ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೆಮಿಫೈನಲ್ಸ್‌ನಲ್ಲಿ ಭಾರತ ವಿರುದ್ಧ ಕಿವೀಸ್‌ ತನ್ನ ಪ್ರಮುಖ ಅಸ್ತ್ರದ ಬಳಕೆ!

NZ coach backs Ferguson to make difference against India

ಮ್ಯಾಂಚೆಸ್ಟರ್‌, ಜುಲೈ 08: ಪ್ರಸಕ್ತ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ ತಂಡಕ್ಕೆ ತನ್ನ ಪ್ರಮುಖ ವೇಗದ ಬೌಲರ್‌ ಲಾಕಿ ಫರ್ಗ್ಯೂಸನ್‌ ಸೇವೆ ಲಭ್ಯವಾಗಿರಲಿಲ್ಲ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಗಾಯದ ಸಮಸ್ಯೆಗೆ ತುತ್ತಾಗಿದ್ದ ಬಲಗೈ ವೇಗದ ಬೌಲರ್‌ ಫರ್ಗ್ಯೂಸನ್‌ ಇದೀಗ ಸಂಪೂರ್ಣ ಫಿಟ್‌ ಆಗಿದ್ದು, ಭಾರತ ವಿರುದ್ಧ ಇದೇ ಮಂಗಳವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅಷ್ಟೇ ಅಲ್ಲದೆ ಭಾರತ ವಿರುದ್ಧದ ಪಂದ್ಯದಲ್ಲಿ ಫರ್ಗ್ಯೂಸನ್‌ ಕಿವೀಸ್‌ನ ಪ್ರಮುಖ ಅಸ್ತ್ರ ಎಂದು ನ್ಯೂಜಿಲೆಂಡ್‌ನ ಕೋಚ್‌ ಗ್ಯಾರಿ ಸ್ಟೆಡ್‌ ಹೇಳಿದ್ದಾರೆ.

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಫರ್ಗ್ಯೂಸನ್‌ ನ್ಯೂಜಿಲೆಂಡ್‌ ಪರ ಅತಿ ಹೆಚ್ಚು (17) ವಿಕೆಟ್‌ ಪಡೆದ ಬೌಲರ್‌ ಆಗಿದ್ದಾರೆ. ಹೀಗಾಗಿ ಫರ್ಗ್ಯೂಸನ್‌ ಚೇತರಿಸಿರುವುದು ನ್ಯೂಜಿಲೆಂಡ್‌ಗೆ ಹೆಚ್ಚಿನ ಬಲ ತಂದುಕೊಟ್ಟಿದೆ.

ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್ಸ್‌ಗೆ ಬ್ಯಾಟಿಂಗ್‌ ಬಲ ಹೆಚ್ಚಿಸಿದ ಆಸೀಸ್‌!ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್ಸ್‌ಗೆ ಬ್ಯಾಟಿಂಗ್‌ ಬಲ ಹೆಚ್ಚಿಸಿದ ಆಸೀಸ್‌!

"ಲಾಕಿ ಖಂಡಿತಾ ಈ ಪಂದ್ಯದಲ್ಲಿ ಆಡುತ್ತಾರೆಂಬ ವಿಶ್ವಾಸವಿದೆ. ಇಂಗ್ಲೆಂಡ್ ವಿರುದ್ಧದ ಕಳೆದ ಪಂದ್ಯವೇ ಸೆಮಿಫೈನಲ್‌ ಅಥವಾ ಫೈನಲ್‌ ಆಗಿದ್ದರೆ ಖಂಡಿತವಾಗಿಯೂ ನಾವು ಫರ್ಗ್ಯೂಸನ್‌ ಅವರನ್ನು ಆಡಿಸುತ್ತಿದ್ದೆವು. ಅವರ ತೊಡೆಯ ಸ್ನಾಯುವಿನಲ್ಲಿ ಸೆಳೆತ ಶುರುವಾಗಿತ್ತು. ಹೀಗಾಗಿ ಅವರಿಗೆ 48 ಕಾಲ ವಿರಾಮದ ಅಗತ್ಯವಿತ್ತು. ಇದೀಗ ಅವರು ಚೇತರಿಸಿದ್ದು, ಕಣಕ್ಕಿಳಿಯಲು ಸಜ್ಜಾಗಿದ್ದಾರೆ,'' ಎಂದು ಸ್ಟೆಡ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಒಟ್ಟಾರೆ 17 ವಿಕೆಟ್‌ಗಳನ್ನು ಉರುಳಿಸಿರುವ 28 ವರ್ಷದ ಯುವ ವೇಗದ ಬೌಲರ್‌ ಫರ್ಗ್ಯೂಸನ್‌, ಟೂರ್ನಿಯಲ್ಲಿ ಅತಿ ಹೆಚ್ಉ ವಿಕೆಟ್‌ ಪಡೆದವರ ಪೈಕಿ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ODI rankings: ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನಂ.1 ಸ್ಥಾನಕ್ಕೆ ಕುತ್ತು!

"ಲಾಕಿ ನಮ್ಮ ತಂಡದ ಪ್ರಮುಖ ಅಸ್ತ್ರ. ಅವರಿಗಿದು ಮೊದಲ ವಿಶ್ವಕಪ್‌ ಅಲ್ಲ. ಪ್ರತಿಬಾರಿ ಅವರು ಬೌಲಿಂಗ್‌ಗೆ ಬಂದಾಗಲೆಲ್ಲಾ ಏನಾದರೂ ಬದಲಾವಣೆ ತರುತ್ತಾರೆ ಎಂಬ ಭಾವನೆ ನನ್ನನ್ನು ಆವರಿಸುತ್ತದೆ. ತಮ್ಮ ವೇಗದಿಂದ ಹಾಗೂ ಎದುರಾಳಿಯ ಮೇಲೆ ಒತ್ತಡ ಹೇರುವ ಮೂಲಕ ಅವರು ಯಶಸ್ಸು ತಂದುಕೊಡುತ್ತಾರೆ. ಭಾರತ ವಿರುದ್ಧವೂ ಅವರು ಇಂಥದ್ದೇ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸವಿದೆ,'' ಎಂದು ಸ್ಟೆಡ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Story first published: Monday, July 8, 2019, 16:47 [IST]
Other articles published on Jul 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X