ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಡಿಮೆ ಸಂಬಳ ನೀಡಿದರೂ ಈ ಫ್ರಾಂಚೈಸಿ ಪರವಾಗಿಯೇ ಆಡುತ್ತೇನೆ: ರಶೀದ್ ಖಾನ್ ಹೇಳಿಕೆ

Rashid Khan said he will play for a particular cricket franchise even at lowest salary

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ನರ್ ರಶೀದ್ ಖಾನ್ ವಿಶ್ವಾದ್ಯಂತ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಸಾಕಷ್ಟು ಬೇಡಿಕೆಯ ಆಟಗಾರ ಎಂಬುದು ಸ್ಪಷ್ಟ. ರಾಷ್ಟ್ರೀಯ ತಂಡ ಅಫ್ಘಾನಿಸ್ತಾನದಲ್ಲಿ ಪ್ರಮುಖ ಆಟಗಾರನಾಗಿ ಕಾಣಿಸಿಕೊಳ್ಳುವ ಜೊತೆಗೆ ಐಪಿಎಲ್ ಸೇರಿದಂತೆ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್, ವೆಸ್ಟ್ ಇಂಡೀಸ್‌ನ ಕೆರಿಬಿಯನ್ ಪ್ರೀಮಿಯರ್ ಲೀಗ್, ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಹಾಗೂ ಪಾಕಿಸ್ತಾನದ ಪಾಕಿಸ್ತಾನ್ ಸೂಪರ ಲೀಗ್ ಸೇರಿದಂತೆ ಬಹುತೇಕ ಪ್ರಮುಖ ಕ್ರಿಕೆಟ್ ಲೀಗ್‌ಗಳಲ್ಲಿ ರಶೀದ್ ಖಾನ್ ಆಡುತ್ತಾ ಮಿಂಚುಹರಿಸಿದ್ದಾರೆ.

ಈ ಎಲ್ಲಾ ಲೀಗ್ ಟೂರ್ನಿಗಳಲ್ಲಿ ಆಡುವ ರಶೀದ್ ಖಾನ್ ಒಂದು ಟೂರ್ನಿಯಲ್ಲಿ ತಾನು ಪ್ರತಿನಿಧಿಸುವ ತಂಡದ ಬಗ್ಗೆ ವಿಶೇಷ ಮಾತುಗಳನ್ನು ಆಡಿದ್ದಾರೆ. ಈ ಫ್ರಾಂಚೈಸಿ ಪರವಾಗಿ ನಾನು ಅತ್ಯಂತ ಕಡಿಮೆ ಸಂಬಾವನೆ ಪಡೆದರೂ ಆಡುತ್ತೇನೆ ಎಂದು ರಶೀದ್ ಖಾನ್ ಹೇಳಿಕೆ ನೀಡಿದ್ದಾರೆ. ಹಾಗಾದರೆ ರಶೀದ್ ಖಾನ್ ಈ ಮಾತನ್ನು ಹೇಳಿದ್ದು ಯಾವ ಫ್ರಾಂಚೈಸಿ ಬಗ್ಗೆ? ಮುಂದೆ ಓದಿ..

ಭಾರತ ವಿರುದ್ಧ ಕಣಕ್ಕಿಳಿಯುವ ಮೊದಲೇ ಲಂಕಾಗೆ ಹಿನ್ನಡೆ: ಶ್ರೀಲಂಕಾದ ಬೌಲಿಂಗ್ ಬ್ರಹ್ಮಾಸ್ತ್ರವೇ ಇಲ್ಲಭಾರತ ವಿರುದ್ಧ ಕಣಕ್ಕಿಳಿಯುವ ಮೊದಲೇ ಲಂಕಾಗೆ ಹಿನ್ನಡೆ: ಶ್ರೀಲಂಕಾದ ಬೌಲಿಂಗ್ ಬ್ರಹ್ಮಾಸ್ತ್ರವೇ ಇಲ್ಲ

