ಆವತ್ತು ಹರ್ಷಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ಗೆದ್ದಿತ್ತು!

ನವದೆಹಲಿ: ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ವೇಗಿ ಹರ್ಷಲ್ ಪಟೇಲ್ ಈ ಸೀಸನ್‌ನಲ್ಲಿಯೂ ಒಂದು ಪಂದ್ಯದಲ್ಲಿ ಬ್ಯಾಟ್ ಬೀಸಿದ್ದನ್ನು ನೀವು ಗಮನಿಸಿರಬಹುದು. ಈ ಹಿಂದೆ ಕೂಡ ಹರ್ಷಲ್ ಬೌಲಿಂಗ್‌ನಲ್ಲಿ ಮಾತ್ರ ಅಲ್ಲದೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾದ ಉದಾಹರಣೆಯಿದೆ.

ಧೋನಿ,ಕೊಹ್ಲಿ ಮತ್ತು ರೋಹಿತ್ ಈ ಮೂವರನ್ನೂ ಅತಿಹೆಚ್ಚು ಕಾಡಿದ ಏಕೈಕ ಬೌಲರ್ ಈತ!ಧೋನಿ,ಕೊಹ್ಲಿ ಮತ್ತು ರೋಹಿತ್ ಈ ಮೂವರನ್ನೂ ಅತಿಹೆಚ್ಚು ಕಾಡಿದ ಏಕೈಕ ಬೌಲರ್ ಈತ!

ಆಗ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿದ್ದ ಹರ್ಷಲ್ ಪಟೇಲ್ ಆಲ್ ರೌಂಡರ್ ಪ್ರದರ್ಶನ ನೀಡಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಗೆಲುವಿಗೆ ಕಾರಣರಾಗಿದ್ದರು. ಆವತ್ತು 1 ವಿಕೆಟ್‌ ಪಡೆದಿದ್ದ ಹರ್ಷಲ್, ಕೇವಲ 16 ಎಸೆತಗಳಿಗೆ 36 ರನ್ ಕೊಡುಗೆ ನೀಡಿದ್ದರು. ಇದರಲ್ಲಿ 1 ಫೋರ್, 4 ಸಿಕ್ಸರ್ ಸೇರಿತ್ತು.

2018 ಮೇ 18ರಲ್ಲಿ ನಡೆದಿದ್ದ ಐಪಿಎಲ್ 52ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ 7ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಹರ್ಷಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ಅಲ್ಲದೆ 23 ರನ್ ನೀಡಿ 1 ವಿಕೆಟ್ ಕೂಡ ಪಡೆದಿದ್ದರು.

ರಾಹುಲ್ ದ್ರಾವಿಡ್ ಉದ್ದೇಶದ ಬಗ್ಗೆ ಮೌನ ಮುರಿದ ಗ್ರೆಗ್ ಚಾಪೆಲ್!ರಾಹುಲ್ ದ್ರಾವಿಡ್ ಉದ್ದೇಶದ ಬಗ್ಗೆ ಮೌನ ಮುರಿದ ಗ್ರೆಗ್ ಚಾಪೆಲ್!

ಆವತ್ತು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಡೆಲ್ಲಿ ಡೇರ್ ಡೆವಿಲ್ಸ್, ರಿಷಭ್ ಪಂತ್ 38, ವಿಜಯ್ ಶಂಕರ್ 36, ಪಟೇಲ್ 36 ರನ್‌ನೊಂದಿಗೆ 162 ರನ್ ಗಳಿಸಿದ್ದರೆ, ಸಿಎಸ್‌ಕೆ ಅಂಬಾಟಿ ರಾಯುಡು 50 ರನ್‌ನೊಂದಿಗೆ 128 ರನ್ ಗಳಿಸಿ 34 ರನ್‌ನಿಂದ ಸೋತಿತ್ತು. ಅಂದ್ಹಾಗೆ ಹರ್ಷಲ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, May 21, 2021, 19:39 [IST]
Other articles published on May 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X