ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ಹೊಸ ನಾಯಕನ ಹೆಸರು ಪ್ರಕಟ, ಡೇವಿಡ್ ವಾರ್ನರ್, ಸ್ಟೀವ್‌ ಸ್ಮಿತ್‌ಗೆ ಶಾಕ್

Pat Cummins Named Has New ODI Captain For Australia Till 2023 ODI World Cup

ಆಸ್ಟ್ರೇಲಿಯಾ ಏಕದಿನ ಅಂತಾರಾಷ್ಟ್ರೀಯ ತಂಡದ ನಾಯಕನಾಗಿ ಪಾಟ್ ಕಮಿನ್ಸ್‌ರನ್ನು ನೇಮಿಸಲಾಗಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಪಾಟ್ ಕಮಿನ್ಸ್ ನಿರ್ವಹಿಸಲಿದ್ದಾರೆ.

ಕಳೆದ ವರ್ಷ ಅವರನ್ನು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಈಗ, ಅವರನ್ನು ಏಕದಿನ ಮಾದರಿಗೂ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಇಂಗಿತ ವ್ಯಕ್ತಪಡಿಸಿದ್ದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್‌ರನ್ನು ಆಸ್ಟ್ರೇಲಿಯಾ ಗಣನೆಗೆ ತೆಗೆದುಕೊಂಡಿಲ್ಲ. ಇಬ್ಬರೂ ಕೂಡ ಈ ಮೊದಲು ಆಸ್ಟ್ರೇಲಿಯಾ ತಂಡಕ್ಕೆ ನಾಯಕರಾಗಿದ್ದವರು.

T20 World Cup 2022, IND vs AUS: ರೋಹಿತ್ ಶರ್ಮಾ ಚಿಂತೆ ದೂರ ಮಾಡಿದ ಮೊದಲನೇ ಅಭ್ಯಾಸ ಪಂದ್ಯT20 World Cup 2022, IND vs AUS: ರೋಹಿತ್ ಶರ್ಮಾ ಚಿಂತೆ ದೂರ ಮಾಡಿದ ಮೊದಲನೇ ಅಭ್ಯಾಸ ಪಂದ್ಯ

ಆರನ್ ಫಿಂಚ್ ಆಸ್ಟ್ರೇಲಿಯಾ ಟಿ20 ತಂಡದ ನಾಯಕರಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸುವ ಸಲುವಾಗಿ ಏಕದಿನ ಕ್ರಿಕೆಟ್‌ಗೆ ಅವರು ವಿದಾಯ ಘೋಷಿಸಿದರು. ಫಿಂಚ್ ವಿದಾಯದಿಂದ ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಏಕದಿನ ಕ್ರಿಕೆಟ್‌ಗೆ ನಾಯಕನನ್ನು ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು.

ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಿಚ್ ಮಾರ್ಷ್ ಅವರಂತಹ ಇತರ ಅಭ್ಯರ್ಥಿಗಳ ಹೆಸರುಗಳು ಏಕದಿನ ನಾಯಕತ್ವಕ್ಕೆ ಮುಂಚೂಣಿಯಲ್ಲಿದ್ದವು. ಅಂತಿಮವಾಗಿ ಪಾಟ್ ಕಮಿನ್ಸ್‌ಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಬೋರ್ಡ್ ತನ್ನ ನೀತಿ ಸಂಹಿತೆಗೆ ಬದಲಾವಣೆಯನ್ನು ಪರಿಗಣಿಸಿದಾಗ ಡೇವಿಡ್ ವಾರ್ನರ್ ಅವರ ಜೀವಮಾನದ ನಾಯಕತ್ವದ ನಿಷೇಧವನ್ನು ಪರಿಗಣಿಸಲು ಸಾಧ್ಯವಾಗಲಿಲ್ಲ.

