ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಎಸ್ಎಲ್: ಮೈದಾನದಲ್ಲಿಯೇ ಸಹ ಆಟಗಾರ ಕಮ್ರಾನ್ ಕೆನ್ನೆಗೆ ಬಾರಿಸಿದ ಪಾಕ್ ಪ್ರಮುಖ ಆಟಗಾರ!

PSL: Pakistans pacer Haris Rauf slaps his teammate Kamran Ghulam during a match

ಪಾಕಿಸ್ತಾನ್ ಸೂಪರ್ ಲೀಗ್ ಎಂಟನೇ ಆವೃತ್ತಿ ಜನವರಿ 27ರಿಂದ ಆರಂಭಗೊಂಡು ಯಶಸ್ವಿಯಾಗಿ ನಡೆಯುತ್ತಿದೆ. ಕರಾಚಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ತಂಡಗಳ ನಡುವೆ ನಡೆದ ಪಂದ್ಯದ ಮೂಲಕ ಆರಂಭವಾದ ಎಂಟನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿ ಇದೀಗ ಕ್ವಾಲಿಫೈಯರ್ ಹಂತಕ್ಕೆ ಬಂದು ತಲುಪಿದೆ. ಹೀಗೆ ಲೀಗ್ ಹಂತದ 30 ಪಂದ್ಯಗಳು ಯಶಸ್ವಿಯಾಗಿ ಮುಗಿದಿದ್ದು, ಮುಲ್ತಾನ್ ಸುಲ್ತಾನ್, ಲಾಹೋರ್ ಖಲಂದರ್ಸ್, ಪೇಶಾವರ್ ಜಲ್ಮಿ ಮತ್ತು ಇಸ್ಲಾಮಾಬಾದ್ ಯುನೈಟೆಡ್ ತಂಡಗಳು ಕ್ವಾಲಿಫೈಯರ್ ಸುತ್ತಿಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಗಿವೆ. ಕ್ವಾಲಿಫೈಯರ್ ಸುತ್ತಿನ ಮೊದಲನೇ ಪಂದ್ಯ ಫೆಬ್ರವರಿ 23ರಂದು ಮುಲ್ತಾನ್ ಸುಲ್ತಾನ್ ಮತ್ತು ಲಾಹೋರ್ ಖಲಂದರ್ಸ್ ತಂಡಗಳ ನಡುವೆ ನಡೆಯಲಿದೆ ಹಾಗೂ ದ್ವಿತೀಯ ಕ್ವಾಲಿಫೈಯರ್ ಪಂದ್ಯ ಫೆಬ್ರವರಿ 24ರಂದು ಪೇಶಾವರ್ ಜಲ್ಮಿ ಮತ್ತು ಇಸ್ಲಾಮಾಬಾದ್ ಯುನೈಟೆಡ್ ತಂಡಗಳ ನಡುವೆ ನಡೆಯಲಿದೆ.

ಐಪಿಎಲ್: ಇದುವರೆಗೆ ಒಮ್ಮೆಯೂ ಫ್ರಾಂಚೈಸಿ ಬದಲಿಸದೇ ಇರುವ ಐವರು ಆಟಗಾರರಿವರುಐಪಿಎಲ್: ಇದುವರೆಗೆ ಒಮ್ಮೆಯೂ ಫ್ರಾಂಚೈಸಿ ಬದಲಿಸದೇ ಇರುವ ಐವರು ಆಟಗಾರರಿವರು

