ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಸಿಕ್ಸ್ ಸಿಕ್ಸ್ ಚಚ್ಚಿದ್ದು ಇದೇ ದಿನ: ವಿಡಿಯೋ

On this day: Yuvraj Singh smashed 6 sixes in an over in 2017 T20 World Cup

ನವದೆಹಲಿ: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್‌ ಚಚ್ಚಿರುವ ಸಿಕ್ಸ್ ಸಿಕ್ಸ್ ವಿಶ್ವ ದಾಖಲೆ ಯಾವತ್ತಿಗೂ ಅಜರಾಮರ. ಕ್ರಿಕೆಟ್‌ ಪ್ರೇಮಿಗಳು ಎಲ್ಲರೂ ಯಾವತ್ತಿಗೂ ನೆನಪಿಟ್ಟುಕೊಳ್ಳುವ ರೋಮಾಂಚಕಾರಿ ಕ್ಷಣವದು. ಆ ರೋಚಕ ಘಟನೆ ನಡೆದು ಇವತ್ತಿಗೆ ಅಂದರೆ ಸೆಪ್ಟೆಂಬರ್‌ 19ಕ್ಕೆ 14 ವರ್ಷಗಳಾಗುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಬಹುತೇಕ ಮಂದಿ ಈ ವಿಡಿಯೋ ನೋಡಿರುತ್ತಾರೆ, ಪಂದ್ಯದ ಬಗ್ಗೆ ಕೇಳಿರುತ್ತಾರೆ. ಆದರೆ ಈ ಪಂದ್ಯದ ಬಗ್ಗೆ ಕೇಳುವಾಗ, ವಿಡಿಯೋ ನೋಡುವಾಗ ಪ್ರತೀಸಾರಿಯೂ ಖುಷಿಯಾಗುತ್ತದೆ.

ನಾಳೆಯೇ ಪಾಕಿಸ್ತಾನಕ್ಕೆ ತೆರಳುತ್ತೇನೆ ಎಂದು ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ ಕ್ರಿಸ್ ಗೇಲ್ನಾಳೆಯೇ ಪಾಕಿಸ್ತಾನಕ್ಕೆ ತೆರಳುತ್ತೇನೆ ಎಂದು ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ ಕ್ರಿಸ್ ಗೇಲ್

ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಗಾಗಿ ತೆರಳಿದ್ದ ಭಾರತ, ಸೆಪ್ಟೆಂಬರ್‌ 19ರಂದು ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ನಡೆದ್ದ ಟಿ20 ವಿಶ್ವಕಪ್‌ ಟೂರ್ನಿಯ 21ನೇ ಪಂದ್ಯಕ್ಕಾಗಿ ಇಂಗ್ಲೆಂಡ್ ವಿರುದ್ಧ ಮೈದಾನಕ್ಕಿಳಿದಿತ್ತು. ಈ ವೇಳೆ ಭಾರತದ ಆಲ್ ರೌಂಡರ್ ಯುವರಾಜ್ ಸಿಂಗ್‌ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿ ಟಿ20ಐ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು.

ಕೆಣಕ್ಕಿದ್ದು ಫ್ಲಿಂಟಾಫ್, ಬ್ರಾಡ್ ಬಲಿ!

ಕೆಣಕ್ಕಿದ್ದು ಫ್ಲಿಂಟಾಫ್, ಬ್ರಾಡ್ ಬಲಿ!

ಭಾರತದ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಆಟಗಾರ ಆ್ಯಂಡ್ರ್ಯೂ ಫ್ಲಿಂಟಾಫ್ ಯಾವುದೋ ಕಾರಣಕ್ಕೆ ಸ್ಟ್ರೈಕ್‌ನಲ್ಲಿದ್ದ ಯುವರಾಜ್ ಸಿಂಗ್ ಅವರನ್ನು ಕೆಣಕಿದ್ದರು. ಆಗ ರೊಚ್ಚಿಗೆದ್ದ ಯುವರಾಜ್ ಮುಂದಿನ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಪ್ರತೀ ಎಸೆತಕ್ಕೂ ಸಿಕ್ಸ್ ಬಾರಿಸಿದ್ದರು. ಆವತ್ತು ಯುವಿ ಕೋಪಕ್ಕೆ ಬ್ರಾಡ್ ಮುಖಭಂಗ ಅನುಭವಿಸುವಂತಾಗಿತ್ತು. ಅಂದಿನ ಪಂದ್ಯದಲ್ಲಿ ಯುವರಾಜ್ ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗದ ಅರ್ಧ ಶತಕ ದಾಖಲೆ ನಿರ್ಮಿಸಿದ್ದರು. ಕೇವಲ 12 ಎಸೆತಗಳಲ್ಲಿ ಯುವಿ 50 ರನ್ ಪೂರ್ಣಗೊಳಿಸಿದ್ದರು.
ಪಂದ್ಯದ ವಿವರ: ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ಗೌತಮ್ ಗಂಭೀರ್ 58 (41 ಎಸೆತ), ವೀರೇಂದ್ರ ಸೆಹ್ವಾಗ್ 68 (52), ಯುವರಾಜ್ ಸಿಂಗ್ 58 (16) ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 2018 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಡ್ಯಾರೆನ್ ಮ್ಯಾಡಿ 29, ವಿಕ್ರಮ್ ಸೋಲಂಕಿ 43, ಕೆವಿನ್ ಪೀಟರ್ಸನ್ 39, ಪೌಲ್ ಕಾಲಿಂಗ್‌ವುಡ್ 28, ಓವೈಸ್ ಶಾ 21, ಲ್ಯೂಕ್ ರೈಟ್ 16 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 200 ರನ್ ಬಾರಿಸಿ 18 ರನ್‌ನಿಂದ ಸೋತಿತ್ತು. ಆ ಟೂರ್ನಿಯಲ್ಲಿ ಭಾರತ ತಂಡ ಫೈನಲ್‌ನಲ್ಲಿ ಪಾಕಿಸ್ತಾನ ಸೋಲಿಸಿ ಚೊಚ್ಚಲ ಟಿ20 ವಿಶ್ವಕಪ್‌ ಟ್ರೋಫಿಗೆ ಮುತ್ತಿಕ್ಕಿತ್ತು.

