ರಣಜಿ ಫೈನಲಿನಲ್ಲಿ ಹ್ಯಾಟ್ರಿಕ್, ಗುರ್ಬಾನಿಯಿಂದ ಅನನ್ಯ ಸಾಧನೆ

Posted By:

ಇಂದೋರ್, ಡಿಸೆಂಬರ್ 31: ದೆಹಲಿ ವಿರುದ್ಧದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭದ ವೇಗಿ ರಜನೀಶ್
ಗುರ್ಬಾನಿ ಅವರು ಹ್ಯಾಟ್ರಿಕ್ ಪಡೆಯುವ ಮೂಲಕ ದಾಖಲೆ ಬರೆದಿದರು.

ವಿಕಾಸ್ ಶರ್ಮಾ, ನವ್ದೀಪ್ ಸೈನಿ ಹಾಗೂ ಧ್ರುವ್ ಶೋರೆ ಅವರ ವಿಕೆಟ್ ಪಡೆದ ಗುರ್ಬಾನಿ ಅವರು ರಣಜಿ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 1972ರಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ನಲ್ಲಿ ತಮಿಳುನಾಡಿನ ಬಿ. ಕಲ್ಯಾಣಸುಂದರಂ ಹ್ಯಾಟ್ರಿಕ್ ಪಡೆದಿದ್ದರು. ಸುಮಾರು 45 ವರ್ಷಗಳ ಬಳಿಕ ರಜನೀಶ್ ಇಂಥದ್ದೇ ಸಾಧನೆ ಮಾಡಿದ್ದಾರೆ.

Ranji Trophy final: Gurbani, Jaffer shine as Delhi, Vidarbha share honours

ರಜನೀಶ್ ಗುರ್ಬಾನಿಯ ಭರ್ಜರಿ ಬೌಲಿಂಗ್ ನಿಂದಾಗಿ ದೆಹಲಿ ತಂಡ 102.5 ಓವರ್ ಗಳಲ್ಲಿ 295 ರನ್ ಗಳಿಗೆ ಆಲೌಟ್ ಆಯಿತು. ಧ್ರುವ್ ಶೋರೆ 145ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರೂ ದೆಹಲಿ ತಂಡಕ್ಕೆ ಲಾಭವಾಗಲಿಲ್ಲ.

ಹ್ಯಾಟ್ರಿಕ್ ನೊಂದಿಗೆ ರಜನೀಶ್ 59 ರನ್ನಿತ್ತು 6 ವಿಕೆಟ್ ಕಬಳಿಸಿದರು. ವಿದರ್ಭ ಪರ ನಾಯಕ ಫಜಲ್ 67ರನ್, ವಾಸೀಂ ಜಾಫರ್ 78, ಸರ್ವಾತೆ 79, ವಾಡ್ಕರ್ ಅಜೇಯ 128 ಹಾಗೂ ಸಿದ್ದೇಶ್ ನೆರ್ವಾಲ್ ಅಜೇಯ 55 ರನ್ ಗಳಿಸಿದ್ದಾರೆ. ಮೂರನೇ ದಿನದ ಅಂತ್ಯಕ್ಕೆ 522ರನ್ ಗಳಿಸಿದ್ದು 233ಕ್ಕೂ ಅಧಿಕ ರನ್ ಮುನ್ನಡೆ ಗಳಿಸಿದೆ.

Story first published: Sunday, December 31, 2017, 16:55 [IST]
Other articles published on Dec 31, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