ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ತನ್ನ ಖಾತೆಗೆ ಮತ್ತೊಂದು ಕೆಟ್ಟ ದಾಖಲೆ ಸೇರಿಸಿಕೊಂಡ ಆರ್‌ಸಿಬಿ

 RCB Conceded 100 Sixes In IPL 2022; First Team To Do In This Lague

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ತಮ್ಮ ಸಾಧನೆಗಳ ಪಟ್ಟಿಗೆ ಒಂದು ಕೆಟ್ಟ ದಾಖಲೆಯನ್ನು ಸೇರಿಸಿಕೊಂಡಿದೆ. ಆರ್‌ಸಿಬಿ ಈ 15ನೇ ಋತುವಿನಲ್ಲಿ 100 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟ ಮೊದಲ ತಂಡವಾಗಿದೆ.

ಒಂದೇ ಐಪಿಎಲ್ ಋತುವಿನಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿಕೊಂಡು ಮತ್ತೊಂದು ಕೆಟ್ಟ ದಾಖಲೆಯನ್ನು ಆರ್‌ಸಿಬಿ ತನ್ನ ಹಸರಿಗೆ ಬರೆಸಿಕೊಂಡಿತು. ಪಂಜಾಬ್ ಬ್ಯಾಟ್ಸ್‌ಮನ್‌ಗಳು ಮನಬಂದಂತೆ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದರು.

ಐಪಿಎಲ್ 15ನೇ ಋತುವಿನ 60ನೇ ಪಂದ್ಯದಲ್ಲಿ ಟಾಸ್ ಗೆದ್ದ ನಂತರ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಫೀಲ್ಡಿಂಗ್ ಆಯ್ಕೆ ಮಾಡಿದ ನಂತರ ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್ನ ಮೊದಲ ಓವರ್‌ನಲ್ಲಿ ಈ ಮೈಲಿಗಲ್ಲು ಸಾಧಿಸಿತು. ಪಂಜಾಬ್ ಕಿಂಗ್ಸ್ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಆಲ್-ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಓವರ್‌ನಲ್ಲಿ ಸ್ಮ್ಯಾಷ್ ಮಾಡಿ ಚೆಂಡನ್ನು ಲಾಂಗ್ ಆಫ್‌ಗೆ ಸಿಕ್ಸ್ ಬಾರಿಸಿದರು.

RCB vs PBKS: ಆರ್‌ಸಿಬಿ ಗೆಲ್ಲಲು ಬೃಹತ್ ಗುರಿ ನೀಡಿದ ಪಂಜಾಬ್ ಕಿಂಗ್ಸ್RCB vs PBKS: ಆರ್‌ಸಿಬಿ ಗೆಲ್ಲಲು ಬೃಹತ್ ಗುರಿ ನೀಡಿದ ಪಂಜಾಬ್ ಕಿಂಗ್ಸ್

ನಂತರ ಬೈರ್‌ಸ್ಟೋವ್ ಆರ್‌ಸಿಬಿ ಬೌಲಿಂಗ್ ಲೈನ್‌ಅಪ್ ಅನ್ನು ಮನಬಂದಂತೆ ಬಾರಿಸಲು ಮುಂದಾದರು, ಪಂಜಾಬ್ ಕಿಂಗ್ಸ್ ಆರಂಭಿಕ ನಾಲ್ಕು ಓವರ್‌ಗಳ ಒಳಗೆ ತಂಡ 50 ರನ್‌ಗಳನ್ನು ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಯಿಂದ ಗಳಿಸಿದರು.

ಆರ್‌ಸಿಬಿ ತಂಡ ಈ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡದೇ ಕಣಕ್ಕಿಳಿಯುತ್ತಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡದ ಇಂದು ಒಂದು ಬದಲಾವಣೆ ಮಾಡಿದ್ದು, ಸಂದೀಪ್ ಶರ್ಮ ಬದಲಿಗೆ ಹರ್ಪ್ರೀತ್ ಬ್ರಾರ್ ತಂಡಕ್ಕೆ ಸೇರಿದ್ದಾರೆ.

ಎರಡೂ ತಂಡಗಳು ಉಳಿದಿರುವ ಮೂರು ಪ್ಲೇಆಫ್ ಸ್ಥಾನಗಳಲ್ಲಿ ಒಂದು ಸ್ಥಾನಕ್ಕಾಗಿ ಹೋರಾಡುತ್ತಿವೆ. ಐಪಿಎಲ್ ಚೊಚ್ಚಲ ತಂಡವಾದ ಗುಜರಾತ್ ಟೈಟಾನ್ಸ್ ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎರಡನೇ ಸ್ಥಾನವನ್ನು ಮುದ್ರೆಯೊತ್ತಲು ಸಿದ್ಧವಾಗಿದೆ.

Virat Kohli ಔಟ್ ಆದ ಮೇಲೆ ಮಾಡಿದ್ದೇನು | Oneindia Kannada

ಆರ್‌ಸಿಬಿ ಸದ್ಯ ಅರ್ಹತಾ ವಲಯದಲ್ಲಿದ್ದು, 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪಂಜಾಬ್ 10 ಅಂಕಗಳೊಂದಿಗೆ ನಾಲ್ಕು ಸ್ಥಾನಗಳಿಗಿಂತ ಕೆಳಗಿದೆ ಮತ್ತು ಇದು ಸೇರಿದಂತೆ ಉಳಿದಿರುವ ಪ್ರತಿಯೊಂದು ಪಂದ್ಯದಲ್ಲೂ ಗೆಲ್ಲಲೇಬೇಕಾದ ಸನ್ನಿವೇಶವನ್ನು ಎದುರಿಸಬೇಕಾಗಿದೆ.

Story first published: Saturday, May 14, 2022, 9:28 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X