ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಬಿಟ್ಟು ಬೇರೆ ಯಾರಿಗೂ ಆ ರೀತಿ ಸಿಕ್ಸ್ ಹೊಡೆಯಲು ಆಗಲ್ಲ ಎಂದ ಹ್ಯಾರಿಸ್ ರೌಫ್

No One Can Hit Six Like That: Haris Rauf About Virat Kohli Hitting Two Sixes

ಟಿ20 ವಿಶ್ವಕಪ್‌ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಭಾರತ ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಶ್ರೇಷ್ಠ ಇನ್ನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ ಭಾರತಕ್ಕೆ ಅವಿಸ್ಮರಣೀಯ ಜಯ ತಂದುಕೊಟ್ಟಿದ್ದರು.

ಪಾಕ್‌ ವಿರುದ್ಧ 82 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಕೊಹ್ಲಿ, ನಿರ್ಣಾಯಕ 19 ನೇ ಓವರ್‌ನಲ್ಲಿ ರೌಫ್ ಬೌಲಿಂಗ್‌ನಲ್ಲಿ ಎರಡು ಅದ್ಭುತ ಸಿಕ್ಸರ್ ಬಾರಿಸಿದ್ದರು. ಅದರಲ್ಲೂ ಪಾಕಿಸ್ತಾನದ ಪ್ರಮುಖ ವೇಗದ ಬೌಲರ್ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್ ಬಾರಿಸುವ ಮೂಲಕ ನಂಬಲಸಾಧ್ಯ ಬ್ಯಾಟಿಂಗ್ ಮಾಡಿದರು.

ವಿರಾಟ್ ಕೊಹ್ಲಿ ಹೊಡೆದ ಒಂದು ಸಿಕ್ಸ್ ಅನ್ನು ಐಸಿಸಿ ಕೂಡ ಟಿ20 ಕ್ರಿಕೆಟ್‌ನ ಶ್ರೇಷ್ಠ ಹೊಡೆತ ಎಂದು ಹೇಳಿದೆ. ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್, ಈ ಬಗ್ಗೆ ಮಾತನಾಡಿದ್ದು, ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಉಳಿದ ಯಾರಿಗಾದರೂ ಆ ರೀತಿ ಸಿಕ್ಸರ್ ಹೊಡೆಯುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

PKL 2022 : ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತ ಬೆಂಗಳೂರು ಬುಲ್ಸ್PKL 2022 : ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತ ಬೆಂಗಳೂರು ಬುಲ್ಸ್

"ಯಾವುದೇ ಆಟಗಾರರು ಆ ರೀತಿ ನನ್ನ ಬೌಲಿಂಗ್‌ನಲ್ಲಿ ಸಿಕ್ಸರ್ ಹೊಡೆಯಲು ಸಾಧ್ಯವಿಲ್ಲ. ದಿನೇಶ್ ಕಾರ್ತಿಕ್ ಅಥವಾ ಹಾರ್ದಿಕ್ ಪಾಂಡ್ಯ ಆ ಸಿಕ್ಸ್ ಹೊಡೆದಿದ್ದರೆ, ನನಗೆ ನೋವಾಗುತ್ತಿತ್ತು. ಆದರೆ, ಕೊಹ್ಲಿ ಆ ಹೊಡೆತಗಳನ್ನು ಹೊಡೆದದ್ದು, ಸಮಾಧಾನ ತಂದಿದೆ" ಎಂದು ಹೇಳಿದರು.

No One Can Hit Six Like That: Haris Rauf About Virat Kohli Hitting Two Sixes

ಕೊಹ್ಲಿ ನನ್ನ ಯೋಜನೆಯನ್ನು ವಿಫಲಗೊಳಿಸಿದರು

ಭಾರತಕ್ಕೆ ಕೊನೆಯ 12 ಎಸೆತಗಳಲ್ಲಿ 31 ರನ್ ಬೇಕಿತ್ತು, ನಾನು ನಾಲ್ಕು ಎಸೆತಗಳಲ್ಲಿ ಕೇವಲ ಮೂರು ರನ್ ನೀಡಿದ್ದೆ, ನವಾಜ್ ಕೊನೆಯ ಓವರ್ ಬೌಲಿಂಗ್ ಮಾಡುತ್ತಾರೆ ಎಂದು ನನಗೆ ತಿಳಿದಿತ್ತು. ಆತ ಸ್ಪಿನ್ನರ್ ಆಗಿದ್ದರಿಂದ ನಾನೇ ಹೆಚ್ಚಿನ ರನ್ ನಿಯಂತ್ರಿಸಬೇಕೆಂದು ನಿರ್ಧರಿಸಿದ್ದೆ. 8 ಎಸೆತಗಳಲ್ಲಿ 28 ರನ್ ಬೇಕಿದ್ದ ಕಾರಣ , ನಾನು ನಿಧಾನಗತಿಯ ಎಸೆತಗಳನ್ನು ಬೌಲ್ ಮಾಡಿದ್ದೆ, ಆದರೆ ಆ ಎರಡು ಎಸೆತಗಳನ್ನು ಅವರು ಚೆನ್ನಾಗಿ ಗ್ರಹಿಸಿದರು ಎಂದು ರೌಫ್ ಹೇಳಿದ್ದಾರೆ.

ದೊಡ್ಡದಾದ ಬೌಂಡರಿ ಇದ್ದ ಕಾರಣ, ಅವರು ಬೌಂಡರಿ ಗಳಿಸದಂತೆ ಬೌಲಿಂಗ್ ಮಾಡಬೇಕೆಂದು ನಿರ್ಧರಿಸಿದ್ದೆ. ಆದರೆ, ವಿರಾಟ್ ಕೊಹ್ಲಿ ತಾವೇಕೆ ವಿಶ್ವದ ಶ್ರೇಷ್ಠ ಬ್ಯಾಟರ್ ಎನ್ನುವುದನ್ನು ಆ ಎರಡು ಸಿಕ್ಸರ್ ಮೂಲಕ ಸಾಬೀತು ಪಡಿಸಿದರು ಎಂದು ಹೇಳಿದ್ದಾರೆ.

160 ರನ್‌ ಗುರಿಯನ್ನು ಬೆನ್ನಟ್ಟಿದ ಭಾರತ, ಪವರ್ ಪ್ಲೇನಲ್ಲಿ 31 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ 113 ರನ್‌ಗಳ ಜೊತೆಯಾಟ ಆಡುವ ಮೂಲಕ ಭಾರತಕ್ಕೆ ರೋಚಕ ಜತ ತಂದುಕೊಟ್ಟರು.

Story first published: Wednesday, November 30, 2022, 23:08 [IST]
Other articles published on Nov 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X