ಹೀಗೆ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯ ಲೀಗ್ ಹಂತದ ಎಲ್ಲಾ ಪಂದ್ಯಗಳು ಸಂಪೂರ್ಣವಾಗಿ ಮುಕ್ತಾಯಗೊಳ್ಳಬೇಕೆನ್ನುವ ಸಮಯಕ್ಕೆ ಸರಿಯಾಗಿ ಸಾಮಾನ್ಯವಲ್ಲದ ಘಟನೆಯೊಂದು ನಡೆದಿದ್ದು ವಿವಾದಕ್ಕೆ ಕಾರಣವಾಗಿದೆ. ಹೌದು, ಫೆಬ್ರವರಿ 21ರ ಸೋಮವಾರದಂದು ಲಾಹೋರ್ ನಗರದ ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆದ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಪೇಶಾವರ್ ಜಲ್ಮಿ ಮತ್ತು ಲಾಹೋರ್ ಖಲಂದರ್ಸ್ ತಂಡಗಳು ಸೆಣಸಾಟ ನಡೆಸಿದವು. ಹೀಗೆ ಇತ್ತಂಡಗಳ ನಡುವೆ ನಡೆದ ಈ ಪಂದ್ಯ ಡ್ರಾ ಆಗಿ ನಂತರ ನಡೆದ ಸೂಪರ್ ಓವರ್‌ನಲ್ಲಿ ಪೇಶಾವರ್ ಜಲ್ಮಿ ಗೆದ್ದು ಬೀಗಿದೆ. ಹೀಗೆ ರೋಚಕ ಹಣಾಹಣಿಗೆ ಕಾರಣವಾದ ಈ ಪಂದ್ಯ ಆಟಗಾರರ ನಡುವೆ ಉಂಟಾದ ಮನಸ್ತಾಪದಿಂದ ಕೆಲಕಾಲ ವಿವಾದವನ್ನು ಕೂಡ ಹುಟ್ಟುಹಾಕಿತ್ತು. ಹೌದು, ಪಂದ್ಯದ ವೇಳೆಯೇ ಲಾಹೋರ್ ಖಲಂದರ್ಸ್ ತಂಡದ ಪ್ರಮುಖ ವೇಗಿ ಹ್ಯಾರಿಸ್ ರೌಫ್ ತನ್ನದೇ ತಂಡದ ಮತ್ತೋರ್ವ ಆಟಗಾರನಾದ ಕಮ್ರಾನ್ ಗುಲಾಮ್ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಹ್ಯಾರಿಸ್ ರೌಫ್ ತಾಳ್ಮೆ ಕಳೆದುಕೊಂಡಿದ್ದಕ್ಕೆ ವಿರೋಧಗಳು ವ್ಯಕ್ತವಾಗುತ್ತಿವೆ. ಈ ಘಟನೆಯ ಕುರಿತಾದ ವಿಡಿಯೋ ಮತ್ತು ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ..

ಕ್ಯಾಚ್ ಬಿಟ್ಟದ್ದಕ್ಕೆ ಕಪಾಳಮೋಕ್ಷ ಮಾಡಿದ ಹ್ಯಾರಿಸ್ ರೌಫ್

ಕ್ಯಾಚ್ ಬಿಟ್ಟದ್ದಕ್ಕೆ ಕಪಾಳಮೋಕ್ಷ ಮಾಡಿದ ಹ್ಯಾರಿಸ್ ರೌಫ್

ಹೀಗೆ ಪಂದ್ಯದ ವೇಳೆ ಪೇಶಾವರ್ ಜಲ್ಮಿ ತಂಡದ ಬ್ಯಾಟ್ಸ್‌ಮನ್‌ ಹಜರತುಲ್ಲಾ ಝಝೈ ಹ್ಯಾರಿಸ್ ರೌಫ್ ಎಸೆತಕ್ಕೆ ಹೊಡೆತವನ್ನು ಬಾರಿಸಿದರು. ಈ ಹೊಡೆತದಲ್ಲಿ ಲಾಹೋರ್ ಖಲಂದರ್ಸ್ ತಂಡದ ಆಟಗಾರ ಕಮ್ರಾನ್ ಗುಲಾಮ್ ಕ್ಯಾಚ್ ಹಿಡಿಯಬಹುದಾದ ಅವಕಾಶವಿತ್ತು. ಆದರೆ ಈ ಅವಕಾಶವನ್ನು ಕೈಚೆಲ್ಲಿದ ಕಮ್ರಾನ್ ಗುಲಾಮ್ ನಿರಾಸೆಗೆ ಕಾರಣರಾದರು. ಇದಾದ 3 ಎಸೆತಗಳ ಬೆನ್ನಲ್ಲೇ ಹ್ಯಾರಿಸ್ ರೌಫ್ ಎಸೆದ ಮತ್ತೊಂದು ಎಸೆತಕ್ಕೆ ಪೇಶಾವರ್ ಜಲ್ಮಿ ತಂಡದ ಮತ್ತೋರ್ವ ಬ್ಯಾಟ್ಸ್‌ಮನ್‌ ಮೊಹಮ್ಮದ್ ಹ್ಯಾರಿಸ್ ಹೊಡೆತವನ್ನು ಬಾರಿಸಲು ಹೋಗಿ ಕ್ಯಾಚ್ ನೀಡಿ ಔಟ್ ಆದರು. ಈ ಸಂದರ್ಭದಲ್ಲಿ ಹ್ಯಾರಿಸ್ ರೌಫ್ ಅವರನ್ನು ಅಭಿನಂದಿಸಲು ಬಂದ ಕಮ್ರಾನ್ ಗುಲಾಮ್ ಅವರಿಗೆ ಹ್ಯಾರಿಸ್ ರೌಫ್ ಸಿಟ್ಟಿನಲ್ಲಿ ಬಾರಿಸಿದ ಘಟನೆ ನಡೆದಿದೆ. ಆ ಸಂದರ್ಭದಲ್ಲಿ ತಂಡದ ಇತರ ಆಟಗಾರರು ಹ್ಯಾರಿಸ್ ರೌಫ್ ಅವರನ್ನು ತುಸು ಸಮಾಧಾನ ಕೂಡ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಹ್ಯಾರಿಸ್ ರೌಫ್ ವಿರುದ್ಧ ಅಸಮಾಧಾನ ಕೂಡ ವ್ಯಕ್ತವಾಗುತ್ತಿದೆ.

