ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ದಾಖಲೆ ಸಮಗಟ್ಟಿದ ವಿನಯ್ ಕುಮಾರ್

By Mahesh

ಮುಂಬೈ, ಮಾ.11: ಕರುಣ್ ನಾಯರ್ ಭರ್ಜರಿ ತ್ರಿಶತಕ, ವಿನಯ್ ಕುಮಾರ್ ಶತಕದ ಮೂಲಕ ರಣಜಿ ಫೈನಲ್ ಪಂದ್ಯದ ನಾಲ್ಕನೆ ದಿನವೂ ತಮಿಳುನಾಡು ಮೇಲೆ ಕರ್ನಾಟಕ ಮೇಲುಗೈ ಸಾಧಿಸಿತು.

ಗುಲಾಂ ಮಹಮ್ಮದ್ ಅವರ ದಾಖಲೆ ಮುರಿದು ಕರುಣ್ ಔಟಾದರೆ, ವಿನಯ್ ಕುಮಾರ್ ಅವರು ವಿಜಯ್ ಹಜಾರೆ ಅವರ ಸಾಧನೆ ಸಮಗಟ್ಟಿದರು. ನಾಲ್ಕನೇ ದಿನದ ಅಂತ್ಯಕ್ಕೆ ಕರ್ನಾಟಕ 762 ಸ್ಕೋರ್ ಮಾಡಿ ಆಲೌಟ್ ಆಗಿದೆ. ಈ ಮೂಲಕ ತಮಿಳುನಾಡಿಗೆ 626 ರನ್ ಗಳ ಗುರಿಯನ್ನ್ ನೀಡಲಾಗಿದೆ.

626ರನ್ ಗುರಿ ಬೆನ್ನು ಹತ್ತಿದ ತಮಿಳುನಾಡು ತಂಡ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಎರಡನೇ ಇನ್ನಿಂಗ್ಸ್ ನಲ್ಲಿ 40 ಓವರ್ ಗಳಲ್ಲಿ 113/3 ಗಳಿಸಿದೆ. ಸ್ಪಿನ್ನರ್ ಶ್ರೇಯಸ್ ಗೋಪಾಲ್ 36ಕ್ಕೆ 2 ಹಾಗೂ ವಿನಯ್ ಕುಮಾರ್ 17ಕ್ಕೆ 1 ವಿಕೆಟ್ ಗಳಿಸಿದರು. ಬಾಬಾ ಅಪರಾಜಿತ್ 36 ರನ್ ಹಾಗೂ ವಿಜಯ್ ಶಂಕರ್ 15 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. [ಕರುಣ್ ಸಾಧನೆಯ ಮುಖ್ಯಾಂಶ ಇಲ್ಲಿ ಓದಿ]

ಕರ್ನಾಟಕ ಇನ್ನಿಂಗ್ಸ್: ಮೂರನೇ ದಿನದ ಅಂತ್ಯಕ್ಕೆ ಕರ್ನಾಟಕ 189 ಓವರ್ ಗಳಲ್ಲಿ 618/7 ಸ್ಕೋರ್ ಮಾಡಿದ್ದು, 484ರನ್ ಮುನ್ನಡೆ ಪಡೆದುಕೊಂಡಿತ್ತು. ನಾಲ್ಕನೇ ದಿನದಲ್ಲಿ ತಂಡದ ಸ್ಕೋರ್ 643 ಆಗಿದ್ದಾಗ ಕರುಣ್ ನಾಯರ್ ವಿಕೆಟ್ ಕಳೆದುಕೊಂಡಿತು.|

Ranji Trophy final 2015, Karun Nair and Vinay Kumar creates History

ಅದರೆ, 328 ರನ್ (560ಎ, 46x4,1x6) ಗಳಿಸುವ ಮೂಲಕ 1946-47ರಲ್ಲಿ ಬರೋಡಾದ ಗುಲಾಂ ಮೊಹಮ್ಮದ್ ಅವರು ನಿರ್ಮಿಸಿದ್ದ ದಾಖಲೆ (319ರನ್) ಯನ್ನು ಧೂಳಿಪಟ ಮಾಡಿದರು. ರಣಜಿ ಫೈನಲ್ ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರ ಎಂದು 23 ವರ್ಷ ವಯಸ್ಸಿನ ಕರುಣ್ ನಾಯರ್ ಹೆಸರು ದಾಖಲಾಗಿದೆ. [ಕ್ರಿಕೆಟ್ ಟಾಪ್ 10 ಪಟ್ಟಿಯಲ್ಲಿ ರಾಹುಲ್]

ವಿನಯ್ ದಾಖಲೆ: ನಾಯಕ ವಿನಯ್‌ಕುಮಾರ್ ಶತಕ 105* (319 ಎ, 10‍X4, 3X6) ಹಾಗೂ ಪಂದ್ಯದಲ್ಲಿ 5 ವಿಕೆಟ್(15.4-6-34-5) ಗಳಿಸುವ ಮೂಲಕ ರಣಜಿ ಫೈನಲ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಹಾಗೂ ಭಾರತದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

1946-47ರಲ್ಲಿ ಬರೋಡಾ ಪರ ಗುಲಾಂ ಮೊಹಮ್ಮದ್ ಅವರ ಜೊತೆಗೂಡಿ 577ರನ್ ಕಲೆಹಾಕಿ ಇಂದಿನ ತನಕ ಮುರಿದ ಜೊತೆಯಾಟ ಪ್ರದರ್ಶಿಸಿದ ದಿಗ್ಗಜ ವಿಜಯ್ ಹಜಾರೆ ಅವರು ಅದೇ ಪಂದ್ಯದಲ್ಲಿ 288ರನ್ ಹಾಗೂ 6/85 ಗಳಿಸಿ ದಾಖಲೆ ಬರೆದಿದ್ದರು. [ತ್ರಿಶತಕ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್]

ಅದರೆ, ವಿಜಯ್ ಹಜಾರೆ ಬರೋಡಾ ನಾಯಕರಾಗಿಲಿಲ್ಲ ಬಿಬಿ ನಿಂಬಾಳ್ಕರ್ ಅವರು ನಾಯಕರಾಗಿ ಕಪ್ ಎತ್ತಿದ್ದರು. ನಾಯಕರಾಗಿ ದಾಖಲೆ ಬರೆದಿದ್ದು ವಿನಯ್ ಕುಮಾರ್ ಅವರ ಹೆಗ್ಗಳಿಕೆ. ಗುರುವಾರ ಪಂದ್ಯದ ಕೊನೆದಿನ ತಮಿಳುನಾಡು ಉಳಿದ ರನ್ ಚೇಸ್ ಮಾಡಿದ ಅದೊಂದು ಪವಾಡವೇ ಸರಿ.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X