ಜೂನ್ 28ಕ್ಕೆ ಇಂಗ್ಲೆಂಡ್‌ಗೆ ಬಂದಿಳಿಯಲಿದೆ ಪಾಕಿಸ್ತಾನ ಕ್ರಿಕೆಟ್ ತಂಡ

ಇಸ್ಲಮಾಬಾದ್, ಜೂನ್ 27: ಪ್ರವಾಸ ಸರಣಿಯ ನಿಮಿತ್ತ ಪಾಕಿಸ್ತಾನ ಕ್ರಿಕೆಟ್ ತಂಡ ಜೂನ್ 28ರ ಭಾನುವಾರ ಇಂಗ್ಲೆಂಡ್‌ಗೆ ಬಂದಿಳಿಯಲಿದೆ. ಇಂಗ್ಲೆಂಡ್‌ಗೆ ಹೋಗುವ ಪಾಕ್ ತಂಡ ಕೊರೊನಾವೈರಸ್ ಸೋಂಕಿತ 10 ಮಂದಿ ಆಟಗಾರರನ್ನು ಬಿಟ್ಟು ಹೋಗಲಿದೆ. ಪಾಕ್ ತಂಡ ಇಂಗ್ಲೆಂಡ್‌ಗೆ ಬರುತ್ತಿರುವುದನ್ನು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ತಂಡ ಖಾತರಿಪಡಿಸಿದೆ.
ಇಂಗ್ಲೆಂಡ್ vs ಪಾಕಿಸ್ತಾನ ಪ್ರವಾಸವು 3 ಟೆಸ್ಟ್ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳನ್ನು ಒಳಗೊಂಡಿತ್ತು. ಅಸಲಿಗೆ ಈ ಸರಣಿ ಜುಲೈ 30ರಿಂದ ಆರಂಭಗೊಳ್ಳಬೇಕಿತ್ತು. ಆದರೆ ಕೊರೊನಾವೈರಸ್ ಕಾರಣ ಇಂಗ್ಲೆಂಡ್‌ನಲ್ಲಿ ನಡೆಯಲಿದ್ದ ಎಲ್ಲಾ ಪ್ರವಾಸ ಸರಣಿಗಳನ್ನು ಮುಂದೂಡಲಾಗಿದೆ.
ಸೋಂಕಿಗೀಡಾಗಿರುವ ಪಾಕ್ ತಂಡದ ಆಲ್ ರೌಂಡರ್ ಶದಾಬ್ ಖಾನ್, ಅನ್ ಕ್ಯಾಪ್ಡ್ ಆಟಗಾರ ಹೈದರ್ ಅಲಿ, ವೇಗಿ ಹ್ಯಾರಿಸ್ ರೌಫ್, ಕಾಶಿಫ್ ಭಟ್ಟಿ, ಮೊಹಮ್ಮದ್ ಹಸ್ನೈನ್, ಫಖರ್ ಜಮಾನ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹಫೀಜ್, ವಹಾಬ್ ರಿಯಾಜ್, ಮತ್ತು ಇಮ್ರಾನ್ ಖಾನ್ ಸದ್ಯ ಇಂಗ್ಲೆಂಡ್‌ಗೆ ಹೋಗುತ್ತಿಲ್ಲ.
ಕೊರೊನಾವೈರಸ್ ಪಾಸಿಟಿವ್ ಬಂದಿರುವ ಈ ಆಟಗಾರರು ಪಾಕಿಸ್ತಾನದಲ್ಲಿನ ತಮ್ಮ ಮನೆಗಳಲ್ಲಿ ಐಸೊಲೇಶನ್‌ನಲ್ಲಿರಲಿದ್ದಾರೆ. ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಬಳಿಕ ಇಂಗ್ಲೆಂಡ್‌ನಗೆ ತೆರಳಿ ಪಾಕ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಸೋಂಕಿತರನ್ನು ಹೊರತುಪಡಿಸಿ ಉಳಿದ ಆಟಗಾರರು ಭಾನುವಾರ ಇಂಗ್ಲೆಂಡ್‌ಗೆ ಪ್ರವಾಸ ಹೊರಡುವ ಮುನ್ನ ಮತ್ತೆ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ. ಇಂಗ್ಲೆಂಡ್ ತಲುಪಿದ ಬಳಿಕ ವೋರ್ಸೆಸ್ಟರ್‌ನಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಲಿದ್ದಾರೆ. ಆ ಬಳಿಕ ಜುಲೈ 13ರಂದು ಆಟಗಾರರನ್ನು ಡರ್ಬಿಶೈರ್‌ನಲ್ಲಿರುವ ಇಂಕೋರಾ ಕೌಂಟಿ ಮೈದಾನಕ್ಕೆ ರವಾನಿಸಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications