ಅಫ್ಘಾನಿಸ್ತಾನ ಮಣಿಸಿದ ಪಾಕಿಸ್ತಾನಕ್ಕೆ ಸೆಮಿಫೈನಲ್‌ನಲ್ಲಿ ಭಾರತ ಎದುರಾಳಿ!

Under 19 worldcup : Pakistan to face India in world cup Semis | IND | PAK | Worldcup

ಬೆನೊನಿ, ಫೆಬ್ರವರಿ 1: ಉತ್ತಮ ಬೌಲಿಂಗ್ ಮತ್ತು ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ಪಾಕಿಸ್ತಾನ ಅಂಡರ್ 19 ತಂಡ, ಬೆನೊನಿಯಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್‌ ಜಯ ಗಳಿಸಿದೆ. ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಪಾಕ್‌, ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ.

ಕಿವೀಸ್ ಗೆ ಸೂಪರ್ ಓವರ್ ನಲ್ಲಿ ಮತ್ತೆ ಸೋಲು: ಕೊಹ್ಲಿಗೆ ಕನಿಕರ ಅನ್ನೋದೇ ಇಲ್ಲ!ಕಿವೀಸ್ ಗೆ ಸೂಪರ್ ಓವರ್ ನಲ್ಲಿ ಮತ್ತೆ ಸೋಲು: ಕೊಹ್ಲಿಗೆ ಕನಿಕರ ಅನ್ನೋದೇ ಇಲ್ಲ!

ದಕ್ಷಿಣ ಆಫ್ರಿಕಾದ ಬೆನೊನಿಯಲ್ಲಿರುವ ವಿಲ್ಲೊಮೂರ್ ಪಾರ್ಕ್‌ನಲ್ಲಿ ಶುಕ್ರವಾರ (ಜನವರಿ 31) ನಡೆದ ಸೂಪರ್ ಲೀಗ್ ಕ್ವಾರ್ಟರ್ ಫೈನಲ್-4 ಪಂದ್ಯದಲ್ಲಿ ಮೊಹಮ್ಮದ್ ಅಮೀರ್ ಖಾನ್ ಪಡೆದ ವಿಕೆಟ್‌, ಮುಹಮ್ಮದ್ ಹುರೈರಾ ಅರ್ಧ ಶತಕ ರನ್‌ ಕೊಡುಗೆ ಪಾಕಿಸ್ತಾನಕ್ಕೆ ಗೆಲುವು ತಂದಿದೆ.

2 ಸೂಪರ್ ಓವರ್, 2 ಗೆಲುವು: ನಾಲ್ಕನೇ ಟಿ20ಯಲ್ಲಿ ಇತಿಹಾಸ ಬರೆದ ಭಾರತ2 ಸೂಪರ್ ಓವರ್, 2 ಗೆಲುವು: ನಾಲ್ಕನೇ ಟಿ20ಯಲ್ಲಿ ಇತಿಹಾಸ ಬರೆದ ಭಾರತ

ಹಾಲಿ ಚಾಂಪಿಯನ್ಸ್ ಭಾರತ ಈ ಬಾರಿಯ ಟೂರ್ನಿಯಲ್ಲಿ ಯಾವ ಪಂದ್ಯದಲ್ಲೂ ಸೋತಿಲ್ಲ. ಹೀಗಾಗಿ ಭಾರತ-ಪಾಕ್ ಮುಖಾಮುಖಿ ಪಂದ್ಯ ಕುತೂಹಲ ಮೂಡಿಸಿದೆ.

ಅಫ್ಘಾನ್ ನೀರಸ ಬ್ಯಾಟಿಂಗ್

ಅಫ್ಘಾನ್ ನೀರಸ ಬ್ಯಾಟಿಂಗ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ, ಫರ್ಹಾನ್ ಜಖಿಲ್ 40, ರಹಮನುಲ್ಲ 29, ಆಬಿದ್ ಮೊಹಮ್ಮದಿ 28, ಮೊಹಮ್ಮದ್ ಇಶಾಕ್ 15, ಅಬ್ದುಲ್ ರಹ್ಮಾನ್ 30 ರನ್‌ನೊಂದಿಗೆ 49.1 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 189 ರನ್ ಮಾಡಿತು.

ಹುರೈರಾ ಅರ್ಧ ಶತಕದಾಟ

ಹುರೈರಾ ಅರ್ಧ ಶತಕದಾಟ

ಗುರಿ ಬೆಂಬತ್ತಿದ ಪಾಕಿಸ್ತಾನ, ಹೈದರ್ ಅಲಿ 28, ಮುಹಮ್ಮದ್ ಹುರೈರಾ 64, ರೊಹೈಲ್ ನಝೀರ್ 22, ಕಾಸಿಮ್ ಅಕ್ರಮ್ 25, ಮೊಹಮ್ಮದ್ ಹ್ಯಾರಿಸ್ 29 ರನ್‌ ಕೊಡುಗೆಯೊಂದಿಗೆ 41.1ನೇ ಓವರ್‌ಗೆ 4 ವಿಕೆಟ್‌ ನಷ್ಟದಲ್ಲಿ 190 ರನ್‌ ಬಾರಿಸಿ ಗೆಲುವು ಸಂಭ್ರಮಿಸಿತು.

ಅಮೀರ್ ಮಾರಕ ಬೌಲಿಂಗ್

ಅಮೀರ್ ಮಾರಕ ಬೌಲಿಂಗ್

ಅಫ್ಘಾನ್‌ ಇನ್ನಿಂಗ್ಸ್‌ನಲ್ಲಿ ಪಾಕ್‌ನ ಮೊಹಮ್ಮದ್ ಅಮೀರ್ ಖಾನ್ 3, ಫಹಾದ್ ಮುನೀರ್ 2, ತಾಹಿರ್ ಹುಸೇನ್, ಅಬ್ಬಾಸ್ ಅಫ್ರಿದಿ, ಅಮಿರ್ ಅಲಿ, ಕಾಸಿಮ್ ಅಕ್ರಮ್ ತಲಾ 1 ವಿಕೆಟ್ ಪಡೆದರೆ, ಪಾಕ್‌ ಇನ್ನಿಂಗ್ಸ್‌ನಲ್ಲಿ ಅಫ್ಘಾನ್‌ನ ನೂರ್ ಅಹ್ಮದ್‌ಗೆ 2 ವಿಕೆಟ್‌ ಲಭಿಸಿತು. ಮುಹಮ್ಮದ್ ಹುರೈರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಭಾರತ-ಪಾಕ್‌ ಮುಖಾಮುಖಿ

ಭಾರತ-ಪಾಕ್‌ ಮುಖಾಮುಖಿ

ಸದ್ಯದ ಅಂಕಪಟ್ಟಿಯಲ್ಲಿ ಗ್ರೂಪ್ 'ಎ'ಯಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ, ಗ್ರೂಪ್‌ 'ಸಿ'ಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಪಾಕಿಸ್ತಾನ ವಿರುದ್ಧ ಫೆಬ್ರವರಿ 4ರ ಮಂಗಳವಾರ 1.30 pmಗೆ ಸೆಮಿಫೈನಲ್ ಪಂದ್ಯವನ್ನಾಡಲಿದೆ. ಭಾರತ ಆಡಿದ 3ರಲ್ಲಿ 3 ಪಂದ್ಯ ಕೂಡ ಗೆದ್ದಿದೆ. ಪಾಕ್‌, 3ರಲ್ಲಿ 2 ಪಂದ್ಯ ಗೆದ್ದಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Saturday, February 1, 2020, 11:49 [IST]
Other articles published on Feb 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X