ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಲಿಷ್ಠ ತಂಡಗಳನ್ನು ಪಾಕಿಸ್ತಾನಕ್ಕೆ ಕಳುಹಿಸಬೇಡಿ: ಎದುರಾಳಿ ತಂಡಗಳಿಗೆ ಮಾಜಿ ಕ್ರಿಕೆಟಿಗ ಮನವಿ

Pak Vs Eng Test: Danish Kaneria Slam Pakistan Team, And He Requests Other Countries To Send B Team

ಪಾಕಿಸ್ತಾನ ತಂಡ ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಕೂಡ ಸೋಲನುಭವಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ವೈಟ್‌ವಾಶ್ ಮಾಡಿದೆ. ಪಾಕಿಸ್ತಾನದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕನೇರಿಯಾ, ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಪ್ರದರ್ಶನಗಳನ್ನು ಗಮನಿಸಿದರೆ ಕ್ರಿಕೆಟ್‌ ಆಡಲು ಇಲ್ಲಿಗೆ ಆಗಮಿಸುವ ರಾಷ್ಟ್ರಗಳು ತಮ್ಮ ಪ್ರಮುಖ ತಂಡಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧದ ಸರಣಿಗಾಗಿ ಇತರೆ ದೇಶಗಳು, ತಮ್ಮ ಸಿ ತಂಡಗಳನ್ನು ಪ್ರವಾಸಕ್ಕೆ ಕಳುಹಿಸಿ ಎಂದು ವಿವಿಧ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

ಈ ತಂಡ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ: ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ಈ ತಂಡ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ: ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್

"ತಮ್ಮ ಪ್ರಮುಖ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಬೇಡಿ ಎಂದು ಇತರ ದೇಶಗಳಿಗೆ ನನ್ನ ವಿನಂತಿ. ಇಲ್ಲದಿದ್ದರೆ ನಾವು ಮತ್ತೆ ಮತ್ತೆ ಇಂತಹ ಮುಜುಗರವನ್ನು ಎದುರಿಸಬೇಕಾಗುತ್ತದೆ" ಎಂದು ಕನೇರಿಯಾ ಹೇಳಿದ್ದಾರೆ.

ಸಿ ಟೀಂ ಪಾಕಿಸ್ತಾನಕ್ಕೆ ಕಳುಹಿಸಿ

ಸಿ ಟೀಂ ಪಾಕಿಸ್ತಾನಕ್ಕೆ ಕಳುಹಿಸಿ

"ಪಾಕಿಸ್ತಾನದ ಸರಣಿಗೆ ನಿಮ್ಮ ಸಿ ತಂಡವನ್ನು ಕಳುಹಿಸಿ, ಆಗಲಾದರೂ ನಾವು ಏನಾದರೂ ಮಾಡಿ ಪಂದ್ಯವನ್ನು ಗೆಲ್ಲಬಹುದು. ಇನ್ನು ಮುಂದೆ ನಮಗೆ ಗೆಲ್ಲುವ ಸಾಮರ್ಥ್ಯವಿಲ್ಲ. ಪಾಕಿಸ್ತಾನ ತಂಡದಲ್ಲಿ ಉತ್ತಮ ಗುಣಮಟ್ಟದ ಆಟಗಾರರು ಅಥವಾ ಸೂಪರ್‌ಸ್ಟಾರ್‌ಗಳಿಲ್ಲ" ಎಂದು ಕನೇರಿಯಾ ಕಿಡಿ ಕಾರಿದ್ದಾರೆ.

ಪಾಕ್ ತಂಡದ ಕೆಲವು ಆಟಗಾರರು ತಂಡಕ್ಕಾಗಿ ಆಡಲಿಲ್ಲ, ಬದಲಾಗಿ ತಮ್ಮ ವೈಯಕ್ತಿಕ ದಾಖಲೆಗಳನ್ನು ಉತ್ತಮಪಡಿಸಿಕೊಳ್ಳಲು ಅವರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎಂದು ಕನೇರಿಯಾ ಪಾಕಿಸ್ತಾನಿ ಆಟಗಾರರ ವಿಧಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ind vs Ban 2nd Test: ಅಭ್ಯಾಸ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ! ರಾಹುಲ್, ಪಂತ್‌ ಕಠಿಣ ಅಭ್ಯಾಸ

1000 ರನ್ ಗಳಿಸಿದರೆ ಏನು ಲಾಭ?

