಾರ್ಕ್ vs ರೋಹಿತ್ ಶರ್ಮಾ

ಭಾರತ ತಂಡದ ಅಪಾಯಕಾರಿ ಬ್ಯಾಟ್ಸ್‌ಮನ್, ಓಪನರ್ ರೋಹಿತ್ ಶರ್ಮಾ ಮತ್ತು ಮಿಚೆಲ್ ಸ್ಟಾರ್ಕ್ ಒಟ್ಟು 5 ಇನ್ನಿಂಗ್ಸ್‌ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ರೋಹಿತ್‌ಗೆ ಸ್ಟಾರ್ಕ್ 65 ರನ್ ನೀಡಿದ್ದಾರೆ. 1 ಬಾರಿ ಶರ್ಮಾ ಅವರನ್ನು ಔಟ್ ಮಾಡಿದ್ದಾರೆ. ಸ್ಟಾರ್ಕ್ ಅವರ 71 ಎಸೆತಗಳನ್ನು ರೋಹಿತ್ ಎದುರಿಸಿದ್ದಾರೆ.

ಮಿಚೆಲ್ ಸ್ಟಾರ್ಕ್ vs ಶಿಖರ್ ಧವನ್

ಮಿಚೆಲ್ ಸ್ಟಾರ್ಕ್ vs ಶಿಖರ್ ಧವನ್

ಸ್ಟಾರ್ಕ್ ಮತ್ತು ಭಾರತದ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್, ಅನುಭವಿ ಶಿಖರ್ ಧವನ್ 4 ಇನ್ನಿಂಗ್ಸ್‌ಗಳಲ್ಲಿ ಎದುರಾಬದುರಾಗಿದ್ದಾರೆ. ಈ ವೇಳೆ ಧವನ್‌ಗೆ 23 ರನ್ ನೀಡಿರುವ ಸ್ಟಾರ್ಕ್ ಒಟ್ಟು 3 ಬಾರಿ ಧವನ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದರು. ಧವನ್ ಒಟ್ಟಿಗೆ 41 ಎಸೆತಗಳನ್ನು ಎದುರಿಸಿದ್ದರು.

ಮಿಚೆಲ್ ಸ್ಟಾರ್ಕ್ vs ವಿರಾಟ್ ಕೊಹ್ಲಿ

ಮಿಚೆಲ್ ಸ್ಟಾರ್ಕ್ vs ವಿರಾಟ್ ಕೊಹ್ಲಿ

ನಾಯಕ ವಿರಾಟ್ ಕೊಹ್ಲಿ ಮತ್ತು ಮಿಚೆಲ್ ಸ್ಟಾರ್ಕ್ ಮುಖಾಮುಖಿ ಇನ್ನೂ ಕುತೂಹಲಕಾರಿಯಾಗಿದೆ. ಸ್ಟಾರ್ಕ್ ಅವರನ್ನು ಕೊಹ್ಲಿ 4 ಇನ್ನಿಂಗ್ಸ್‌ಗಳಲ್ಲಿ ಎದುರುಗೊಂಡಿದ್ದಾರೆ. ಈ ವೇಳೆ 57 ಎಸೆತಗಳನ್ನೆದುರಿಸಿ 56 ರನ್ ಕಲೆ ಹಾಕಿರುವ ಕೊಹ್ಲಿ ಒಂದು ಬಾರಿಯೂ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿಲ್ಲ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, January 14, 2020, 13:00 [IST]
Other articles published on Jan 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X