ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2023: ಬಿಸಿಸಿಐ ಮುಂದೆ ಪಿಸಿಬಿ ಆಟ ನಡೆಯಲ್ಲ ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

PCB Must Accept What The BCCI Says: Former Pakistan Cricketer Danish Kaneria

ಏಷ್ಯಾ ಕಪ್ 2023 ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ.

ಈವರೆಗೆ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಬೌಲರ್‌ಗಳು ಇವರುಈವರೆಗೆ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಬೌಲರ್‌ಗಳು ಇವರು

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಕ್ಟೋಬರ್ 18 ರಂದು ಮಂಗಳವಾರ, ಭಾರತ ತಂಡವು 2023ರ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದರು.

ಪಂದ್ಯಾವಳಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸಿದರೆ ಭಾರತ ತಂಡ ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತದೆ ಎಂದು ಜಯ್‌ ಶಾ ಹೇಳಿದ್ದರು. ಯಾವುದೇ ಕಾರಣಕ್ಕೂ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಅವರು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

ಜಯ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕನೇರಿಯಾ, "ಬಿಸಿಸಿಐ ವಿಶ್ವದ ಅತ್ಯಂತ ಶಕ್ತಿಶಾಲಿ ಮಂಡಳಿಯಾಗಿದ್ದು, ಇತರ ಎಲ್ಲ ತಂಡಗಳು ಅವರ ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಸೂಚಿಸಿದರು. ಪಾಕಿಸ್ತಾನ ಮಂಡಳಿಯು ಬಿಸಿಸಿಐಗಿಂತ ತುಂಬಾ ದುರ್ಬಲವಾಗಿರುವುದರಿಂದ ಪ್ರತೀಕಾರ ತೀರಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಸಿಸಿಐ ತುಂಬಾ ಬಲಿಷ್ಠವಾಗಿದೆ

ಬಿಸಿಸಿಐ ತುಂಬಾ ಬಲಿಷ್ಠವಾಗಿದೆ

ಬಿಸಿಸಿಐ ತಾನು ಹೇಳಿದಂತೆ ಮಾಡಬಲ್ಲದು. ಅದು ವಿಶ್ವದ ಅತ್ಯಂತ ಶ್ರೀಮಂತ ಮಂಡಳಿಯಾಗಿರುವುದರಿಂದ ಪಿಸಿಬಿ ಯಾವುದೇ ಆಕ್ಷೇಪಣೆ ಮಾಡಿದರೂ ಅದು ಲೆಕ್ಕಕ್ಕಿಲ್ಲ. ಎಲ್ಲಾ ಇತರ ಮಂಡಳಿಗಳು ಅವರು ಹೇಳಿದ್ದನ್ನು ಒಪ್ಪಿಕೊಳ್ಳಬೇಕು. ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್, ಈ ಎಲ್ಲಾ ಮಂಡಳಿಗಳು ಬಿಸಿಸಿಐ ಜೊತೆಯಲ್ಲಿವೆ, ಏಕೆಂದರೆ ಬಿಸಿಸಿಐ ಇಲ್ಲದೆ ಏನೂ ಇಲ್ಲ ಎಂದು ದ್ಯಾನಿಶ್ ಕನೇರಿಯಾ ಹೇಳಿದ್ದಾರೆ.

ಪಿಸಿಬಿ ಆಕ್ಷೇಪಣೆ ಮಾಡಿದರೂ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಯಾಕೆಂದರೆ ಬಿಸಿಸಿಐ ತನ್ನ ನಿರ್ಧಾರವನ್ನು ಬದಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪಾಕ್‌ನ ಮೊಹಮ್ಮದ್ ರಿಜ್ವಾನ್‌ಗೆ ಬೌಲ್‌ ಮಾಡಲು ಬಯಸಿದ ಭಾರತೀಯ: ರಿಜ್ವಾನ್ ಉತ್ತರ ಏನಿತ್ತು ಗೊತ್ತಾ?

