ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ vs ಇಂಗ್ಲೆಂಡ್: ಲಿವಿಂಗ್ಸ್ಟನ್ ಬದಲಿಗೆ ಮಾರ್ಕ್ ವುಡ್‌ಗೆ ಸ್ಥಾನ, ಫೋಕ್ಸ್‌ಗೆ ಇಲ್ಲ ಅವಕಾಶ

Paki vs Eng: Ben Stokes revealed Englands playing XI for Multan Test against Pakistan

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರದಿಂದ ಆರಂಭವಾಗಲಿದ್ದು ಎರಡು ತಂಡಗಳು ಕೂಡ ಈ ಪಂದ್ಯಕ್ಕೆ ಸಜ್ಜಾಗಿದೆ. ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ನೀಡಿದ ಸ್ಪೋಟಕ ಪ್ರದರ್ಶನವನ್ನು ಎರಡನೇ ಪಂದ್ಯದಲ್ಲಿಯೂ ಮುಂದುವರಿಸುವ ಉತ್ಸಾಹದಲ್ಲಿದ್ದರೆ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ಬೇಕಾದ ಸರ್ವ ಪ್ರಯತ್ನವನ್ನು ನಡೆಸಲಿದೆ ಪಾಕಿಸ್ತಾನ. ಈ ಸಂದರ್ಭದಲ್ಲಿ ಇಂಗ್ಲೆಂಡ್ ಆಡುವ ಬಳಗದ ಬಗ್ಗೆ ನಾಯಕ ಬೆನ್ ಸ್ಟೋಕ್ಸ್ ಮಾಹಿತಿ ಹಂಚಿಕೊಂಡಿದ್ದಾರೆ.

ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಆಡಿದ್ದ ಲಿಯಾಮ್ ಲಿವಿಂಗ್ಸ್ಟನ್ ಗಾಯಗೊಂಡಿರುವ ಕಾರಣದಿಂದಾಗಿ ಅಲಭ್ಯವಾಗಲಿದ್ದು ಆ ಸ್ಥಾನದಲ್ಲಿ ವೇಗದ ಬೌಲರ್ ಮಾರ್ಕ್ ವುಡ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಸ್ವತಃ ನಾಯಕ ಬೆನ್ ಸ್ಟೋಕ್ಸ್ ಬಹಿರಂಗಪಡಿಸಿದ್ದಾರೆ.

ಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ಮಾರ್ಕ್‌ ವುಡ್‌ಗೆ ಸ್ಥಾನ

ಮಾರ್ಕ್‌ ವುಡ್‌ಗೆ ಸ್ಥಾನ

ರಾವಲ್ಪಿಂಡಿಯಲ್ಲಿ ನಡದ ಮೊದಲ ಪಂದ್ಯದಲ್ಲಿ ಲಿವಿಂಗ್ಸ್ಟನ್ ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು. ಹೆಚ್ಚುವರಿ ಬ್ಯಾಟರ್‌ನನ್ನು ಕಣಕ್ಕಿಳಿಸುವ ಲೆಕ್ಕಾಚಾರದಿಂದಾಗಿ ಈ ಅವಕಾಶ ಲಿವಿಂಗ್ಸ್ಟನ್‌ಗೆ ದೊರೆತಿತ್ತು. ಆದರೆ ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಕಾರಣ ಅವರು ತವರಿಗೆ ವಾಪಾಸಾಗಿದ್ದಾರೆ. ಮಾರ್ಕ್ ವುಡ್ ಅವರ ಸ್ಥಾನದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಬೆನ್ ಫೋಕ್ಸ್‌ಗೆ ಇಲ್ಲ ಆಡುವ ಅವಕಾಶ

ಬೆನ್ ಫೋಕ್ಸ್‌ಗೆ ಇಲ್ಲ ಆಡುವ ಅವಕಾಶ

ಇನ್ನು ಇದೇ ಸಂದರ್ಭದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಎರಡನೇ ಪಂದ್ಯದಲ್ಲಿಯೂ ಒಲ್ಲೀ ಪೋಪ್ ಮುಂದುವರಿಯಲಿದ್ದಾರೆ ಎಂದು ಬೆನ್ ಸ್ಟೋಕ್ಸ್ ಖಚಿತಪಡಿಸಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ಬೆನ್ ಫೋಕ್ಸ್ ಮೊದಲ ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತವಾಗಿದ್ದರು. ಹಾಗಾಗಿ ಒಲ್ಲೀ ಪೋಪ್‌ಗೆ ಅವಕಾಶ ದೊರೆತಿತ್ತು. ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿರುವ ಒಲ್ಲೀ ಪೋಪ್ ಎರಡನೇ ಪಂದ್ಯಕ್ಕೂ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಮಾಹಿತಿ ಹಂಚಿಕೊಂಡ ಬೆನ್ ಸ್ಟೋಕ್ಸ್

ಮಾಹಿತಿ ಹಂಚಿಕೊಂಡ ಬೆನ್ ಸ್ಟೋಕ್ಸ್

ಮುಲ್ತಾನ್ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಬೆನ್ ಸ್ಟೋಕ್ಸ್ "ಫೋಕ್ಸ್ ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ನಾನು ಈಗಲೂ ಹೇಳುತ್ತೇನೆ. ಆದರೆ ಅವರನ್ನು ಆಡುವ ಬಳಗದಿಂದ ಹೊರಗಿಡುವುದು ಕ್ಷುಲ್ಲಕ ಎನಿಸುತ್ತದೆ. ಆದರೆ ಇಲ್ಲಿನ ಪರಿಸ್ಥಿತಿಗಳನ್ನು ಕೂಡ ಗಮನಿಸಬೇಕಾಗುತ್ತದೆ. ಪಾಕಿಸ್ತಾನಕ್ಕೆ ಬಂದು ಗೆಲುವು ಸಾಧಿಸುವುದು ಬಹಳ ಕಠಿಣ" ಎಂದಿದ್ದಾರೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್. ಇನ್ನು ಇದೇ ಸಂದರ್ಭದಲ್ಲಿ ಅವರು ಮಾರ್ಕ್ ವುಡ್ ಆಡುವ ಬಳಗಕ್ಕೆ ಸೇರಿಕೊಂಡಿರುವ ಕಾರಣ ಎದುರಾಳಿಯ 20 ವಿಕೆಟ್‌ಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್(ವಿಕೆಟ್ ಕೀಪರ), ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ವಿಲ್ ಜ್ಯಾಕ್ಸ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್.

Story first published: Thursday, December 8, 2022, 16:40 [IST]
Other articles published on Dec 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X