ಬಿಸಿಸಿಐ ಕೋವಿಡ್-19 ಟಾಸ್ಕ್‌ಫೋರ್ಸ್‌ನಲ್ಲಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್

ಬೆಂಗಳೂರು, ಆಗಸ್ಟ್ 3: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಕೋವಿಡ್-19 ಹತ್ತಿಕ್ಕುವ ಸಲುವಾಗಿ ಒಂದು ಕಾರ್ಯಪಡೆಯನ್ನು (ಟಾಸ್ ಫೋರ್ಸ್) ರೂಪಿಸಿದೆ. ಈ ಕಾರ್ಯಪಡೆಯಲ್ಲಿ ಭಾರತದ ಮಾಜಿ ನಾಯಕ, ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಕೂಡ ಇದ್ದಾರೆ.
ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಯ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್, ಬಿಸಿಸಿಐಯ ಕೋವಿಡ್-19 ಟಾಸ್ಕ್ ಫೋರ್ಸ್‌ನಲ್ಲಿ ಸೇರಿದ್ದಾರೆ ಎಂದು ರಾಜ್ಯಗಳಿಗೆ ಕಳುಹಿಸಿರುವ ಸ್ಟ್ಯಾಂಡರ್ಸ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ)ನಲ್ಲಿ ಬಿಸಿಸಿಐ ತಿಳಿಸಿದೆ.
ಸ್ಟ್ಯಾಂಡರ್ಸ್ ಆಪರೇಟಿಂಗ್ ಪ್ರೊಸೀಜರ್ ಪ್ರಕಾರ, ಕ್ರಿಕೆಟಿಗರು ತಮ್ಮ ತಮ್ಮ ಕೇಂದ್ರಗಳಲ್ಲಿ ಅಭ್ಯಾಸ ಪುನರಾರಂಭಿಸುವ ಮುನ್ನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕಿದೆ. ಸ್ಟ್ಯಾಂಡರ್ಸ್ ಆಪರೇಟಿಂಗ್ ಪ್ರೊಸೀಜರ್‌ನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಸಮಸ್ಯೆ ಇರುವವರಿಗೆ ತಡೆ ವಿಧಿಸಲಾಗಿದೆ.
ಬೆಂಗಳೂರಿನ ಎನ್‌ಸಿಎಯಲ್ಲಿ ಅಭ್ಯಾಸ ಪುನರಾರಂಭಗೊಂಡಾಗ ಕೋವಿಡ್-19 ಟಾಸ್ಕ್ ಫೋರ್ಸ್‌ನಲ್ಲಿ ರಾಹುಲ್ ದ್ರಾವಿಡ್ ಜೊತೆ ವೈದ್ಯಕೀಯ ಅಧಿಕಾರಿಗಳು, ನೈರ್ಮಲ್ಯ ಅಧಿಕಾರಿ, ಬಿಸಿಸಿಐ ಅಧಿಕಾರಿಗಳು ಇರಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications