ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ನವದೀಪ್ ಸೈನಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಸಾಧ್ಯತೆ

ವೇಗಕ್ಕಿಂತ ಸ್ವಿಂಗ್ ಮತ್ತು ನಿಖರತೆಯನ್ನು ಹೆಚ್ಚು ಅವಲಂಬಿಸಿರುವ ಬಲಗೈ ವೇಗಿ ನವದೀಪ್ ಸೈನಿ, ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುವ ಸಾಧ್ಯತೆ ಹೆಚ್ಚಿದೆ.

ಸೀಮಿತ ಓವರ್‌ಗಳ ವಿಭಾಗದಲ್ಲಿ 2019 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ, ಸೈನಿ 5 ಏಕದಿನ ಮತ್ತು 10 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಮವಾಗಿ 5 ಮತ್ತು 13 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆಯ್ಕೆದಾರರು ಮತ್ತು ನಾಯಕನನ್ನು ಮೆಚ್ಚಿಸಿದ್ದಾರೆ.

ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿರುವ ಭಾರತ

ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿರುವ ಭಾರತ

ನಾಲ್ಕು ಟೆಸ್ಟ್ ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ 20 ಅಂತರಾಷ್ಟ್ರೀಯ ಪಂದ್ಯಗಳನ್ನು ಒಳಗೊಂಡಿರುವ ಇಡೀ ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಆಟಗಾರರ ಆಯ್ಕೆಯು ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಏಕೆಂದರೆ ಪ್ರಮುಖ ಬೌಲರ್‌ಗಳ ಅನುಪಸ್ಥಿತಿ ತಂಡಕ್ಕೆ ಕಾಡಲಿದೆ.

ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ವೇಗಿ ನವದೀಪ್ ಸೈನಿ ವಿಶೇಷ ದಾಖಲೆ

ಇಶಾಂತ್, ಭುವಿ ಅಲಭ್ಯತೆ ಕಾಡಲಿದೆ!

ಇಶಾಂತ್, ಭುವಿ ಅಲಭ್ಯತೆ ಕಾಡಲಿದೆ!

ಟೆಸ್ಟ್ ತಂಡಕ್ಕೆ ವೇಗದ ದಾಳಿಯನ್ನು ಆರಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಇದಕ್ಕೆ ಕಾರಣ ಭಾರತದ ಪ್ರಮುಖ ಬೌಲರ್‌ಗಳಾದ ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಇಬ್ಬರೂ ಐಪಿಎಲ್‌ 13ನೇ ಆವೃತ್ತಿಯಲ್ಲಿ ಗಾಯಗೊಂಡಿದ್ದಾರೆ. ಈ ಇಬ್ಬರೂಪ್ರಮುಖ ವೇಗಿಗಳು ತಂಡದಿಂದ ಹೊರಬಿದ್ದಿದ್ದಾರೆ. ಮತ್ತೊಂದೆಡೆ, ಹಾರ್ದಿಕ್ ಕಳೆದ ವರ್ಷ ಗಾಯಗೊಂಡ ಬಳಿಕ ಒಂದೇ ಒಂದು ಎಸೆತವನ್ನು ಸಹ ಬೌಲ್ ಮಾಡಿಲ್ಲ.

ಹಾರ್ದಿಕ್ ಪಾಂಡ್ಯ ಚೇತರಿಕೆ ಸಾಧ್ಯತೆ ಕಡಿಮೆ

ಹಾರ್ದಿಕ್ ಪಾಂಡ್ಯ ಚೇತರಿಕೆ ಸಾಧ್ಯತೆ ಕಡಿಮೆ

ಬೆನ್ನಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಈಗಾಗಲೇ ಚೇತರಿಸಿಕೊಂಡಿದ್ದರೂ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಪಾಂಡ್ಯ ಬೌಲಿಂಗ್ ಮಾಡುತ್ತಿಲ್ಲ. ಹೀಗಾಗಿ ತಂಡದ ಬೌಲಿಂಗ್ ವಿಭಾಗದಲ್ಲಿ ಸೈನಿಗೆ ಅವಕಾಶ ಸಿಗಬಹುದು.

ಆರ್‌ಸಿಬಿ ವೇಗಿ ನವದೀಪ್ ಸೈನಿ ಶೂನಲ್ಲಿ ಏನು ಬರೆದಿದೆ ಗೊತ್ತಾ?!

ಬುಮ್ರಾ, ಶಮಿಯೊಂದಿಗೆ ಸೈನಿ ಬೌಲಿಂಗ್?

ಬುಮ್ರಾ, ಶಮಿಯೊಂದಿಗೆ ಸೈನಿ ಬೌಲಿಂಗ್?

ಸೈನಿ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಪ್ರಥಮ ಹೆಜ್ಜೆಯನ್ನು ಇಡುವ ಸಾಧ್ಯತೆ ಇದೆ. ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ವೇಗಿಗಳ ಜೊತೆಗೆ ಸೈನಿ ಕೂಡ ಬೌಲ್ ಮಾಡಬಹುದು.

ಆಸ್ಟ್ರೇಲಿಯಾ ಪ್ರವಾಸಕ್ಕೆ ಒಂದು ತಿಂಗಳು ಬಾಕಿ ಇರುವಾಗ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡವನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ಸಭೆಯನ್ನು ಇನ್ನೂ ನಿಗದಿಪಡಿಸಿಲ್ಲ. ಮಂಡಳಿಯು ಕ್ರಿಕೆಟ್ ಆಸ್ಟ್ರೇಲಿಯಾದ (ಸಿಎ) ವಿವರಕ್ಕಾಗಿ ಕಾಯುತ್ತಿರುವುದರಿಂದ ಸಭೆ ವಿಳಂಬವಾಗಿದೆ. ಅಲ್ಲದೆ, ಭಾರತೀಯ ಆಟಗಾರರಿಗೆ ತರಬೇತಿ ಸೌಲಭ್ಯಗಳನ್ನು ಸಿಎ ಒದಗಿಸಬೇಕೆಂದು ಬಿಸಿಸಿಐ ಬಯಸಿದೆ, ಜೊತೆಗೆ ಕ್ವಾರಂಟೈನ್ ದಿನಗಳ ಅವಧಿ ತಗ್ಗಿಸಲು ಕೋರಿದೆ.

"ಐಪಿಎಲ್ ಪೂರ್ಣಗೊಂಡ ನಂತರ ಆಟಗಾರರು ದುಬೈನಿಂದ ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ, ಆದರೆ ಈ ತಿಂಗಳ ಅಂತ್ಯದ ವೇಳೆಗೆ ಸಹಾಯಕ ಸಿಬ್ಬಂದಿ ಆಸ್ಟ್ರೇಲಿಯಾ ತಲುಪುವ ಸಾಧ್ಯತೆಯಿದೆ" ಎಂದು ವರದಿ ಹೇಳುತ್ತದೆ.

Story first published: Friday, October 16, 2020, 18:27 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X