 ಮೊದಲ ಬಾರಿಗೆ ವೇಗದ ಬೌಲರ್ ನಾಯಕನಾಗಿ ಆಯ್ಕೆ

ಮೊದಲ ಬಾರಿಗೆ ವೇಗದ ಬೌಲರ್ ನಾಯಕನಾಗಿ ಆಯ್ಕೆ

ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ಗೆ 27ನೇ ನಾಯಕನಾಗಿ ಪಾಟ್‌ ಕಮಿನ್ಸ್ ಆಯ್ಕೆಯಾಗಿದ್ದಾರೆ. ಕಮಿನ್ಸ್ ಆಸ್ಟ್ರೇಲಿಯಾ ತಂಡದ ನಾಯಕತ್ವ ಪಡೆದ ಮೊದಲನೇ ವೇಗದ ಬೌಲರ್ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ.

90ರ ದಶಕದ ಕೊನೆಯಲ್ಲಿ ಶೇನ್‌ ವಾರ್ನ್ 11 ಏಕದಿನ ಪಂದ್ಯಗಳಿಗೆ ಆಸ್ಟ್ರೇಲಿಯಾದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ, ಅವರು ಸ್ಪಿನ್ನರ್ ಆಗಿದ್ದರು. ಶೇನ್‌ ವಾರ್ನ್ ಆಸ್ಟ್ರೇಲಿಯಾ ನಾಯಕತ್ವ ವಹಿಸಿಕೊಂಡ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

T20 World Cup: ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾ

ಉಪನಾಯಕನನ್ನು ಹೆಸರಿಸದ ಕ್ರಿಕೆಟ್ ಆಸ್ಟ್ರೇಲಿಯಾ

ಉಪನಾಯಕನನ್ನು ಹೆಸರಿಸದ ಕ್ರಿಕೆಟ್ ಆಸ್ಟ್ರೇಲಿಯಾ

ನಾಯಕನನ್ನು ಹೆಸರಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸದ್ಯಕ್ಕೆ ಉಪನಾಯಕನನ್ನು ಆಯ್ಕೆ ಮಾಡಿಲ್ಲ. ಆದರೂ ಆಸ್ಟ್ರೇಲಿಯಾದ ಮುಂಬರುವ ಇತರೆ ಸರಣಿಗಳಿಗೆ ನಾಯಕತ್ವ ವಹಿಸಲು ಇತರೆ ಆಟಗಾರರ ಮೇಲೆ ಒಲವು ತೋರಿಸುವ ನಿರೀಕ್ಷೆ ಇದೆ.

"ತುಂಬಾ ಕ್ರಿಕೆಟ್ ನಡೆಯುತ್ತಿರುವಾಗ ಸ್ವಲ್ಪ ವಿಭಿನ್ನವಾಗಿ ನೋಡಬೇಕಾಗಿದೆ, ಬೇರೆಯವರಿಗೂ ನಾಯಕತ್ವ ನೀಡುವ ಬಗ್ಗೆ ಚಿಂತಿಸಬೇಕು" ಎಂದು ಪಾಟ್ ಕಮ್ಮಿನ್ಸ್ ಹೇಳಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಮುಂದಿನ ದಿನಗಳಲ್ಲಿ ನಡೆಯುವ ಸರಣಿಗಳಲ್ಲಿ ಇತರರನ್ನು ನಾಯಕರನ್ನಾಗಿ ನೇಮಿಸುವ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆ ಇದೆ.

ಟೆಸ್ಟ್ ಕ್ರಿಕೆಟ್ ಬಗ್ಗೆ ಕಮ್ಮಿನ್ಸ್ ಆಸಕ್ತಿ

ಟೆಸ್ಟ್ ಕ್ರಿಕೆಟ್ ಬಗ್ಗೆ ಕಮ್ಮಿನ್ಸ್ ಆಸಕ್ತಿ

"ಪ್ರತಿಯೊಂದು ಆಟವನ್ನು ಆಡುವುದು ವಾಸ್ತವಿಕವಲ್ಲ. ನಾವು ಎಲ್ಲಾ ಮೂರು ಸ್ವರೂಪಗಳನ್ನು ಆಡುವ ಬೆರಳೆಣಿಕೆಯಷ್ಟು ಆಟಗಾರರನ್ನು ಹೊಂದಿದ್ದೇವೆ. ಇಂತಹ ವರ್ಷದಲ್ಲಿ ಟಿ 20 ವಿಶ್ವಕಪ್‌ಗೆ ಗಮನ ಸೆಳೆಯುತ್ತದೆ. ಮುಂದಿನ ವರ್ಷ ಏಕದಿನ ವಿಶ್ವಕಪ್‌ನೊಂದಿಗೆ ಭಿನ್ನವಾಗಿರಬಹುದು. ಆದರೆ ಮುಂದಿನ ಆರು ತಿಂಗಳಲ್ಲಿ 15 ಟೆಸ್ಟ್ ಪಂದ್ಯಗಳನ್ನು ಆಸ್ಟ್ರೇಲಿಯಾ ಆಡಲಿದೆ. ಆದ್ದರಿಂದ ಪ್ರತಿ ಪಂದ್ಯವನ್ನು ಆಡಲು ನೀವು ನಿರೀಕ್ಷಿಸಬಹುದು ಎಂದು ನಾನು ಭಾವಿಸುವುದಿಲ್ಲ." ಎಂದು ಕಮಿನ್ಸ್ ಹೇಳಿದ್ದಾರೆ.

ಕಳೆದ ವರ್ಷ ಆಶಸ್‌ನ ಮುನ್ನಾದಿನದಂದು ಟಿಮ್ ಪೈನ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಕಮ್ಮಿನ್ಸ್ ಅವರು ಟೆಸ್ಟ್ ತಂಡದ ಶಾಂತ ನಾಯಕತ್ವದಿಂದ ಪ್ರಭಾವಿತರಾಗಿದ್ದಾರೆ ಮತ್ತು ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 1-0 ಗೆಲುವಿನ ಮೂಲಕ ಏಷ್ಯಾದಲ್ಲಿ ತಮ್ಮ ಮೊದಲ ಟೆಸ್ಟ್ ಸರಣಿ ಗೆಲುವಿಗೆ ಕಾರಣರಾದರು.

ನಾಯಕನಾಗಿ ಅತ್ಯುತ್ತಮ ನಿರ್ವಹಣೆ

ನಾಯಕನಾಗಿ ಅತ್ಯುತ್ತಮ ನಿರ್ವಹಣೆ

"ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡ ನಂತರ ಪ್ಯಾಟ್ ಅತ್ಯುತ್ತಮ ಕೆಲಸ ಮಾಡಿದ್ದಾರೆ ಮತ್ತು ಭಾರತದಲ್ಲಿ 2023 ರ ವಿಶ್ವಕಪ್‌ಗೆ ಏಕದಿನ ತಂಡವನ್ನು ಮುನ್ನಡೆಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಆಯ್ಕೆ ಮುಖ್ಯಸ್ಥ ಜಾರ್ಜ್ ಬೈಲಿ ಹೇಳಿದ್ದಾರೆ.

ತಮ್ಮ ಕ್ರಿಕೆಟ್‌ನ ಆರಂಭದ ದಿನಗಳಲ್ಲಿ ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ನಂತರ ಆಸ್ಟ್ರೇಲಿಯಾದ ಪ್ರಮುಖ ಬೌಲರ್ ಆಗಿ ರೂಪುಗೊಂಡರು.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಮತ್ತು ಮುಂದಿನ ವರ್ಷದ ವಿಶ್ವಕಪ್‌ಗೆ ಮುನ್ನಡೆಸುವಲ್ಲಿ ಏಕದಿನ ತಂಡದಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.

Story first published: Tuesday, October 18, 2022, 8:59 [IST]
Other articles published on Oct 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X