1000 ರನ್ ಗಳಿಸಿದರೆ ಏನು ಲಾಭ?

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಈ ವರ್ಷ 1000 ಕ್ಕೂ ಹೆಚ್ಚಿನ ರನ್ ಗಳಿಸಿದರೂ ಅದರಿಂದ ಪಾಕಿಸ್ತಾನ ತಂಡಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಕನೇರಿಯಾ ಹೇಳಿದ್ದಾರೆ. ನಾಯಕ ಬಾಬರ್ ಅಜಮ್ ಈ ವರ್ಷ 1000 ಕ್ಕೂ ಹೆಚ್ಚು ರನ್ ಗಳಿಸಿದ್ದರೂ, ತಂಡವು ಪ್ರಮುಖ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗದ ಕಾರಣ ಹೆಚ್ಚಿನ ಪ್ರಯೋಜನವಾಗಲಿಲ್ಲ ಎಂದು ಕನೇರಿಯಾ ಹೇಳಿದರು.

ಈ ಪಾಕಿಸ್ತಾನ ತಂಡ ಕೆಟ್ಟದ್ದಾಗಿದೆ, ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್‌ನಲ್ಲಿ ಆಡುತ್ತಿರುವ ಸಂದರ್ಶಕ ತಂಡದಂತೆ ಕಾಣುತ್ತಿದೆ. ತಂಡದಲ್ಲಿ ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳಲು ಆಟಗಾರರು ತಮ್ಮದೇ ಆದ ರನ್ ಗಳಿಸಿದರು. ಬಾಬರ್ ಅಜಮ್ 1000 ರನ್ ಗಳಿಸಿದರು. ಅದರಲ್ಲಿ ಉಪ್ಪಿನಕಾಯಿ ತಯಾರಿಸಿ ಅದನ್ನು ತಮ್ಮ ಕೋಣೆಯಲ್ಲಿ ನೇತು ಹಾಕಬೇಕು ಎಂದಿರುವ ಕನೇರಿಯಾ, ಇಂಗ್ಲೆಂಡ್ ಎಲ್ಲಾ ವಿಭಾಗಗಳಲ್ಲಿ ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಸಾಧಿಸಿತು ಎಂದು ಹೇಳಿದ್ದಾರೆ.

ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಇಂಗ್ಲೆಂಡ್

ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಇಂಗ್ಲೆಂಡ್

22 ವರ್ಷಗಳ ನಂತರ ಪಾಕಿಸ್ತಾನ ನೆಲದಲ್ಲಿ ಸರಣಿ ಗೆಲ್ಲುವ ಮೂಲಕ ಇಂಗ್ಲೆಂಡ್ ಇತಿಹಾಸ ನಿರ್ಮಿಸಿದೆ. ಪಾಕ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯವನ್ನು 74 ರನ್‌ಗಳಿಂದ ಗೆದ್ದುಕೊಂಡಿತು. ಎರಡನೇ ಟೆಸ್ಟ್‌ನಲ್ಲಿ 26 ರನ್‌ಗಳ ರೋಚಕ ಜಯ ಸಾಧಿಸಿತು.

ಮೂರನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳ ಬೃಹತ್ ಜಯ ಸಾಧಿಸುವ ಮೂಲಕ ಸರಣಿಯನ್ನು ವೈಟ್ ವಾಶ್ ಮಾಡಿತು. ಮೂರು ಟೆಸ್ಟ್ ಪಂದ್ಯಗಳಲ್ಲಿ ಸೋಲುವ ಮೂಲಕ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಸ್ಪರ್ಧೆಯಿಂದ ಹೊರಬಿದ್ದಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿತ ಕಂಡಿದೆ.

Story first published: Tuesday, December 20, 2022, 21:49 [IST]
Other articles published on Dec 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X