ಪಾಕಿಸ್ತಾನ್ ಸೂಪರ್ ಲೀಗ್‌ ಫ್ರಾಂಚೈಸಿ ಬಗ್ಗೆ ರಶೀದ್ ಖಾನ್

ಪಾಕಿಸ್ತಾನ್ ಸೂಪರ್ ಲೀಗ್‌ ಫ್ರಾಂಚೈಸಿ ಬಗ್ಗೆ ರಶೀದ್ ಖಾನ್

ಅಫ್ಘಾನಿಸ್ತಾನ ಮೂಲದ ಯುವ ಸ್ಪಿನ್ನರ್ ರಶೀದ್ ಖಾನ್ ಪಾಕಿಸ್ತಾನ್ ಸೂಪರ್ ಲೀಗ್‌ನ ಫ್ರಾಂಚೈಸಿಯ ಬಗ್ಗೆ ಇಂತಾ ಮಾತಿಗಳನ್ನು ಆಡಿದ್ದಾರೆ. ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ರಶೀದ್ ಖಾನ್ ಲಾಹೋರ್ ಖಲಂದರ್ ತಂಡದ ಭಾಗವಾಗಿದ್ದಾರೆ. ಈ ತಂಡ ತನ್ನನ್ನು ಕಡಿಮೆ ಡ್ರಾಫ್ಟ್ ವಿಭಾಗದಲ್ಲಿ ಸೇರಿಸಿಕೊಂಡರೂ ತಾನು ಈ ತಂಡದ ಪರವಾಗಿ ಆಡಲು ಸಿದ್ಧನಿದ್ಧೇನೆ ಎಂದು ರಶೀದ್ ಖಾನ್ ತಂಡದ ಕಿರಿಯಾಗಿ ವಿಶೇಷ ಅಭಿಮಾನದ ಮಾತುಗಳನ್ನಾಡಿದ್ದಾರೆ.

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ

ವಿಶ್ವದ ಜನಪ್ರಿಯ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾಗಿರುವ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕ ತಂಡಕ್ಕೆ ಸೇರ್ಪಡೆಗೊಳಿಸಲಾಗುವುದಿಲ್ಲ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಪ್ರತಿ ವರ್ಷವೂ ಆಯೋಜಕರು ಪ್ಲೇಯರ್ಸ್ ಡ್ರಾಫ್ಟ್‌ಅನ್ನು ಸಿದ್ಧಪಡಿಸಿ ಬೇರೆ ಬೇರೆ ವಿಭಾಗದಲ್ಲಿ ಆಟಗಾರರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ. ಪ್ಲಾಟಿನಮ್ ಕೆಟಗರಿ ನಂಬರ್ 1 ವಿಭಾಗವಾಗಿದ್ದರೆ ನಂತರ ಡೈಮಂಡ್, ಗೋಲ್ಡ್, ಸಿಲ್ವರ್, ಎಮರ್ಜಿಂಗ್ ಹಾಗೂ ಸಪ್ಲಿಮೆಂಟರಿ ಈ ವಿಭಾಗಗಳಲ್ಲಿ ಆಟಗಾರರನ್ನು ವಿಂಗಡಿಸಲಾಗುತ್ತದೆ. ಪ್ಲಾಟಿನಮ್ ಕೆಟಗರಿಯಲ್ಲಿ ಬಾಬರ್ ಅಜಂ, ರಶೀದ್ ಖಾನ್ ಅವರಂತಾ ಸ್ಟಾರ್ ಆಟಗಾರರು ಇದ್ದಾರೆ. ಈ ವಿಭಾಗದಲ್ಲಿರುವ ಆಟಗಾರರು ಸುಮಾರು ಒಂದು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ ಎಂದು ವರದಿಗಳು ಹೇಳುತ್ತದೆ.

ಲಾಹೋರ್ ಖಲಂದರ್ ಪ್ರಾಂಚೈಸಿ ಬಗ್ಗೆ ಹೇಳಿದ್ದಿಷ್ಟು!

ಲಾಹೋರ್ ಖಲಂದರ್ ಪ್ರಾಂಚೈಸಿ ಬಗ್ಗೆ ಹೇಳಿದ್ದಿಷ್ಟು!