ಪಂದ್ಯದ ಕೊನೆಯಲ್ಲಿ ಒಂದಾದ ಆಟಗಾರರು

ಪಂದ್ಯದ ಕೊನೆಯಲ್ಲಿ ಒಂದಾದ ಆಟಗಾರರು

ಹೀಗೆ ಪಂದ್ಯದ ವೇಳೆ ಕಮ್ರಾನ್ ಗುಲಾಮ್ ಮೇಲೆ ಕೈ ಬೀಸುವುದರ ಮೂಲಕ ಆಕ್ರೋಶ ಹೊರಹಾಕಿದ್ದ ಹ್ಯಾರಿಸ್ ರೌಫ್ ಪಂದ್ಯದ ಕೊನೆಯ ವೇಳೆ ರನ್ ಔಟ್ ಮಾಡುವಲ್ಲಿ ಯಶಸ್ವಿಯಾದ ಕಮ್ರಾನ್ ಗುಲಾಮ್ ಅವರನ್ನು ಅಪ್ಪಿಕೊಳ್ಳುವುದರ ಮೂಲಕ ಅಭಿನಂದನೆಯನ್ನು ಸಲ್ಲಿಸಿದರು. ಹೀಗೆ ತಾನು ಮಾಡಿದ ತಪ್ಪನ್ನು ಕೆಲ ಸಮಯದಲ್ಲಿಯೇ ಹ್ಯಾರಿಸ್ ರೌಫ್ ಸರಿಪಡಿಸಿಕೊಂಡರು.

ಹರ್ಭಜನ್ ಸಿಂಗ್ ಶ್ರೀಶಾಂತ್ ಕಪಾಳಕ್ಕೆ ಬಾರಿಸಿದ್ದನ್ನು ನೆನಪಿಸಿಕೊಂಡ ಕ್ರಿಕೆಟ್ ಪ್ರೇಕ್ಷಕರು

ಹರ್ಭಜನ್ ಸಿಂಗ್ ಶ್ರೀಶಾಂತ್ ಕಪಾಳಕ್ಕೆ ಬಾರಿಸಿದ್ದನ್ನು ನೆನಪಿಸಿಕೊಂಡ ಕ್ರಿಕೆಟ್ ಪ್ರೇಕ್ಷಕರು

ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿ ಈ ಇಬ್ಬರೂ ಆಟಗಾರರ ನಡುವಿನ ಘಟನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿನ ಕ್ರಿಕೆಟ್ ಪ್ರೇಕ್ಷಕರು ಐಪಿಎಲ್ ಉದ್ಘಾಟನಾ ಆವೃತ್ತಿಯ ಪಂದ್ಯವೊಂದರಲ್ಲಿ ಪಂಜಾಬ್ ತಂಡದ ಆಟಗಾರನಾಗಿದ್ದ ಶ್ರೀಶಾಂತ್ ಮೇಲೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹರ್ಭಜನ್ ಸಿಂಗ್ ಕೈ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.

Story first published: Tuesday, February 22, 2022, 20:28 [IST]
Other articles published on Feb 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X