ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿದೇಶದಲ್ಲಿ ಇಂಗ್ಲೆಂಡ್‌ನ ಅತ್ಯಂತ ಶ್ರೇಷ್ಠ ಗೆಲುವು: ಪಾಕ್ ವಿರುದ್ಧದ ಗೆಲುವಿನ ಬಳಿಕ ಸ್ಟೋಕ್ಸ್ ಮಾತು

PAK vs ENG: Ben Stokes reaction after win against Pakistan said This is one of Englands greatest away win

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಕ್ರಿಕೆಟ್ ಪ್ರೇಮಿಗಳೆಲ್ಲರೂ ತಿರುಗಿ ನೋಡುವಂತೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚಿದ್ದ ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದೆ. ಅಂತಿಮ ದಿನದಾಟದಲ್ಲಿ ಪಾಕಿಸ್ತಾನ ತಂಡ ಕೂಡ ಗೆಲುವಿನ ಅವಕಾಶವನ್ನು ಸೃಷ್ಟಿಸಿಕೊಂಡಿತ್ತಾದರೂ ಅಂತಿಮ ಹಂತದಲಕ್ಲಿ ಎಡವಿದ ಕಾರಣ ಸೋಲಿಗೆ ಶರಣಾಗಿದೆ. ಈ ಅಮೋಘ ಗೆಲುವಿನ ಬಳಿಕ ಮಾತನಾಡಿರುವ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸಂತಸವನ್ನು ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಈ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್ ಸದ್ಯ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಗೆದ್ದ ನಂತರ ಮಾತನಾಡಿರುವ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಈ ಗೆಲುವನ್ನು ವಿದೇಶಿ ನೆಲದಲ್ಲಿ ಇಂಗ್ಲೆಂಡ್ ಸಾಧಿಸಿದ ಅತ್ಯುತ್ತಮ ಗೆಲುವುಗಳಲ್ಲಿ ಇದೂ ಒಂದು ಎಂದು ಬಣ್ಣಿಸಿದ್ದಾರೆ.

 PAK vs ENG: ಪಂದ್ಯದ ವೇಳೆ ಗಾಯಗೊಂಡು ಟೆಸ್ಟ್ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ PAK vs ENG: ಪಂದ್ಯದ ವೇಳೆ ಗಾಯಗೊಂಡು ಟೆಸ್ಟ್ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್

"ಈ ರೀತಿಯ ಪಿಚ್‌ಗಳು ಬ್ಯಾಟರ್‌ಗಳು ಆಕ್ರಮಣಕಾರಿಯಾಗಿ ಆಡಲು ಪ್ರೇರೇಪಿಸುತ್ತದೆ. ಆದರೆ ಅದೃಷ್ಟವಶಾತ್ ಇಂದು ಚೆಂಡು ಉತ್ತಮವಾಗಿ ರಿವರ್ಸ್ ಸ್ವಿಂಗ್ ಆಗಲು ಆರಂಭಿಸಿತ್ತು. ಜೇಮ್ಸ್ ಆಂಡರ್ಸನ್ ಹಾಗೂ ಒಲ್ಲೀ ರಾಬಿನ್ಸನ್ ಅದ್ಭುತ ಪ್ರದರ್ಶನ ನೀಡಿದರು. ಬಹುಶಃ ಕೇವಲ 8 ನಿಮಿಷಗಳ ಅಂತರದಲ್ಲಿ ನಾವು ಪಂದ್ಯವನ್ನು ಹಿಡಿತಕ್ಕೆ ಪಡೆದುಕೊಂಡೆವು. ಬಹುಶಃ ಇದು ವಿದೇಶಿ ನೆಲದಲ್ಲಿ ಇಂಗ್ಲೆಂಡ್‌ನ ಶ್ರೇಷ್ಠ ಗೆಲುವುಗಳಲ್ಲಿ ಒಂದು" ಎಂದು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬಣ್ಣಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ನಾಯಕ ಇಂಗ್ಲೆಂಡ್ ತಂಡ ಅತ್ಯಂತ ಹುರುಪಿನ ತಂಡವಾಗಿದೆ ಎಂದಿದ್ದು ಎದುರಾಳಿ ತಂಡಕ್ಕಿಂತ ತಮ್ಮ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ. "ನಾವು ಎದುರಾಳಿ ತಂಡಕ್ಕಿಂತ ಹೆಚ್ಚಿನದಾಗಿಉ ನಮ್ಮ ಮೇಲೆ ಗಮನ ಹರಿಸಲು ನಿರ್ಧಾರ ಮಾಡಿದ್ದೇವೆ. ನಾವು ಅತ್ಯಂತ ಉತ್ಸಾಹದ ತಂಡ ಎಂಬುದು ನಮಗೆ ಅರಿವಿದೆ. ಇದು ಬ್ಯಾಟಿಂಗ್‌ಗೆ ಉತ್ತಮವಾದ ಪಿಚ್ ಆಗಿದ್ದ ಕಾರಣ ಇದು ನಮ್ಮ ಬ್ಯಾಟಿಂಗ್ ವಿಭಾಗಕ್ಕೆ ದೊರೆತ ದೊಡ್ಡ ಅವಕಾಶವೆಂದು ನಿರ್ಧರಿಸಿದೆವು" ಎಂದಿದ್ದಾರೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್.

ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲಿಗೆ ಇಂಗ್ಲೆಂಡ್ ಸ್ಪೋಟಕ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ಬಿಗಿ ಹಿಡಿತವನ್ನು ಸಾಧಿಸಿತ್ತು. ಆದರೆ ಆತಿಥೇಯ ಪಾಕಿಸ್ತಾನ ಈ ಪಂದ್ಯದಲ್ಲಿ ಪಟ್ಟು ಸಡಿಲಿಸದೆ ಅದ್ಭುತ ಪೈಪೋಟಿ ನೀಡಿತ್ತು. ಆದರೆ ಅಂತಿಮ ಹಂತದಲ್ಲಿ ಎಡವಿದ ಪಾಕಿಸ್ತಾನ ಸೋಲಿಗೆ ಶರಣಾಗಿದೆ.

IND Vs BAN : ಇದಕ್ಕೆ ಅವರೇ ಉತ್ತರ ನೀಡಬೇಕು! ಭಾರತ ತಂಡದ ಫೀಲ್ಡಿಂಗ್ ಬಗ್ಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆIND Vs BAN : ಇದಕ್ಕೆ ಅವರೇ ಉತ್ತರ ನೀಡಬೇಕು! ಭಾರತ ತಂಡದ ಫೀಲ್ಡಿಂಗ್ ಬಗ್ಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ

ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಪೈಪೋಟಿ ನೀಡಿತ್ತು. ಅಂತಿಮ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ 338 ರನ್‌ಗಳಖ ಗುರಿಯನ್ನು ನಿಗದಿಪಡಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಪಾಕಿಸ್ತಾನ ಒಂದು ಹಂತದಲ್ಲಿ ಗೆಲುವಿನ ವಿಶ್ವಾಸವನ್ನು ಮೂಡಿಸಿತ್ತು. ಆದರೆ ಅಂತಿಮ ದಿನದಾಟದ ಮೂರನೇ ಸೆಶನ್‌ನ ಅಂತಿಮ ಹಂತದಲ್ಲಿ ಪಾಕಿಸ್ತಾನ ತಂಡ ನಾಟಕೀಯ ಕುಸಿತಕ್ಕೆ ಒಳಗಾಯಿತು. ಇದರ ಪರಿಣಾಮವಾಗಿ ಪಾಕಿಸ್ತಾನ ತಂಡ ಈ ಪಂದ್ಯವನ್ನು ಇಂಗ್ಲೆಂಡ್‌ಗೆ ಒಪ್ಪಿಸಿದೆ. ಪ್ರವಾಸಿ ಇಂಗ್ಲೆಂಡ್ 74 ರನ್‌ಗಳ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ನಸೀಮ್ ಶಾ, ಮೊಹಮ್ಮದ್ ಅಲಿ, ಹಾರಿಸ್ ರೌಫ್, ಜಾಹಿದ್ ಮಹಮೂದ್
ಬೆಂಚ್: ಶಾನ್ ಮಸೂದ್, ಮೊಹಮ್ಮದ್ ನವಾಜ್, ಸರ್ಫರಾಜ್ ಅಹ್ಮದ್, ಮೊಹಮ್ಮದ್ ವಾಸಿಂ ಜೂನಿಯರ್, ನೌಮನ್ ಅಲಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್

ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್ (ವಿಕೆಟ್ ಕೀಪರ್), ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ಸ್ಟೋನ್, ವಿಲ್ ಜ್ಯಾಕ್ಸ್, ಜ್ಯಾಕ್ ಲೀಚ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಕೀಟನ್ ಜೆನ್ನಿಂಗ್ಸ್, ಬೆನ್ ಫೋಕ್ಸ್, ರೆಹಾನ್ ಅಹ್ಮದ್, ಜೇಮೀ ಓವರ್ಟನ್, ಮಾರ್ಕ್ ವುಡ್

Story first published: Monday, December 5, 2022, 19:16 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X