ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಮರುವೇಳಾಪಟ್ಟಿಗೆ ಪಾಕಿಸ್ತಾನ ಕ್ರಿಕೆಟ್‌ ಬೆಂಬಲವಿಲ್ಲ

PCB would not support rescheduling of T20 World Cup

ಲಾಹೋರ್, ಮೇ 27: ಈ ವರ್ಷ ನಡೆಯಬೇಕಿರುವ ಟಿ20 ವಿಶ್ವಕಪ್‌ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡಿ, ಮರು ವೇಳಾಪಟ್ಟಿ ತಯಾರಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (ಪಿಸಿಬಿ) ಯಾವುದೇ ರೀತಿಯಲ್ಲಿ ಬೆಂಬಲಿಸುತ್ತಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಹೇಳಿದೆ. ಕೊರೊನಾವೈರಸ್ ಕಾರಣ ಟಿ20 ವಿಶ್ವಕಪ್ ವೇಳಾಪಟ್ಟಿ ಬದಲಾಗುವುದರಲ್ಲಿದೆ.

2007ರ ವಿಶ್ವಕಪ್ ಪಂದ್ಯ ಸ್ಮರಿಸಿ ಭಾರತಕ್ಕೆ ಕುಟುಕಿದ ಮುಷ್ಫಿಕರ್ ರಹೀಮ್2007ರ ವಿಶ್ವಕಪ್ ಪಂದ್ಯ ಸ್ಮರಿಸಿ ಭಾರತಕ್ಕೆ ಕುಟುಕಿದ ಮುಷ್ಫಿಕರ್ ರಹೀಮ್

ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಬದಲಾದರೆ ಅಂತಾರಾಷ್ಟ್ರೀಯ ಕ್ಯಾಲೆಂಡರ್‌ನ ಎಲ್ಲಾ ಪಂದ್ಯಗಳಿಗೆ ಹೊಡೆತ ಬೀಳುವುದರಿಂದ ನಾವು ಪ್ರತಿಷ್ಠಿತ ಟೂರ್ನಿಯ ಮರು ವೇಳಾಪಟ್ಟಿಗೆ ಬೆಂಬಲಿಸುತ್ತಿಲ್ಲ ಎಂದು ಪಾಕ್ ಕ್ರಿಕೆಟ್‌ ಬೋರ್ಡ್‌ ತಿಳಿಸಿದೆ. ಈಗಿನ ವೇಳಾಪಟ್ಟಿ ಪ್ರಕಾರ ಟಿ20 ವಿಶ್ವಕಪ್‌ ಅಕ್ಟೋಬರ್‌ನಿಂದ ನವೆಂಬರ್ ಮಧ್ಯೆ ನಡೆಯಲಿದೆ.

ಅಖ್ತರ್ ಬೌನ್ಸರ್‌ಗೆ ಸಚಿನ್ ಕಣ್ಣುಮುಚ್ಚಿದ್ದರು: ಭಾರತ-ಪಾಕ್ ಪಂದ್ಯ ನೆನೆದ ಆಸಿಫ್!ಅಖ್ತರ್ ಬೌನ್ಸರ್‌ಗೆ ಸಚಿನ್ ಕಣ್ಣುಮುಚ್ಚಿದ್ದರು: ಭಾರತ-ಪಾಕ್ ಪಂದ್ಯ ನೆನೆದ ಆಸಿಫ್!

ವರ್ಲ್ಡ್ ಟಿ20 ಟೂರ್ನಿ ನಡೆಸುವ ಬಗ್ಗೆ ಚರ್ಚಿಸಲು ಗುರುವಾರ (ಮೇ 28) ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಸಭೆ ನಡೆಸಲಿರುವುದರಿಂದ, ಅಲ್ಲಿ ಏನಾಗಲಿದೆ ಎಂದು ಕಾದು ನೋಡುವ ನಿಲುವಿಗೆ ಪಾಕಿಸ್ತಾನವಿದೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳುನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳು

'ನಾವಿನ್ನೂ ಮೇ ತಿಂಗಳಲ್ಲಿದ್ದೇವೆ. ಹಿಂದಿನ ವೇಳಾಪಟ್ಟಿಯ ಪ್ರಕಾರ ಟಿ20 ವಿಶ್ವಕಪ್‌ ನಡೆಯಲು ಇನ್ನೂ ಬಹಳಷ್ಟು ಕಾಲಾವಕಾಶವಿದೆ. ಕೊನಾವೈರಸ್ ಪಿಡುಗಿನ ಸಂದರ್ಭ ಎಲ್ಲಿಯವರೆಗೆ ಹೋಗಲಿವೆ ಎಂದು ಐಸಿಸಿ ಸದಸ್ಯರು ಕಾದು ನೋಡಲಿದ್ದಾರೆ. ಎರಡು ತಿಂಗಳ ನಂತರವೂ ಈವೆಂಟ್ ಅನ್ನು ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು,' ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Story first published: Wednesday, May 27, 2020, 23:12 [IST]
Other articles published on May 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X