ವಿಡಿಯೋ : ಬೌನ್ಸರಿಗೆ ಬೈಲಿ ಹೆಲ್ಮೆಟ್ ಹಾರಿ ಹೋದ ಕ್ಷಣ

Posted By:

ವಿಶಾಖಪಟ್ಟಣಂ, ಮೇ 18: ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ (ಆರ್ ಪಿಎಸ್) ಬ್ಯಾಟ್ಸ್ ಮನ್ ಜಾರ್ಜ್ ಬೈಲಿ ಅವರ ತಲೆ ಉಳಿದಿದೆ. ನಾಥನ್ ಕೌಲ್ಟರ್ ನೈಲ್ ಎಸೆದ ಬೌನ್ಸರ್, ಬೈಲಿ ತಲೆಗೆ ಬಡಿದು, ಹೆಲ್ಮೆಟ್ ಕಳಚಿ ಹಾರಿದೆ. ಒಟ್ಟಾರೆ ಆ ಕ್ಷಣ ಅಭಿಮಾನಿಗಳು ಬೆಚ್ಚುವಂತೆ ಮಾಡಿದ್ದು ಸುಳ್ಳಲ್ಲ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮೇ 17ರಂದು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಮಳೆಗೆ ಆಹುತಿಯಾದ ಪಂದ್ಯದಲ್ಲಿ ಪುಣೆ ಬ್ಯಾಟ್ಸ್ ಮನ್ ಜಾರ್ಜ್ ಬೈಲಿ ಆತಂಕದ ಕ್ಷಣವನ್ನು ಎದುರಿಸಿದರು. 33 ವರ್ಷ ವಯಸ್ಸಿನ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಬೈಲಿ ಅವರು ಬೌನ್ಸರ್ ಎಸೆತವನ್ನು ಎದುರಿಸಲು ಸಜ್ಜಾಗಿರಲಿಲ್ಲ.

PHOTO and VIDEO: George Bailey struck by 'pretty quick truck' in IPL 2016, helmet knocked off

ನೈಲ್ ಎಸೆತ ಬೈಲಿ ಅವರ ಹೆಲ್ಮೆಟ್ ಗ ತಂತಿಗೆ ಬಡಿದಿದೆ. ಚೆಂಡಿನ ರಭಸಕ್ಕೆ ಹೆಲ್ಮೆಟ್ ಕಳಚಿ ಹಾರಿದೆ. ಈ ಘಟನೆ ಪಂದ್ಯದ 7ನೇ ಓವರ್ ನಲ್ಲಿ ಆಯಿತು. ಮಳೆಗೆ ಆಹುತಿಯಾದ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದಂತೆ ಆರ್ ಪಿಎಸ್ ತಂಡ 19ರನ್ ಗಳಿಂದ ಗೆಲುವು ಸಾಧಿಸಿತು.

Story first published: Wednesday, May 18, 2016, 11:46 [IST]
Other articles published on May 18, 2016
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