ರಶೀದ್ ಖಾನ್ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಪೂರ್ಣಗೊಳ್ಳುವ ಮುನ್ನವೇ ಪಿಎಸ್‌ಎಲ್ ತೊರೆದಿದ್ದಾರೆ. ಇದಕ್ಕೆ ಕಾರಣ ಅಫ್ಘಾನಿಸ್ತಾನ ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ರಶೀದ್ ಖಾನ್ ಹಾಜರಾಗಬೇಕಿದೆ. ಈ ಸಂದರ್ಭದಲ್ಲಿ ರಶೀದ್ ಖಾನ್ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. "ಡ್ರಾಫ್ಟ್ ವಿಭಾಗ ನನಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಲಾಹೋರ್ ಖಲಂದರ್ ಫ್ರಾಂಚೈಸಿ ನನ್ನನ್ನು ಕನಿಷ್ಟ ಡ್ರಾಫ್ಟ್ ವಿಭಾಗದಲ್ಲಿ ಹೆಸರಿಸಿದರೂ ನಾನು ಈ ತಂಡದ ಪರವಾಗಿ ಆಡಲು ಸಿದ್ಧನಿದ್ದೇನೆ" ಎಂದು ರಶೀದ್ ಖಾನ್ ಹೇಳಿಕೆ ನೀಡಿದ್ದಾರೆ.

ಟೀಂ ಇಂಡಿಯಾದ ಭವಿಷ್ಯದ ನಾಯಕರನ್ನ ಹೆಸರಿಸಿದ ರೋಹಿತ್ ಶರ್ಮ | Oneindia Kannada
ಪಿಎಸ್‌ಎಲ್ ಅರ್ಧಕ್ಕೆ ತೊರೆಯುವುದೇಕೆ ರಶೀದ್ ಖಾನ್?

ಪಿಎಸ್‌ಎಲ್ ಅರ್ಧಕ್ಕೆ ತೊರೆಯುವುದೇಕೆ ರಶೀದ್ ಖಾನ್?

ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ನೇತೃತ್ವದ ಲಾಹೋರ್ ಖಲಂದರ್ ತಂಡದ ಪ್ರಮುಖ ಸದಸ್ಯನಾಗಿರುವ ರಶೀದ್ ಖಾನ್ ಟೂರ್ನಿ ಸಂಪೂರ್ಣಗೊಳ್ಳುವ ಮುನ್ನವೇ ತೊರೆದಿದ್ದಾರೆ. ಫ್ರಾಂಚೈಸಿ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿದ್ದರೂ ರಾಷ್ಟ್ರೀಯ ತಂಡದ ಕರ್ತವ್ಯದ ಹಿನ್ನೆಲೆಯಲ್ಲಿ ರಶೀದ್ ಖಾನ್ ಟೂರ್ನಿಯಿಮದ ಈಗಾಗಲೇ ಹೊರನಡೆದಿದ್ದಾರೆ. ಬಾಂಗ್ಲಾದೇಶ ತಂಡದ ವಿರುದ್ಧ ಅಪ್ಘಾನಿಸ್ತಾನ ತಂಡ ಐಸಿಸಿ ವಿಶ್ವಕಪ್ ಸೂಪರ್ ಲೀಗ್‌ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಆಡುತ್ತಿದೆ. ಕಳೆದ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಒಂದೇ ಪಂದ್ಯವನ್ನು ಗೆಲ್ಲಲು ಕೂಡ ವಿಫಲವಾಗಿತ್ತು. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ನೇರವಾಗಿ ಅರ್ಹತೆಯನ್ನು ಪಡೆಯಬೇಕಿದ್ದರೆ ಈ ಸರಣಿಯಲ್ಲಿ ಗೆಲುವು ತಂಡಕ್ಕೆ ಅಗತ್ಯವಾಗಿದೆ. ಹಿಗಾಗಿ ಈ ಸರಣಿಯ ಮೇಲೆ ಕುತೂಹಲ ಹೆಚ್ಚಾಗಿದೆ.

Story first published: Wednesday, February 23, 2022, 20:31 [IST]
Other articles published on Feb 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X