2ನೇ ಟೆಸ್ಟ್ : ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Posted By:

ನಾಗ್ಪುರ್, ನವೆಂಬರ್ 27: ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಪ್ರವಾಸಿ ಶ್ರೀಲಂಕಾ ತಂಡ 166 ಸ್ಕೋರಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದೆ.

ಸ್ಕೋರ್ ಕಾರ್ಡ್

405ರನ್ ಗಳಿಂದ ಹಿಂದೆ ಉಳಿದಿದ್ದ ಶ್ರೀಲಂಕಾ ತಂಡ ತನ್ನ ಎರಡನೇ ಇನ್ನಿಂಗ್ಸ್ ನ ಮೊದಲ ಓವರ್ ನಲ್ಲೇ ಆಘಾತ ಅನುಭವಿಸಿತು. ನಾಯಕ ದಿನೇಶ್ ಚಂಡಿಮಾಲ್ 61 ರನ್ ಕೊನೆಯಲ್ಲಿ ಸುರಂಗ ಲಕ್ಮಲ್ 31ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯುವ ಸಾಹಸ ತೋರಲಿಲ್ಲ.

Nagpur: Clinical India trounce Sri Lanka by an innings and 239 runs, take 1-0 lead

ಭಾರತದ ಪರ ರವಿಚಂದ್ರನ್ ಅಶ್ವಿನ್ 63ಕ್ಕೆ4 ಗಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಇಶಾಂತ್ ಶರ್ಮ, ರವೀಂದ್ರ ಜಡೇಜ, ಉಮೇಶ್ ಯಾದವ್ ತಲಾ 2 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್ :
ಭಾರತ : ಮೊದಲ ಇನ್ನಿಂಗ್ಸ್ 610/6 ಡಿಕ್ಲೇರ್
ಶ್ರೀಲಂಕಾ : ಮೊದಲ ಇನ್ನಿಂಗ್ಸ್ 205 ಆಲೌಟ್
ಎರಡನೇ ಇನ್ನಿಂಗ್ಸ್ : 166 ಆಲೌಟ್

Story first published: Monday, November 27, 2017, 13:29 [IST]
Other articles published on Nov 27, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