ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈಸೂರಿನಲ್ಲಿ ನವೆಂಬರ್ 28ರಿಂದ ರಣಜಿ ಕ್ರಿಕೆಟ್ ಹವಾ ಶುರು

By ಯಶಸ್ವಿನಿ ಎಂಕೆ
Ranji Trophy : Karnataka Vs Maharashtra Match from Nov 28

ಮೈಸೂರು, ನವೆಂಬರ್ 11 : ಸಾಂಸ್ಕೃತಿಕ ನಗರಿಯ ಕ್ರೀಡಾಭಿಮಾನಿಗಳಿಗೆ ಮತ್ತೆ ದೇಸಿ ಕ್ರಿಕೆಟ್‌ ಸೊಬಗು ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿದೆ. ಇದೇ ನ.28ರಿಂದ ಡಿ.1ರವರೆಗೆ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯ ನಡೆಯಲಿದೆ.

ರಾಜ್ಯ ಕ್ರಿಕೆಟ್‌ ಸಂಸ್ಥೆಯು ಈ ಬಾರಿ ಒಂದು ಪಂದ್ಯ ಆಯೋಜಿಸಲು ಅವಕಾಶ ಮಾಡಿಕೊಟ್ಟಿದೆ. ಈ ಪಂದ್ಯಕ್ಕೆ ಎರಡು ಪಿಚ್‌ಗಳು ಸಿದ್ಧ ಇವೆ. ಪರಿಶೀಲನೆಗಾಗಿ ಚೆನ್ನೈನಿಂದ ಬಿಸಿಸಿಐ ಪಿಚ್‌ ಕ್ಯೂರೇಟರ್‌ ಬರಲಿದ್ದಾರೆ ಎಂದು ಕೆಎಸ್‌ಸಿಎ ಮೈಸೂರು ವಲಯ ನಿಮಂತ್ರಕ ಆರ್‌.ಬಾಲಚಂದರ್ ತಿಳಿಸಿದರು.

ಕರ್ನಾಟಕ ತಂಡದವರು ಎಲೈಟ್‌ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಈ ಗುಂಪಿನಲ್ಲಿ ವಿದರ್ಭ, ಮುಂಬೈ, ಮಹಾರಾಷ್ಟ್ರ, ಸೌರಾಷ್ಟ್ರ, ಗುಜರಾತ್‌, ರೈಲ್ವೇಸ್‌, ಛತ್ತೀಸ್‌ಗಡ, ಬರೋಡ ತಂಡಗಳಿವೆ.

ರಣಜಿ 2018-19: ವಿದರ್ಭ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ

ಅಂತಾರಾಷ್ಟ್ರೀಯ ಆಟಗಾರರಿಂದ ಮೆಚ್ಚುಗೆಗೆ ಪಾತ್ರವಾಗಿರುವ 'ಹಸಿರು ಖನಿ' ಗ್ಲೇಡ್ಸ್‌ನಲ್ಲಿ ಈಗಾಗಲೇ ರಣಜಿ ಫೈನಲ್‌, ಕ್ವಾರ್ಟರ್‌ ಫೈನಲ್‌ ಸೇರಿದಂತೆ 12ಕ್ಕೂ ಹೆಚ್ಚು ಪಂದ್ಯಗಳನ್ನು ಆಯೋಜಿಸಲಾಗಿದೆ. 2010ರಲ್ಲಿ ಕರ್ನಾಟಕ ಹಾಗೂ ಮುಂಬೈ ತಂಡಗಳು ಫೈನಲ್‌ನಲ್ಲಿ ಪೈಪೋಟಿ ನಡೆಸಿದ್ದವು. ರಾಜ್ಯ ತಂಡದವರು ಕೇವಲ 6 ರನ್‌ಗಳಿಂದ ಸೋಲು ಕಂಡಿದ್ದರು.

ರಣಜಿ ಟ್ರೋಫಿ 2018-19 : ಕರ್ನಾಟಕದ ವೇಳಾಪಟ್ಟಿ

ವಿಜಯ ಮರ್ಚೆಂಟ್‌ ಪಂದ್ಯ: ಕೆ ಎಸ್‌ಸಿಎ ಮೈಸೂರು ವಲಯವು ವಿಜಯ ಮರ್ಚೆಂಟ್‌ ಟ್ರೋಫಿ 16 ವರ್ಷದೊ ಳಗಿನವರ ಟೂರ್ನಿಯ ಪಂದ್ಯವನ್ನೂ ಆಯೋಜಿಸುತ್ತಿದೆ. ಕರ್ನಾಟಕ ಹಾಗೂ ಪುದಚೇರಿ ನಡುವಿನ ಪಂದ್ಯ ನ.18ರಿಂದ 20ರವರೆಗೆ ನಡೆಯಲಿದೆ.

19 ವರ್ಷದೊಳಗಿನವರ ಪಂದ್ಯ ಕರ್ನಾಟಕ-ಮಧ್ಯಪ್ರದೇಶ ನಡುವೆ ಡಿ.17ರಿಂದ 20ರವರೆಗೆ, ಸಿ.ಕೆ.ನಾಯ್ಡು 23 ವರ್ಷದೊಳಗಿನವರ ಟೂರ್ನಿಯ ಪಂದ್ಯ ಕರ್ನಾಟಕ-ತಮಿಳುನಾಡು ನಡುವೆ ಜ.1ರಿಂದ 4ವರೆಗೆ ಜರುಗಲಿದೆ.

Story first published: Sunday, November 11, 2018, 10:44 [IST]
Other articles published on Nov 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X