'ಇಂಡಿಪೆಂಡೆನ್ಸ್ ಕಪ್' ಮೊದಲ ಪಂದ್ಯದಲ್ಲಿ ಪಾಕ್ ತಂಡಕ್ಕೆ ಜಯ

Posted By:

ಲಾಹೋರ್, ಸೆಪ್ಟೆಂಬರ್ 13: ಇಂಡಿಪೆಂಡೆನ್ಸ್ ಕಪ್ ಹೊನಲು ಬೆಳಕಿನ ಟಿ20 ಪಂದ್ಯಗಳ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ, ವಿಶ್ವ ಇಲೆವೆನ್ ತಂಡದ ವಿರುದ್ಧ 20 ರನ್ ಗಳ ಜಯ ಗಳಿಸಿದೆ.

ಮಂಗಳವಾರ ನಡೆದ ಸರಣಿಯ ಪ್ರಥಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು.

ಈ ಮೊತ್ತವನ್ನು ಬೆನ್ನಟ್ಟಿದ ವಿಶ್ವ ಇಲೆವೆನ್ ತಂಡ, ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 177 ರನ್ ಮಾತ್ರ ಗಳಿಸಲು ಶಕ್ತವಾಯಿತು.

ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ವಿಶ್ವ ಇಲೆವೆನ್ ತಂಡದ ನಾಯಕ ಪಫ್ ಡು ಪ್ಲೆಸಿಸ್ ಅವರು, ಮೊದಲು ಆತಿಥೇಯರನ್ನು ಬ್ಯಾಟಿಂಗ್ ಗೆ ಇಳಿಸುವ ನಿರ್ಧಾರ ಕೈಗೊಂಡರು.

197 ರನ್ ಮೊತ್ತ

197 ರನ್ ಮೊತ್ತ

ಅದರಂತೆ, ಬ್ಯಾಟಿಂಗೆ ಇಳಿದ ಪಾಕಿಸ್ತಾನವು ಮಧ್ಯಮ ಕ್ರಮಾಂಕದ ಬಾಬರ್ ಆಜಂ (86 ರನ್, 52 ಎಸೆತ, 10 ಬೌಂಡರಿ, 2 ಸಿಕ್ಸರ್), ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ (39 ರನ್, 34 ಎಸೆತ, 3 ಬೌಂಡರಿ) ಹಾಗೂ ಶೋಯೆಬ್ ಮಲಿಕ್ (38 ರನ್, 20 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಉಪಯುಕ್ತ ಬ್ಯಾಟಿಂಗ್ ಸಹಾಯದಿಂದ 197 ರನ್ ಮೊತ್ತ ಪೇರಿಸಿತು.

ಪ್ಲೆಸಿಸ್, ಸಾಮಿ ಪರವಾಗಿಲ್ಲ

ಪ್ಲೆಸಿಸ್, ಸಾಮಿ ಪರವಾಗಿಲ್ಲ

ಆನಂತರ ಬ್ಯಾಟಿಂಗ್ ಗೆ ಇಳಿದ ವಿಶ್ವ ಇಲೆವೆನ್ ತಂಡದ ಪರವಾಗಿ ಯಾರೂ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಆರಂಭಿಕ ಹಾಷೀಂ ಆಮ್ಲಾ, ನಾಯಕ ಪಫ್ ಡು ಪ್ಲೆಸಿಸ್ (ಇಬ್ಬರೂ ದಕ್ಷಿಣ ಆಫ್ರಿಕಾ ಆಟಗಾರರು), ಟಿಮ್ ಪೈನೆ (ಆಸ್ಟ್ರೇಲಿಯಾ) ಹಾಗೂ ಕೆಳ ಕ್ರಮಾಂಕದಲ್ಲಿ ಡರೇನ್ ಸಾಮಿ (ವೆಸ್ಟ್ ಇಂಡೀಸ್) ಕೊಂಚ ಆರ್ಭಟಿಸಿದರೂ, ದೀರ್ಘಕಾಲ ಕ್ರೀಸ್ ನಲ್ಲಿ ನಿಂತು ಇನಿಂಗ್ಸ್ ಕಟ್ಟಿಕೊಡಲಿಲ್ಲ.

ಮುಂದಿನ ಪಂದ್ಯ 13ರಂದು

ಮುಂದಿನ ಪಂದ್ಯ 13ರಂದು

ಅಂತಿಮವಾಗಿ, ವಿಶ್ವ ಇಲೆವೆನ್ ತಂಡ 20 ರನ್ ಗಳ ಸೋಲು ಕಾಣಬೇಕಾಯಿತು. ಸರಣಿ ಮುಂದಿನ ಪಂದ್ಯ, ಸೆ. 13ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಚುಟುಕು ಸ್ಕೋರ್

ಚುಟುಕು ಸ್ಕೋರ್

ಪಾಕಿಸ್ತಾನ 20 ಓವರ್ ಗಳಲ್ಲಿ 5 ವಿಕೆಟ್ ಗೆ 197 (ಬಾಬರ್ ಆಜಂ 86, ಅಹ್ಮದ್ ಶೆಹಜಾದ್ 39; ತಿಸರಾ ಪೆರೇರಾ 51ಕ್ಕೆ 2, ಮೊರ್ನೆ ಮೊರ್ಕೆಲ್ 32ಕ್ಕೆ 1); ವಿಶ್ವ ಇಲೆವೆನ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 177 (ಪಫ್ ಡು ಪ್ಲೆಸಿಸ್ 29, ಡರೇನ್ ಸಾಮಿ 29; ಸೊಹೈಲ್ ಖಾನ್ 28ಕ್ಕೆ 2, ಶಾಬಾದ್ ಖಾನ್ 33ಕ್ಕೆ 2).
ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 20 ರನ್ ಗಳ ಗೆಲುವು.
ಪಂದ್ಯಶ್ರೇಷ್ಠ: ಬಾಬರ್ ಆಜಂ

Story first published: Wednesday, September 13, 2017, 1:27 [IST]
Other articles published on Sep 13, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