ಸಿಕ್ಸ್ ಸಿಕ್ಸ್ ಬಳಿಕ ಏನಾಯಿತು?

ಸಿಕ್ಸ್ ಸಿಕ್ಸ್ ಬಾರಿಸಿದ ಮೇಲೆ ಏನಾಯಿತು ಅನ್ನೋದನ್ನು ಯುವಿ ಹೇಳಿಕೊಂಡಿದ್ದಾರೆ. ಸತತ ಆರು ಸಿಕ್ಸ್‌ ಬಾರಿಸಿದ್ದ ಪಂದ್ಯದ ಬಳಿಕ ಸ್ಟುವರ್ಟ್ ತಂದೆ ಕ್ರಿಸ್ ಬ್ರಾಡ್ ಅವರು ಸಿಂಗ್ ಜೊತೆ ಮಾತನಾಡಿದ್ದರಂತೆ. 'ಮ್ಯಾಚ್ ರೆಫರೀ ಆಗಿದ್ದ ಸ್ಟುವರ್ಟ್ ತಂದೆ ಕ್ರಿಸ್ ಬ್ರಾಡ್ ಮರು ದಿನ ನನ್ನ ಬಳಿ ಬಂದು 'ನೀನು ನನ್ನ ಮಗನ ವೃತ್ತಿ ಬದುಕನ್ನು ಬಾಗಶಃ ಮುಗಿಸಿದ್ದೀಯ. ಆದ್ದರಿಂದ ನೀನು ಅವನಿಗಾಗಿ ಈ ಟಿ ಶರ್ಟ್‌ಗೆ ಸಹಿ ಹಾಕಬೇಕು' ಎಂದಿದ್ದರು ಎಂದು ಯುವಿ ಆಗಿನ ಘಟನೆ ವಿವರಿಸಿದ್ದರು. ಘಟನೆ ಬಗ್ಗೆ ವಿವರಿಸಿ ಬಿಬಿಸಿ ಜೊತೆ ಮಾತನಾಡಿದ ಯುವರಾಜ್ ಸಿಂಗ್, 'ಇಂಗ್ಲೆಂಡ್ ವಿರುದ್ಧವೇ ಸಿಕ್ಸ್ ಸಿಕ್ಸ್ ಬಾರಿಸಿದ್ದಕ್ಕೆ ಖುಷಿಯಿದೆ. ಯಾಕೆಂದರೆ ಅದಕ್ಕೂ ಕೆಲ ವಾರಗಳ ಹಿಂದೆ ಏಕದಿನ ಪಂದ್ಯದಲ್ಲಿ ನನ್ನ ಓವರ್‌ನಲ್ಲಿ ಡಿಮಿಟ್ರಿ ಮಸ್ಕರೇನ್ಹಾಸ್ ಐದು ಸಿಕ್ಸ್ ಬಾರಿಸಿದ್ದರು,' ಎಂದಿದ್ದಾರೆ.

ಕೂಲ್ ಕ್ಯಾಪ್ಟನ್ ರಿವ್ಯೂ ತಗೊಂಡ್ರೆ ಮುಗೀತು ! | Oneindia Kannada
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸ್ ಸಿಕ್ಸ್ ದಾಖಲೆಗಳು

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸ್ ಸಿಕ್ಸ್ ದಾಖಲೆಗಳು

ಕಳೆದ ಮಾರ್ಚ್‌ನಲ್ಲಷ್ಟೇ ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡುವ ಕೀರನ್ ಪೊಲಾರ್ಡ್ ಸಿಕ್ಸ್ ಸಿಕ್ಸ್ ಬಾರಿಸಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆ ನಿರ್ಮಿಸಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪೊಲಾರ್ಡ್ ಸಿಕ್ಸ್ ಸಿಕ್ಸ್ ಬಾರಿಸಿದ್ದರು. ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಮತ್ತು ಭಾರತದ ಯುವರಾಜ್ ಸಿಂಗ್ ಈ ದಾಖಲೆ ನಿರ್ಮಿಸಿದ್ದರು. ಕೆಚ್ಚೆದೆಯ ಮಹಾರಾಜ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್‌ ವೇಳೆ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ್ದು ಸಾರ್ವಕಾಲಿಕ ಶ್ರೇಷ್ಠ ಸ್ಫೋಟಕ ಬ್ಯಾಟಿಂಗ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

Story first published: Sunday, September 19, 2021, 17:53 [IST]
Other articles published on Sep 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X