ರಾಜಕೀಯ ಸನ್ನಿವೇಶದಿಂದ ಈ ರೀತಿಯಾಗಿದೆ

ರಾಜಕೀಯ ಸನ್ನಿವೇಶದಿಂದ ಈ ರೀತಿಯಾಗಿದೆ

"ಭಾರತೀಯ ಮಂಡಳಿಯು ತುಂಬಾ ಶಕ್ತಿಶಾಲಿಯಾಗಿದೆ, ಆದರೆ ಪಾಕಿಸ್ತಾನಿ ಮಂಡಳಿಯು ಸಾಕಷ್ಟು ದುರ್ಬಲವಾಗಿದೆ. ಅವರು ಬಿಸಿಸಿಐ ಏನು ಹೇಳುತ್ತದೋ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಮತ್ತು ಅದನ್ನು ಕೆಟ್ಟದಾಗಿ ಭಾವಿಸುವ ಅಗತ್ಯವಿಲ್ಲ, ಏಕೆಂದರೆ ಇದು ಎರಡು ದೇಶಗಳ ನಡುವಿನ ರಾಜಕೀಯ ಸನ್ನಿವೇಶದಿಂದಾಗಿ ಈ ರೀತಿಯಾಗುತ್ತಿದೆ" ಎಂದು ಹೇಳಿದರು.

2008ರಲ್ಲಿ ಏಷ್ಯಾಕಪ್‌ಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಕೊನೆಯ ಬಾರಿಗೆ ಭೇಟಿ ನೀಡಿತ್ತು. 2012-13ರಲ್ಲಿ ಪಾಕಿಸ್ತಾನ ಭಾರತದ ಪ್ರವಾಸದ ನಂತರ ಏಷ್ಯಾದ ಎರಡು ರಾಷ್ಟ್ರಗಳು ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಿಲ್ಲ.

ಏಷ್ಯಾ ಕಪ್ 2023ರ ಆತಿಥ್ಯವನ್ನು ಪಾಕಿಸ್ತಾನ ವಹಿಸುತ್ತಿದೆ. ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಭಾರತವು ಈ ಟೂರ್ನಿಗಾಗಿ ತಮ್ಮ ನೆರೆಯ ದೇಶಕ್ಕೆ ಭೇಟಿ ನೀಡಲು ಒಪ್ಪುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು.

ತಟಸ್ಥ ಸ್ಥಳದಲ್ಲಿ ಬಿಸಿಸಿಐ-ಪಿಸಿಬಿ ಸಭೆ ನಡೆಸಲಿ

ತಟಸ್ಥ ಸ್ಥಳದಲ್ಲಿ ಬಿಸಿಸಿಐ-ಪಿಸಿಬಿ ಸಭೆ ನಡೆಸಲಿ

ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವುದು ಭಾರತ ಮತ್ತು ಪಾಕಿಸ್ತಾನಕ್ಕೆ ನಿರ್ಣಾಯಕವಾಗಿದೆ ಎಂದು ಕನೇರಿಯಾ ಹೇಳಿದರು.

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಧಾನ ಕಚೇರಿಯನ್ನು ಹೊಂದಿರುವ ದುಬೈನಲ್ಲಿ ಬಿಸಿಸಿಐ ಮತ್ತು ಪಿಸಿಬಿ ಸಭೆ ಏರ್ಪಡಿಸಬೇಕು ಎಂದು ಅವರು ಸಲಹೆ ನೀಡಿದರು. ಎರಡೂ ದೇಶಗಳ ರಾಜತಾಂತ್ರಿಕರು ಸಭೆಯಲ್ಲಿ ಭಾಗವಹಿಸಿ ಪರಿಹಾರವನ್ನು ಪಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಟಿ20 ವಿಶ್ವಕಪ್ 2022 ರ ತಮ್ಮ ಆರಂಭಿಕ ಮುಖಾಮುಖಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಬಹು ನಿರೀಕ್ಷಿತ ಸ್ಪರ್ಧೆಯು ಭಾನುವಾರ, ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

Story first published: Wednesday, October 19, 2022, 8:04 [IST]
Other articles published on Oct 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X